The Kerala Story Collection: ಮೊದಲ ದಿನವೇ ದಾಖಲೆ ಬರೆದ 'ದಿ ಕೇರಳ ಸ್ಟೋರಿ' ಕಲೆಕ್ಷನ್‌

The Kerala Story 1st Day Collections: 'ದಿ ಕೇರಳ ಸ್ಟೋರಿ' ಬಿಡುಗಡೆಯಾಗಿದ್ದು, ಮೊದಲ ದಿನದ ಗಳಿಕೆಯಲ್ಲಿ ಬಾಕ್ಸ್ ಆಫೀಸ್‌ನಲ್ಲಿ ತಲ್ಲಣ ಮೂಡಿಸಿದೆ. 'ದಿ ಕೇರಳ ಸ್ಟೋರಿ' 2023 ರಲ್ಲಿ ಆರಂಭಿಕ ದಿನದಂದು ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳ ಪಟ್ಟಿಗೆ ಸೇರಿದೆ.   

Written by - Chetana Devarmani | Last Updated : May 6, 2023, 02:30 PM IST
  • ಮೇ 05 ರಂದು 'ದಿ ಕೇರಳ ಸ್ಟೋರಿ' ಸಿನಿಮಾ ರಿಲೀಸ್‌
  • ಮೊದಲ ದಿನವೇ ದಾಖಲೆ ಬರೆದ 'ದಿ ಕೇರಳ ಸ್ಟೋರಿ'
  • ಆರಂಭಿಕ ದಿನದಂದು ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
The Kerala Story Collection: ಮೊದಲ ದಿನವೇ ದಾಖಲೆ ಬರೆದ 'ದಿ ಕೇರಳ ಸ್ಟೋರಿ' ಕಲೆಕ್ಷನ್‌  title=
The Kerala Story

The Kerala Story Box Office Collection : 'ದಿ ಕೇರಳ ಸ್ಟೋರಿ' ಚಿತ್ರವು 2023 ರ ಅತ್ಯಂತ ವಿವಾದಾತ್ಮಕ ಚಿತ್ರವಾಗಿದೆ. ಅನೇಕ ರಾಜಕೀಯ ವಿವಾದಗಳ ನಂತರ, ಚಿತ್ರವು ಅಂತಿಮವಾಗಿ ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ವಿವಾದಾತ್ಮಕ ಚಿತ್ರಕ್ಕೆ ಪ್ರೇಕ್ಷಕರಿಂದ ಹೆಚ್ಚಿನ ಬೆಂಬಲ ಸಿಗುತ್ತಿದೆ. ಮೊದಲ ದಿನವೇ ದಿ ಕೇರಳ ಸ್ಟೋರಿ ಸಿನಿಮಾ ದಾಖಲೆಯ ಗಳಿಕೆಯನ್ನು ಗಳಿಸಿದೆ. ಹೌದು... ಮೊದಲ ದಿನದ ಗಳಿಕೆಯೊಂದಿಗೆ ದಿ ಕೇರಳ ಸ್ಟೋರಿ ಚಿತ್ರವು ಆರಂಭಿಕ ದಿನದಂದು ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಗೆ ಸೇರಿದೆ.

ಇದನ್ನೂ ಓದಿ: ತುಂಡು ಉಡುಗೆಯಲ್ಲಿ ಪೋಸ್‌ ​ಕೊಟ್ಟ ಸಾನ್ಯಾ ಐಯ್ಯರ್: ಬಾಲಿವುಡ್‌ ಅಲ್ಲ.. ಸ್ಯಾಂಡಲ್ವುಡ್‌ ಎಂದ ಫ್ಯಾನ್ಸ್!

ಮೊದಲ ದಿನವೇ ಇಷ್ಟು ಕೋಟಿ ಗಳಿಕೆ!

ದಿ ಕೇರಳ ಸ್ಟೋರಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಮರ್ಶಕರ ಹೊಗಳಿಕೆಯ ಜೊತೆಗೆ ದಿ ಕೇರಳ ಸ್ಟೋರಿಯ ಮೊದಲ ದಿನದ ಗಳಿಕೆಯ ಅಂಕಿ-ಅಂಶಗಳೂ ಮುನ್ನೆಲೆಗೆ ಬಂದಿವೆ. ಟ್ರೆಂಡ್ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಚಿತ್ರದ ಅಧಿಕೃತ ಸಂಗ್ರಹದ ಡೇಟಾವನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರ, ದಿ ಕೇರಳ ಸ್ಟೋರಿ ಮೊದಲ ದಿನ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 8.3 ಕೋಟಿ ಗಳಿಸಿದೆ.

ಇದನ್ನೂ ಓದಿ: ಸುದೀಪ್ ಗೆ ಬೆದರಿಕೆ ಪತ್ರ ಪ್ರಕರಣ: ಕೊನೆಗೂ ಪೋಲಿಸರ ಬಲೆಗೆ ಬಿದ್ದ ಖ್ಯಾತ ಡೈರೆಕ್ಟರ್!

ಸಿನಿಮ ಸುತ್ತ ವಿವಾದಗಳ ಹುತ್ತ : 

ಸುದೀಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿ ಮೂರು ಮಹಿಳೆಯರನ್ನು ಆಧರಿಸಿದ ಕಥೆಯಾಗಿದೆ. ಈ ಚಿತ್ರದಲ್ಲಿ, ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೇರ್ಪಡೆಗೊಂಡ ಮಹಿಳೆಯರ ಧಾರ್ಮಿಕ ಮತಾಂತರದ ಕಥೆಯನ್ನು ತೋರಿಸಲಾಗಿದೆ. ದಿ ಕೇರಳ ಸ್ಟೋರಿಯನ್ನು ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ದಿ ಕೇರಳ ಸ್ಟೋರಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯ ಜೊತೆಗೆ ಅದಾ ಶರ್ಮಾ ಅವರ ನಟನೆಯನ್ನು ವಿಮರ್ಶಕರು ಮೆಚ್ಚಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾದಾಗ ಕೆಲವು ಅಂಕಿ ಅಂಶಗಳ ಬಗ್ಗೆ ಸಾಕಷ್ಟು ಗಲಾಟೆ ನಡೆದಿತ್ತು. ಇದಾದ ನಂತರ ಚಿತ್ರಕ್ಕೆ ನಿಷೇಧ ಹೇರಬೇಕು ಎಂಬ ಬೇಡಿಕೆ ಹೆಚ್ಚಾಯಿತು. ಪ್ರತಿಭಟನೆಯ ನಂತರ ಸೆನ್ಸಾರ್ ಮಂಡಳಿಯು ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿತ್ತು, ಈಗ ಚಿತ್ರ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.

ಇದನ್ನೂ ಓದಿ: ಅತಿ ಹೆಚ್ಚು ವಯಸ್ಸಿನ ಅಂತರವಿರುವ ಬಾಲಿವುಡ್‌ ಜೋಡಿಗಳಿವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News