Liger : ಬೆತ್ತಲಾಗಿ ಟ್ರೋಲ್ಗೆ ಒಳಗಾದ ನಟ ವಿಜಯ್ ದೇವರಕೊಂಡ...!

ಶನಿವಾರದಂದು ನಟ ವಿಜಯ್ ದೇವರಕೊಂಡ ಅವರ ಲೈಗರ್ ಚಿತ್ರದ ಪೋಸ್ಟರ್ ಈಗ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದೆ. 

Written by - Zee Kannada News Desk | Last Updated : Jul 3, 2022, 04:30 PM IST
  • ಹೌದು, ಈ ಚಿತ್ರದಲ್ಲಿ ಅವರು ಬೆತ್ತಲೆಯಾಗಿ ಕಾಣಿಸಿಕೊಂಡಿರುವುದು ಬಹುತೇಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
  • ಹೀಗಾಗಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಲಿಗರ್ ಚಿತ್ರದ ಪೋಸ್ಟರ್ ವೊಂದನ್ನು ಶೇರ್ ಮಾಡಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.
Liger : ಬೆತ್ತಲಾಗಿ ಟ್ರೋಲ್ಗೆ ಒಳಗಾದ ನಟ ವಿಜಯ್ ದೇವರಕೊಂಡ...! title=
Photo Courtsey: Instagram

ಮುಂಬೈ: ಶನಿವಾರದಂದು ನಟ ವಿಜಯ್ ದೇವರಕೊಂಡ ಅವರ ಲೈಗರ್ ಚಿತ್ರದ ಪೋಸ್ಟರ್ ಈಗ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಹೌದು, ಈ ಚಿತ್ರದಲ್ಲಿ ಅವರು ಬೆತ್ತಲೆಯಾಗಿ ಕಾಣಿಸಿಕೊಂಡಿರುವುದು ಬಹುತೇಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಹೀಗಾಗಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಲೈಗರ್ ಚಿತ್ರದ ಪೋಸ್ಟರ್ ವೊಂದನ್ನು ಶೇರ್ ಮಾಡಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by gully_bros (1st 🎯 1000 ) (@edhi.mana_gully)

ಕೆಲವರು ಅವರು ಪಾತ್ರಕ್ಕಾಗಿ ಈ ಚಿತ್ರಕ್ಕೆ ವಹಿಸುತ್ತಿರುವ ಶ್ರಮವನ್ನು ಹೊಗಳಿದರೆ, ಇನ್ನೂ ಕೆಲವರು ಈ ಚಿತ್ರದ ಪೋಸ್ಟರ್ ವಿಚಾರವಾಗಿ ಟ್ರೋಲ್ ಮಾಡಿದ್ದಾರೆ.ಈ ಚಿತ್ರದಲ್ಲಿ ಫೈಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಕೈಯಲ್ಲಿ ಗುಲಾಬಿ ಹೂಗಳ ಗುಚ್ಚವನ್ನು ಹಿಡಿದು ನಗ್ನವಾಗಿ ಕಾಣಿಸಿಕೊಂಡಿದ್ದಾರೆ.ಈ ಪೋಸ್ಟರ್ ನೋಡಿದ ತಕ್ಷಣ ಕೆಲವರು ಟ್ರೋಲ್ ಮಾಡುತ್ತಾ ಇದನ್ನು ಮರು ಎಡಿಟ್ ಮಾಡಿ ಅವರಿಗೆ ಬಟ್ಟೆ ತೊಡಿಸುವ ಹಾಗೆ ಬಿತ್ತರಿಸಲಾಗಿದೆ.

 
 
 
 

 
 
 
 
 
 
 
 
 
 
 

A post shared by SARCASM (@sarcastc_us)

ಈ ಚಿತ್ರವನ್ನು ಪುರಿ ಜಗನಾಥ್ ನಿರ್ದೇಶಿಸಿದ್ದು, ಮುಂಬೈನ ಬೀದಿಗಳಿಂದ ನೇರವಾಗಿ MMA ಫೈಟರ್ ಆಗುವ ಸಾಮಾನ್ಯ ವ್ಯಕ್ತಿಯ ಕುರಿತಾಗಿದೆ.ಚಿತ್ರದಲ್ಲಿ ಅಮೆರಿಕದ ಮಾಜಿ ವೃತ್ತಿಪರ ಬಾಕ್ಸರ್ ಮೈಕ್ ಟೈಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೈಗರ್ ಚಿತ್ರದ ಛಾಯಾಗ್ರಹಣವನ್ನು ವಿಷ್ಣು ಶರ್ಮಾ ನಿರ್ವಹಿಸಿದರೆ, ಥಾಯ್ಲೆಂಡ್‌ನ ಕೇಚಾ ಸಾಹಸ ನಿರ್ದೇಶನ ಮಾಡಿದ್ದಾರೆ. ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಒಟ್ಟಾಗಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.ಇನ್ನೂ ಚಿತ್ರದ ನಾಯಕಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News