ಅಧಿಕೃತವಾಗಿ ಡಿವೋರ್ಸ್‌ ಘೋಷಣೆ ಮಾಡಿದ ಜಿವಿ ಪ್ರಕಾಶ್- ಸೈಂಧವಿ..! 11 ವರ್ಷಗಳ ದಾಂಪತ್ಯ ಅಂತ್ಯ

GV Prakash Saindhavi Divorce : ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎಆರ್ ರೆಹಮಾನ್ ಅವರ ಸೋದರಳಿಯ ಜಿವಿ ಪ್ರಕಾಶ್ ಕುಮಾರ್ ಅವರು ತಮ್ಮ ಬಾಲ್ಯದ ಪ್ರಿಯತಮೆ ಸೈಂಧವಿಯನ್ನು 2013 ರಲ್ಲಿ ವಿವಾಹವಾದರು. ಸೈಂಧವಿ ಪ್ರಸಿದ್ಧ ಹಿನ್ನೆಲೆ ಗಾಯಕಿ. ಈ ಜೋಡಿ 2020 ರಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಇದೀಗ ಬೇರೆಯಾಗಿದ್ದಾರೆ..

Written by - Krishna N K | Last Updated : May 17, 2024, 12:03 AM IST
    • 2013 ರಲ್ಲಿ ಪ್ರೀತಿಸಿ ಜಿವಿ ಪ್ರಕಾಶ್‌ ಸೈಂಧವಿ ಮದುವೆಯಾಗಿದ್ದರು.
    • ಜಿವಿ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಸೋದರಳಿಯ.
    • ಸೈಂಧವಿ ಖ್ಯಾತ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ಅಧಿಕೃತವಾಗಿ ಡಿವೋರ್ಸ್‌ ಘೋಷಣೆ ಮಾಡಿದ ಜಿವಿ ಪ್ರಕಾಶ್- ಸೈಂಧವಿ..! 11 ವರ್ಷಗಳ ದಾಂಪತ್ಯ ಅಂತ್ಯ title=

GV Prakash Kumar Saindhavi Announce Divorce : ತಮಿಳು ಖ್ಯಾತ ಸಂಗೀತ ನಿರ್ದೇಶಕ ಹಾಗೂ ನಟ ಜಿ.ವಿ.ಪ್ರಕಾಶ್ ಕುಮಾರ್ ಮತ್ತು ಅವರ ಪತ್ನಿ ಸೈಂಧವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 11 ವರ್ಷಗಳ ನಂತರ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಇಬ್ಬರೂ ತಮ್ಮ ನಿರ್ಧಾರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಅಧಿಕೃತ ಹೇಳಿಕೆ ನೀಡಿದ್ದಾರೆ.

ಸೈಂಧವಿ ಮತ್ತು ನಾನು 11 ವರ್ಷಗಳ ಮದುವೆಯ ನಂತರ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಇಬ್ಬರೂ ಪೋಸ್ಟ್‌ನಲ್ಲಿ ಮೂಲಕ ಅವರ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಲ್ಲದೆ, ನಮ್ಮ ಮಾನಸಿಕ ಶಾಂತಿ ಮತ್ತು ಸುಧಾರಣೆಗಾಗಿ ಹಾಗೂ ಪರಸ್ಪರ ಗೌರವವನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಅಂತ ವಿಚ್ಛೇದನಕ್ಕೆ ಕಾರಣ ತಿಳಿಸಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ಫೋನ್ ವಾಲ್ ಪೇಪರ್‌ನಲ್ಲಿ ಯಾರ್‌ ಫೋಟೋ ಇದೆ ಗೊತ್ತಾ..? ಶಾಕ್‌ ಆಗ್ತೀರಾ ಗೊತ್ತಾದ್ರೆ 

ಇದೇ ವೇಳೆ ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾವು ದಯೆಯಿಂದ ಕೇಳುತ್ತೇವೆ. ನಾವು ಬೇರೆಯಾಗುತ್ತಿದ್ದೇವೆ ಎಂದು ಒಪ್ಪಿಕೊಳ್ಳುತ್ತಾ, ಇದು ಪರಸ್ಪರ ಅತ್ಯುತ್ತಮ ನಿರ್ಧಾರ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಿಮ್ಮ ಬೆಂಬಲ ನಮಗೆ ಅತ್ಯಾವಶ್ಯಕ.. ಧನ್ಯವಾದ.. ಅಂತ ಪೋಸ್ಟ್‌ ಜೀವಿ ಬರೆದುಕೊಂಡಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎಆರ್ ರೆಹಮಾನ್ ಅವರ ಸೋದರಳಿಯ ಜಿವಿ ಪ್ರಕಾಶ್ ಕುಮಾರ್ ಅವರು ತಮ್ಮ ಬಾಲ್ಯದ ಪ್ರಿಯತಮೆ ಸೈಂಧವಿಯನ್ನು 2013 ರಲ್ಲಿ ವಿವಾಹವಾದರು. ಸೈಂಧವಿ ಪ್ರಸಿದ್ಧ ಹಿನ್ನೆಲೆ ಗಾಯಕಿ. ಈ ಜೋಡಿ 2020 ರಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದರು. 

ಇದನ್ನೂ ಓದಿ: ಬೈಕ್ ನಲ್ಲಿ ಮತ್ತೆ ರೈಡ್ ಗೆ ಹೊರಟ್ರು ರಗಡ್ ಲುಕ್ ನಲ್ಲಿಕಿನ್ನರಿ ಸುಂದರಿ

ಜಿವಿ ಪ್ರಕಾಶ್ ಮತ್ತು ಸೈಂಧವಿ ಅವರ ಜೋಡಿಯ ಹಲವು ಹಾಡುಗಳು ಸೂಪರ್‌ ಹಿಟ್‌ ಆಗಿವೆ.. ಒಟ್ಟಿಗೆ, ಅವರು ಚಲನಚಿತ್ರ ಹಿನ್ನೆಲೆ ಸಂಗೀತ, ಆಲ್ಬಮ್‌ಗಳು ಮತ್ತು ಲೈವ್ ಪ್ರದರ್ಶನಗಳು ನೀಡಿದಂತೆ ಹಲವಾರು ಖ್ಯಾತ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ವ್ಯಾಪಕವಾದ ಮೆಚ್ಚುಗೆಯನ್ನು ಸಹ ಗಳಿಸಿದ್ದಾರೆ. ಜಿವಿ ಥೇರಿ, ವಾಥಿ ಸೇರಿದಂತೆ ಹಲವಾರು ಹಿಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News