Kichcha Sudeep : ಕಿಚ್ಚ ಸುದೀಪ್ ಹೆಸರಲ್ಲಿ 'ವಿಶೇಷ ಅಂಚೆ ಲಕೋಟೆ' ಹೊರ ತರಲಿದೆ ಅಂಚೆ ಇಲಾಖೆ

ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ 'ವಿಶೇಷ ಅಂಚೆ ಲಕೋಟೆಯನ್ನು' ಬಿಡುಗಡೆ ಮಾಡುತ್ತಿದೆ.

Written by - Zee Kannada News Desk | Last Updated : Aug 31, 2022, 05:04 PM IST
  • ಭಾರತ ಸರ್ಕಾರದ ಅಂಚೆ ಇಲಾಖೆ
  • ಕಿಚ್ಚ ಸುದೀಪ್ ಸಾಧನೆಗಳನ್ನು ಗುರುತಿಸಿ "ವಿಶೇಷ ಅಂಚೆ ಲಕೋಟೆ"
  • ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿ
Kichcha Sudeep : ಕಿಚ್ಚ ಸುದೀಪ್ ಹೆಸರಲ್ಲಿ 'ವಿಶೇಷ ಅಂಚೆ ಲಕೋಟೆ' ಹೊರ ತರಲಿದೆ ಅಂಚೆ ಇಲಾಖೆ title=

ಬೆಂಗಳೂರು : ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ 'ವಿಶೇಷ ಅಂಚೆ ಲಕೋಟೆಯನ್ನು' ಬಿಡುಗಡೆ ಮಾಡುತ್ತಿದೆ.

ನಟ ಸುದೀಪ್ ಅವರು ಸ್ಯಾಂಡಲ್ ವುಡ್ ನಲ್ಲಿ 25ವರ್ಷ 'ಸಿನಿ ಜರ್ನಿ' ಪೂರೈಸಿದ ಅವರ ಸಾಧನೆಯನ್ನು ಭಾರತೀಯ ಅಂಚೆ ಇಲಾಖೆಯನ್ನು ಗುರುತಿಸಿದೆ. ಹೀಗಾಗಿ ಇಂದು ಅಂಚೆ ಇಲಾಖೆಯ ಅಧೀಕ್ಷಕರಾದ ಮಾದೇಶ್ ಅವರು ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ NOC ಯನ್ನು ಪಡೆದರು ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.

ಇದನ್ನೂ ಓದಿ : ತಾಂಡವಕ್ಕೆ ಸಜಾಗಿದೆ "ಶಿವ 143 " , ತೆರೆ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ ಧೀರನ್ ರಾಮ್ ಕುಮಾರ್

ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ. 

ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿ "ವಿಶೇಷ ಅಂಚೆ ಲಕೋಟೆ" ಮೂಲಕ ಗೌರವ ಸಲ್ಲಿಸುತ್ತಿರುವ  ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮತ್ತು ಕನ್ನಡ ಮನಸುಗಳು ಸಾಮಾಜಿಕ ಜಾಲತಾಣದಲ್ಲಿ ಹೃದಯತುಂಬಿ ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : ಆಕ್ಷನ್ ಪ್ಯಾಕ್ಡ್ GodFather Teaser.. ಚಿರಂಜೀವಿ, ಸಲ್ಲು ಭಾಯ್‌ ಮೋಡಿಗೆ ಫ್ಯಾನ್ಸ್‌ ಫಿದಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News