ವಿಜಯ್ ದೇವರಕೊಂಡ ಜೊತೆ ಸಮಂತಾ ರೋಮ್ಯಾಂಟಿಕ್ ಮೂಡ್, ಫ್ಯಾನ್ಸ್‌ಗೆ ಕೊಟ್ರು ಗುಡ್‌ನ್ಯೂಸ್‌!

Vijay Deverakonda Samantha : ವಿಜಯ್ ದೇವರಕೊಂಡ ಅವರು ಸಮಂತಾ ರುತ್ ಪ್ರಭು ಅವರೊಂದಿಗಿನ ರೋಮ್ಯಾಂಟಿಕ್ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ  

Written by - Chetana Devarmani | Last Updated : Aug 8, 2023, 04:48 PM IST
  • ವಿಜಯ್ - ಸಮಂತಾ ರೋಮ್ಯಾಂಟಿಕ್ ಫೋಟೋ
  • ಇನ್‌ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡ ವಿಜಯ್
  • ಸಿಕ್ಕಾಪಟ್ಟೆ ವೈರಲ್‌ ಆದ ಫೋಟೋ
ವಿಜಯ್ ದೇವರಕೊಂಡ ಜೊತೆ ಸಮಂತಾ ರೋಮ್ಯಾಂಟಿಕ್ ಮೂಡ್, ಫ್ಯಾನ್ಸ್‌ಗೆ ಕೊಟ್ರು ಗುಡ್‌ನ್ಯೂಸ್‌!   title=

Kushi trailer release date : ಸೌತ್ ಫಿಲ್ಮ್ ಇಂಡಸ್ಟ್ರಿಯ ಸೂಪರ್‌ಹಿಟ್ ನಟಿ ಸಮಂತಾ ರುತ್ ಪ್ರಭು ಮತ್ತು ಸೌತ್ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಪ್ರೇಮಕಥೆ 'ಖುಷಿ' ಬಗ್ಗೆ ದೊಡ್ಡ ಅಪ್‌ಡೇಟ್ ಬಂದಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದುವರೆಗೆ ಚಿತ್ರದ ಹಲವು ಪೋಸ್ಟರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಈಗ ಚಿತ್ರತಂಡ ವಿಜಯ್ ಮತ್ತು ಸಮಂತಾ ಅವರ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಿರ್ಮಾಪಕರು ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ವಿಜಯ್ ಈ ಪೋಸ್ಟರ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

ಇದನ್ನೂ ಓದಿ: Samantha: ಪ್ರಕೃತಿಯ ಮಡಿಲಲ್ಲಿ ವಿಶ್ರಮಿಸುತ್ತಿರುವ ಸಮಂತಾ

ವಿಜಯ್ ದೇವರಕೊಂಡ ಅವರು ಸಮಂತಾ ರುತ್ ಪ್ರಭು ಅವರೊಂದಿಗಿನ ರೋಮ್ಯಾಂಟಿಕ್ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಖುಷಿ ಟ್ರೈಲರ್ ಆಗಸ್ಟ್ 9 ರಂದು ಬಿಡುಗಡೆಯಾಗುತ್ತಿದೆ ಎಂದು ಈ ಮೂಲಕ ತಿಳಿಸಿದ್ದಾರೆ. ಚಿತ್ರದ ಟ್ರೈಲರ್ 2.41 ನಿಮಿಷಗಳು ಎಂದು ಸಹ ಬಹಿರಂಗ ಪಡಿಸಿದ್ದಾರೆ. ಚಿತ್ರವು ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. 

 

 

ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಇದು ಸೇನಾಧಿಕಾರಿ (ವಿಜಯ್ ದೇವರಕೊಂಡ) ಮತ್ತು ಕಾಶ್ಮೀರಿ ಹುಡುಗಿ (ಸಮಂತಾ) ನಡುವಿನ ಪ್ರೇಮಕಥೆಯ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ನವೀನ್ ಯೆರ್ನಾನಿ ಮತ್ತು ವೈ ರವಿಶಂಕರ್. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. ಚಿತ್ರದಲ್ಲಿ ವಿಜಯ್ ಮತ್ತು ಸಮಂತಾ ಜೊತೆಗೆ ಜಯರಾಮ್, ವೆನ್ನೆಲ ಕಿಶೋಲರ್ ಮತ್ತು ಸಚಿನ್ ಖೇಡ್ಕರ್ ಅವರಂತಹ ಅದ್ಭುತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಕಾಫಿ ಕುಡಿಯುವ ಮಗ್ ಬೆಲೆ ತಿಳಿದ್ರೆ ಶಾಕ್‌ ಆಗ್ತೀರಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News