ನನ್ನಿಂದಾಗಿ ನನ್ನ ತಾಯಿ ಮದ್ಯವ್ಯಸನಿಯಾದರು, ಆದರೆ..! ಸನ್ನಿ ಲಿಯೋನ್ ಭಾವುಕ

Sunny leone Mother : ಒಂದು ಕಾಲದಲ್ಲಿ ಪೋರ್ನ್ ಸ್ಟಾರ್ ಆಗಿ ಮಿಂಚಿದ್ದ ಸನ್ನಿ ಲಿಯೋನ್‌ ಇದೀಗ ಬಾಲಿವುಡ್ ಫೇಮಸ್ ನಟಿಯರಲ್ಲಿ ಒಬ್ಬರು. ಅನೇಕ ಸಂದರ್ಶನದಲ್ಲಿ ತಮ್ಮ ಹಿನ್ನೆಲೆ ಮತ್ತು ಕುಟುಂಬದ ಬಗ್ಗೆ ಮಾತನಾಡಿರುವ ಸನ್ನಿ ಇದೀಗ ತಮ್ಮ ತಾಯಿಯ ಕುರಿತ ಗಂಭೀರ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.

Written by - Krishna N K | Last Updated : Jul 23, 2023, 08:48 PM IST
  • ಒಂದು ಕಾಲದಲ್ಲಿ ಪೋರ್ನ್ ಸ್ಟಾರ್ ಆಗಿ ಮಿಂಚಿದ್ದ ಸನ್ನಿ ಲಿಯೋನ್‌ ಇದೀಗ ಬಾಲಿವುಡ್ ಫೇಮಸ್ ನಟಿ.
  • ಸನ್ನಿ ತಮ್ಮ ಜೀವನದ ಆಘಾತಕಾರಿ ಘಟನೆಗೆಳ ಕುರಿತು ಆಗಾಗ ಸಂದರ್ಶನಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತಾರೆ.
  • ಇದೀಗ ಅವರು, ತಮ್ಮ ತಾಯಿಯ ಕುಡಿತದ ಚಟದ ಬಗ್ಗೆ ಮಾತನಾಡಿದ್ದಾರೆ.
ನನ್ನಿಂದಾಗಿ ನನ್ನ ತಾಯಿ ಮದ್ಯವ್ಯಸನಿಯಾದರು, ಆದರೆ..! ಸನ್ನಿ ಲಿಯೋನ್ ಭಾವುಕ title=

Sunny leone family : ಬಾಲಿವುಡ್‌ ನಟಿ ಸನ್ನಿ ಲಿಯೋನ್ ತಮ್ಮ ಜೀವನದ ಆಘಾತಕಾರಿ ಘಟನೆಗೆಳ ಕುರಿತು ಆಗಾಗ ಸಂದರ್ಶನಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ತನ್ನ ತಾಯಿಯ ಕುರಿತು ಮಾತನಾಡಿದ್ದು, ಅವರ ತಮ್ಮ ಮದ್ಯವ್ಯಸನಿಯಾಗಲು ತಾವೇ ಕಾರಣ ಎಂದು ನೋವುನ್ನು ತೋಡಿಕೊಂಡರು.

ಹೌದು.. ಕೆನಡಾದ ಭಾರತೀಯ ಸಿಖ್ ಕುಟುಂಬದಲ್ಲಿ ಜನಿಸಿದ ಸನ್ನಿ, ಪೋರ್ನ್ ಇಂಡಸ್ಟ್ರಿ ಪ್ರವೇಶದ ಕುರಿತು ಈಗಾಗಲೇ ತಿಳಿಸಿದ್ದಾರೆ. ಅಲ್ಲದೆ, ಇದೇ ಅವರನ್ನು ಕುಟುಂಬದಿಂದ ದೂರವಾಗಿಸಲು ಕಾರಣವಾಯಿತು ಅಂತ ನೋವು ತೋಡಿಕೊಂಡಿದ್ದಾರೆ. ಇದೀಗ ಅವರು, ತಮ್ಮ ತಾಯಿಯ ಕುಡಿತದ ಚಟದ ಬಗ್ಗೆ ಮಾತನಾಡಿದ್ದಾರೆ. 

ಇದನ್ನೂ ಓದಿ:  ಬಿಗ್ ಬಾಸ್ ಫೇಕ್‌, ಹಣ ಕೊಟ್ಟು ಒಳಗೆ ಹೋಗ್ಬೇಕು..! ಕೊನೆಗೂ ರಹಸ್ಯ ಬಯಲು ಮಾಡಿದ ನಟಿ

ತನ್ನ ತಾಯಿ ಮದ್ಯಪಾನ ಮಾಡುತ್ತಿದ್ದರು ಎಂದು ಹೇಳಿರುವ ಸನ್ನಿ, ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ಗೊತ್ತಾದ ಬಳಿಕ ಹೆಚ್ಚು ಕುಡಿಯಲು ಆರಂಭಿಸಿದರು. ಕೊನೆಗೆ ಕುಡಿತದ ಚಟಕ್ಕೆ ಬಿದ್ದರು. ಇದರಿಂದ ನಮ್ಮ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದು, ನನಗಿಂತ ನನ್ನ ತಾಯಿಗೆ ಮದ್ಯಪಾನ ಹೆಚ್ಚು ಇಷ್ಟವಾಗಿತ್ತು ಅಂತ ಭಾವಿಸಿದ್ದೆ. ಆದರೆ ಕೊನೆಗೆ ನಿಜ ಅರ್ಥವಾಯಿತು ಎಂದು ಸನ್ನಿ ತಮ್ಮ ಹಳೆಯ ದಿನಗಳನ್ನು ನೆನೆದರು.

ಸನ್ನಿ ಲಿಯೋನ್ ಇತ್ತೀಚೆಗಷ್ಟೇ ತನ್ನ ತಾಯಿಗೂ ಸನ್ನಿ ಲಿಯೋನ್ ಎಂಬ ಅಡ್ಡಹೆಸರು ಇಷ್ಟವಿಲ್ಲ ಎಂದು ಹೇಳಿದ್ದರು. ಅದಕ್ಕೆ ಕಾರಣಗಳನ್ನೂ ತಿಳಿಸಿದ್ದರು. ಅವರ ನಿಜವಾದ ಹೆಸರು ಕರೆಂಜಿತ್ ಕೌರ್ ವೋಹ್ರಾ ಎಂಬುದು ಅನೇಕರಿಗೆ ತಿಳಿದಿದೆ. ಆಕಸ್ಮಿಕವಾಗಿ ಪೋರ್ನ್ ಸ್ಟಾರ್ ಆದ ಸನ್ನಿ 2011ರಲ್ಲಿ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು. ಅದರ ನಂತರ ಅವಳು ದೊಡ್ಡ ಜನಪ್ರಿಯತೆಯನ್ನು ಗಳಿಸಿದಳು. ನಿಯಾಲ್ ವೆಬರ್ ಅವರನ್ನು ಮದುವೆಯಾಗಿರುವ ಸನ್ನಿ ಸದ್ಯ ಭಾರತದಲ್ಲಿ ನೆಲೆಸಿದ್ದಾರೆ. ಆಕೆಗೆ ಇಬ್ಬರು ಮಕ್ಕಳಿದ್ದು, ಇನ್ನೊಂದು ಮಗುವನ್ನು ದತ್ತು ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News