ಕಂಗನಾ ರನೌತ್ ನ್ನು ಭಗತ್ ಸಿಂಗ್ ಗೆ ಹೋಲಿಸಿದ ತಮಿಳು ನಟ ವಿಶಾಲ್

ತಮಿಳು ನಟ ವಿಶಾಲ್ ಅವರು ಈಗ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಅವರೊಂದಿಗೆ ನಾಟಕೀಯ ಮುಖಾಮುಖಿಯಾಗಿರುವ ನಟಿ ಕಂಗನಾ ರನೌತ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರೊಂದಿಗೆ ಹೋಲಿಸಿದ್ದಾರೆ.

Last Updated : Sep 10, 2020, 08:30 PM IST
ಕಂಗನಾ ರನೌತ್ ನ್ನು ಭಗತ್ ಸಿಂಗ್ ಗೆ ಹೋಲಿಸಿದ ತಮಿಳು ನಟ ವಿಶಾಲ್ title=
file photo

ನವದೆಹಲಿ: ತಮಿಳು ನಟ ವಿಶಾಲ್ ಅವರು ಈಗ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಅವರೊಂದಿಗೆ ನಾಟಕೀಯ ಮುಖಾಮುಖಿಯಾಗಿರುವ ನಟಿ ಕಂಗನಾ ರನೌತ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರೊಂದಿಗೆ ಹೋಲಿಸಿದ್ದಾರೆ.

'ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್, ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಧ್ವನಿ ನೀಡಲು ನೀವು ಎಂದಿಗೂ ಎರಡು ಬಾರಿ ಯೋಚಿಸಿಲ್ಲ. ಇದು ನಿಮ್ಮ ವೈಯಕ್ತಿಕ ಸಮಸ್ಯೆಯಲ್ಲ, ಆದರೆ ಆಗಲೂ ಸರ್ಕಾರವನ್ನು ಎದುರಿಸುತ್ತಿದ್ದಾಗ, ನೀವು ದೃಢವಾಗಿರುತ್ತೀರಿ ಅದು ತುಂಬಾ ದೊಡ್ಡ ಮಾದರಿ.ಇದು 1920 ರ ದಶಕದಲ್ಲಿ ಭಗತ್ ಸಿಂಗ್ ಮಾಡಿದಂತೆಯೇ ಇದೆ'ಎಂದು ವಿಶಾಲ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

'ಏನಾದರೂ ಸರಿಯಾಗಿಲ್ಲದಿದ್ದಾಗ ಜನರು ಸೆಲೆಬ್ರಿಟಿಗಳಲ್ಲದೆ ಸಾಮಾನ್ಯ ವ್ಯಕ್ತಿಯಾಗಿ ಜನರು ಸರ್ಕಾರದ ವಿರುದ್ಧ ಮಾತನಾಡಲು ಇದು ಒಂದು ಮಾದರಿಯಾಗಿದೆ' ಎಂದು ವಿಶಾಲ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವ ಕಲಂ 19ನ್ನು ಉಲ್ಲೇಖಿಸಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ ರನೌತ್ ಮುಂಬರುವ ಚಿತ್ರವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ತಮಿಳುನಾಡಿನಲ್ಲಿ ಹೆಸರುವಾಸಿಯಾಗಿದ್ದಾರೆ.

 

Trending News