7 ದೇಶಗಳಲ್ಲಿ ಶೂಟಿಂಗ್, 38 ಭಾಷೆಗಳಲ್ಲಿ ರಿಲೀಸ್.. ಬಾಹುಬಲಿಗಿಂತಲೂ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ.. ನಾಯಕ ಯಾರು?

Kanguva Updates : ಇದೀಗ ಮತ್ತೊಂದು ಸಿನಿಮಾ ಬರುತ್ತಿದ್ದು, ಬಾಹುಬಲಿ ದಾಖಲೆಯನ್ನು ಬ್ರೇಕ್‌ ಮಾಡಲಿದೆ.  

Written by - Chetana Devarmani | Last Updated : May 2, 2024, 04:23 PM IST
  • 7 ದೇಶಗಳಲ್ಲಿ ಶೂಟಿಂಗ್, 38 ಭಾಷೆಗಳಲ್ಲಿ ರಿಲೀಸ್
  • ಬಾಹುಬಲಿಗಿಂತಲೂ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ
  • ಬಾಹುಬಲಿ ದಾಖಲೆಯನ್ನು ಬ್ರೇಕ್‌ ಮಾಡುತ್ತಾ ?
7 ದೇಶಗಳಲ್ಲಿ ಶೂಟಿಂಗ್, 38 ಭಾಷೆಗಳಲ್ಲಿ ರಿಲೀಸ್.. ಬಾಹುಬಲಿಗಿಂತಲೂ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ.. ನಾಯಕ ಯಾರು?  title=

Kanguva Movie : ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಬಾಲಿವುಡ್ ಮಾತ್ರ ದೊಡ್ಡ ಸಿನಿಮಾಗಳನ್ನು ನೀಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬೇರೆ ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರಗಳು ದೇಶದಾದ್ಯಂತ ಬಿಡುಗಡೆಯಾಗುತ್ತಿವೆ ಮತ್ತು ಅವುಗಳಲ್ಲಿ ಕೆಲವು ಪ್ರಪಂಚದಾದ್ಯಂತ ಸೂಪರ್ ಹಿಟ್ ಆಗುತ್ತಿವೆ. ಅದರಲ್ಲೂ ತೆಲುಗು ನಿರ್ದೇಶಕ ರಾಜಮೌಳಿ ನಿರ್ದೇಶನದ ಬಾಹುಬಲಿ ಟಾಲಿವುಡ್ ಮತ್ತು ಇತರೆ ದಕ್ಷಿಣದ ಸಿನಿಮಾಗಳ ಮಹತ್ವ ಹೆಚ್ಚಿಸಿದೆ. ಈಗ ಹಲವಾರು ಸಿನಿಮಾಗಳು ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಬಿಡುಗಡೆಯಾಗಿ ಹಿಟ್ ಆಗುತ್ತಿವೆ.

ಇಲ್ಲಿಯವರೆಗೂ ಬಾಹುಬಲಿ ಮಾತ್ರ ದೊಡ್ಡ ಪ್ಯಾನ್ ಇಂಡಿಯಾ ಚಲನಚಿತ್ರ ಎಂಬ ಖ್ಯಾತಿಗಳಿಸಿತ್ತು. ಆದರೆ ಇದೀಗ ಮತ್ತೊಂದು ಸಿನಿಮಾ ಬರುತ್ತಿದ್ದು, ಬಾಹುಬಲಿ ದಾಖಲೆಯನ್ನು ಬ್ರೇಕ್‌ ಮಾಡಲಿದೆ. ಸೌತ್‌ ಸೂಪರ್‌ ಸ್ಟಾರ್‌ ಸೂರ್ಯ ನಾಯಕನಾಗಿ ನಟಿಸುತ್ತಿರುವ ಶಿವ ನಿರ್ದೇಶನದ ‘ಕಂಗುವ’ ಸಿನಿಮಾ 38 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. 

ಪ್ರಸ್ತುತ, ಅಲ್ಲು ಅರ್ಜುನ್ ಅವರ 'ಪುಷ್ಪ 2: ದಿ ರೈಸ್', ಜೂನಿಯರ್ ಎನ್‌ಟಿಆರ್ ಅವರ 'ದೇವರ', ಪ್ರಭಾಸ್ ಅವರ 'ಕಲ್ಕಿ 2898 ಎಡಿ' ಮುಂತಾದ ಪ್ಯಾನ್-ಇಂಡಿಯಾ ಚಿತ್ರಗಳ ಮೇಲೆ ಉತ್ತಮ ಹೈಪ್ ಕ್ರಿಯೇಟ್ ಆಗಿದೆ. ಆದರೆ ಕಂಗುವ  ಈ ವರ್ಷ ಬರುತ್ತಿರುವ ಅತಿ ದೊಡ್ಡ ಪ್ಯಾನ್-ಇಂಡಿಯಾ ಚಿತ್ರವಾಗಲಿದೆ. 

