ಬಾಕ್ಸ್ ಆಫೀಸ್‌ನಲ್ಲಿ ವಿಜಿ-ಸ್ಯಾಮ್‌ ಮೋಡಿ : 'ಖುಷಿ' ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ.!

Kushi movie collection : 'ಖುಷಿ' ಚಿತ್ರ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಸೆಪ್ಟೆಂಬರ್ 1 ರಂದು ಬಿಡುಗಡೆಯಾಯಿತು. ಮೊದಲ ದಿನದಿಂದಲೇ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವಾದ್ಯಂತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

Written by - Krishna N K | Last Updated : Sep 2, 2023, 02:58 PM IST
  • ವಿಜಯ್ ದೇವರಕೊಂಡ 'ಖುಷಿ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.
  • ಸಮಂತಾ - ವಿಜಯ್‌ ನಟನೆಯ ಖುಷಿ' ಚಿತ್ರ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ.
  • ಚಿತ್ರದ ಮೊದಲ ದಿನ ಕಲೆಕ್ಷನ್‌ ಕುರಿತು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.
ಬಾಕ್ಸ್ ಆಫೀಸ್‌ನಲ್ಲಿ ವಿಜಿ-ಸ್ಯಾಮ್‌ ಮೋಡಿ : 'ಖುಷಿ' ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ.! title=

Kushi day 1 collection : ನಟ ವಿಜಯ್ ದೇವರಕೊಂಡ ಅಭಿನಯದ 'ಖುಷಿ' ಚಿತ್ರಕ್ಕೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಭರ್ಜರಿ ಓಪನಿಂಗ್ಸ್ ಸಿಕ್ಕಿದೆ. ಮೊದಲ ದಿನವೇ ಚಿತ್ರವು ವಿಶ್ವಾದ್ಯಂತ ರೂ.30 ಕೋಟಿ ಗಳಿಸಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.

ಹೌದು.. ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ 'ಖುಷಿ' ಚಿತ್ರ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಸೆಪ್ಟೆಂಬರ್ 1 ರಂದು ಬಿಡುಗಡೆಯಾಯಿತು. ಮೊದಲ ದಿನದಿಂದಲೇ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವಾದ್ಯಂತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: Kichcha 46: ಕಿಚ್ಚ 46 ಚಿತ್ರದ ಟೈಟಲ್‌ ರಿವೀಲ್‌, ಮತ್ತೆ ಖಾಕಿ ತೊಟ್ಟ ಬಾದ್‌ ಷಾ!

ಸಧ್ಯ 'ಖುಷಿ' ಚಿತ್ರದ ಕಲೆಕ್ಷನ್ ಬಗ್ಗೆ ಇಂಡಸ್ಟ್ರಿಯಲ್ಲಿ ಕುತೂಹಲ ಮೂಡಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಈ ಸಿನಿಮಾಗೆ ಭರ್ಜರಿ ಓಪನಿಂಗ್ಸ್ ಸಿಕ್ಕಿದೆ. ಟ್ರೇಡ್ ರಿಪೋರ್ಟ್ ಪ್ರಕಾರ.. ಮೊದಲ ದಿನ US ಬಾಕ್ಸ್ ಆಫೀಸ್‌ನಲ್ಲಿ 400k ಪ್ಲಸ್ ಡಾಲರ್‌ಗಳನ್ನು ಗಳಿಸಿದೆ. ತೆಲುಗು ರಾಜ್ಯಗಳಲ್ಲಿ ರೂ. 10 ಕೋಟಿ, ಸೇರಿದಂತೆ ವಿಶ್ವಾದ್ಯಂತ ರೂ. 14 ರಿಂದ ರೂ. 16 ಕೋಟಿಯವರೆಗೂ ಹಣ ಗಳಿಸಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ನೋಡಿದರೆ, ಮೈತ್ರಿ ಚಿತ್ರದ ನಿರ್ಮಾಪಕರು ವಿಶ್ವದಾದ್ಯಂತ 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

'ಲೈಗರ್' ಚಿತ್ರದ ಮೂಲಕ ಭಾರೀ ಸೋಲು ಅನುಭವಿಸಿದ್ದ ವಿಜಯ್ ದೇವರಕೊಂಡ ಈ ಸಿನಿಮಾ 'ಖುಷಿ' ನೀಡಿದೆ. ಓಪನಿಂಗ್‌ನಲ್ಲೇ ಚಿತ್ರ 30 ಕೋಟಿ ರೂ. ಗಳಿಸಿದ್ದು ಮಾಮೂಲಿ ವಿಷಯವಲ್ಲ. ದಿನದ ಮೊದಲ ಕಲೆಕ್ಷನ್ ನೋಡಿದರೆ ವಿಜಯ್ ದೇವರಕೊಂಡ 'ಖುಷಿ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ ಎಂದು ಅರ್ಥವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News