ಪುಷ್ಪ 2 ಮತ್ತು ಕಲ್ಕಿ 2898 AD ಬಜೆಟ್ ಕಂಗುವ ಕ್ಕಿಂತ ಹೆಚ್ಚು. ಆದರೆ ರೀಚ್ ನಲ್ಲಿ ಕಂಗುವ ಹೈಲೈಟ್ ಆಗಿದೆ. ಏಕೆಂದರೆ ಈ ಚಿತ್ರ ವಿಶ್ವದಾದ್ಯಂತ 38 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕಂಗುವ ಎಲ್ಲ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ದೊಡ್ಡ ವಿಷಯ. 7 ದೇಶಗಳಲ್ಲಿ ಈ ಸಿನಿಮಾ ಶೂಟಿಂಗ್‌ ನಡೆದಿದೆ. 

ಇದನ್ನೂ ಓದಿ: ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಅಮಿರ್‌ ಖಾನ್ ಮೂವರು ಒಟ್ಟಿಗೆ ಒಂದೇ ಸಿನಿಮಾದಲ್ಲಿ.!

ಕಂಗುವ ಎರಡು ಯುಗಗಳ ಕಥೆ. 350 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರ ಐತಿಹಾಸಿಕ ಹಿನ್ನೆಲೆ ಹಾಗೂ ಇಂದಿನ ಪೀಳಿಗೆಯ ಕಥೆಗಳನ್ನು ತೋರಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಿರ್ಮಾಪಕರು ಪ್ರಪಂಚದಾದ್ಯಂತ ಅನೇಕ ನೈಜ-ಜೀವನದ ಸ್ಥಳಗಳಲ್ಲಿ ಚಿತ್ರವನ್ನು ಚಿತ್ರೀಕರಿಸಿದ್ದಾರೆ.

ಗೋವಾ ಮತ್ತು ಯುರೋಪಿಯನ್ ದೇಶಗಳ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚಿತ್ರದ ಸಂಪೂರ್ಣ ತಾರಾಗಣವು ಬ್ಯಾಂಕಾಕ್‌ನಲ್ಲಿ ಮೂರು ವಾರಗಳ ಕಾಲ ಚಿತ್ರಿಕರಣ ನಡೆಸಿತು. 

ಅದ್ಧೂರಿ ಯುದ್ಧದ ದೃಶ್ಯಗಳನ್ನು ಹೊಂದಿರುವ ಚಿತ್ರದ ಪ್ರಮುಖ ಶೆಡ್ಯೂಲ್ ಅನ್ನು ಶ್ರೀಲಂಕಾದಲ್ಲಿ 60 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಕೆಲವು ಪ್ರಮುಖ ದೃಶ್ಯಗಳನ್ನು ಚೆನ್ನೈ ಮತ್ತು ಪಾಂಡಿಚೇರಿಯಲ್ಲಿ ಚಿತ್ರೀಕರಿಸಲಾಗಿದೆ. ಇತ್ತೀಚೆಗಷ್ಟೇ ಕೇರಳದ ಕೊಡೈಕೆನಾಲ್ ಅರಣ್ಯದಲ್ಲಿ ಸೂರ್ಯ ಅಭಿನಯದ ಪ್ರಮುಖ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಕಂಗುವ ಸಿನಿಮಾವನ್ನು ಏಳು ದೇಶಗಳಲ್ಲಿ ನೈಜ ಸ್ಥಳಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಾಗುತ್ತಿದೆ.

ಕಂಗುವ ಚಿತ್ರದಲ್ಲಿ ಸೂರ್ಯ ಜೊತೆಗೆ ಬಾಬಿ ಡಿಯೋಲ್, ದಿಶಾ ಪಟಾನಿ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ಟುಡಿಯೋ ಗ್ರೀನ್ ನಿರ್ಮಿಸಿರುವ ಈ ಚಿತ್ರವು 2024 ರ ದ್ವಿತೀಯಾರ್ಧದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದೆ.  

ಇದನ್ನೂ ಓದಿ: ಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News