#FightAgainstCorona : ಕರೋನಾ ವಿರುದ್ಧ ಹೊಸ ಅಭಿಯಾನ ಆರಂಭಿಸಿದ ವಿರುಷ್ಕಾ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಕರೋನಾ ವಿರುದ್ಧ ಹೋರಾಡಲು ಕೀಟೋ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅಲ್ಲದೆ, ಅವರು 2 ಕೋಟಿ ರೂ. ದೇಣಿಗೆಯನ್ನು ನೀಡಿದ್ದಾರೆ.

Written by - Yashaswini V | Last Updated : May 7, 2021, 01:41 PM IST
  • ಜನರಿಗೆ ಸಹಾಯ ಮಾಡಲು ಮುಂದೆ ಬಂದ ವಿರಾಟ್-ಅನುಷ್ಕಾ
  • ಕೆಟ್ಟೊ ಅಭಿಯಾನವನ್ನು ಪ್ರಾರಂಭಿಸಿದ ವಿರುಷ್ಕಾ
  • ಜೀವ ಉಳಿಸಲು ಯಾವುದೇ ಪ್ರಮಾಣವು ತುಂಬಾ ಚಿಕ್ಕದಲ್ಲ- ವಿರಾಟ್ ಕೊಹ್ಲಿ
#FightAgainstCorona : ಕರೋನಾ ವಿರುದ್ಧ ಹೊಸ ಅಭಿಯಾನ ಆರಂಭಿಸಿದ ವಿರುಷ್ಕಾ title=
Virat Kohli-Anushka Sharma in Covid Fighting

ನವದೆಹಲಿ: ಐಪಿಎಲ್ 2021 (IPL 2021) ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದರಿಂದಾಗಿ ಎಲ್ಲಾ ಆಟಗಾರರಿಗೂ ಮತ್ತೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ವಿರಾಟ್ ಕೊಹ್ಲಿ ಕೂಡ ಪತ್ನಿ ಅನುಷ್ಕಾ ಶರ್ಮಾ ಮತ್ತು ತಮ್ಮ ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಆದರೆ  ವಿರುಷ್ಕಾ ದಂಪತಿ ವ್ಯರ್ತವಾಗಿ ಸಮಯ ಕಳೆಯುವ ಬದಲಿಗೆ ಕರೋನಾ  ವಿರುದ್ಧ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಕೋವಿಡ್ -19 ರ ಹೊಸ ಪ್ರಕರಣಗಳು ಇಲ್ಲಿಯವರೆಗೆ ಎಲ್ಲಾ ದಾಖಲೆಗಳನ್ನು ಮುರಿದಿವೆ. ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಈಗ ಜನರಿಗೆ ಸಹಾಯ ಮಾಡಲು ಮುಂದೆ ಬಂದಿದ್ದು ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಕರೋನಾ ವಿರುದ್ಧದ ಹೋರಾಟದಲ್ಲಿ ವಿರಾಟ್-ಅನುಷ್ಕಾ:
ಕೋವಿಡ್ -19 (Covid 19) ಸಾಂಕ್ರಾಮಿಕ ರೋಗದ ವಿರುದ್ಧದ ದೇಶದ ಹೋರಾಟಕ್ಕೆ ಸಹಾಯ ಮಾಡಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಎರಡು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಏಳು ಕೋಟಿ ರೂಪಾಯಿ ಸಂಗ್ರಹಿಸುವುದು ಅವರ ಗುರಿ. ಇಬ್ಬರೂ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ  ಕೆಟ್ಟೊ ಎಂಬ ಸಂಘಟನೆಯ ಮೂಲಕ ಈ ಹಣವನ್ನು ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ - Covid-19: ದೇಹದಲ್ಲಿ ಆಮ್ಲಜನಕದ ಮಟ್ಟ ಎಷ್ಟಿರಬೇಕು? ಕಡಿಮೆ Oxygen level ಗುರುತಿಸುವುದು ಹೇಗೆ?

ವಾಸ್ತವವಾಗಿ, ವಿರುಷ್ಕಾ ದಂಪತಿ ಆರಂಭಿಸಿರುವ ಈ ಅಭಿಯಾನವನ್ನು ಏಳು ದಿನಗಳವರೆಗೆ ನಡೆಸಲಾಗುವುದು. ಇದರಿಂದ ಸಂಗ್ರಹವಾದ ಹಣವನ್ನು ಆಮ್ಲಜನಕ ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಕಾರ್ಯನಿರ್ವಹಿಸುವ ಎಸಿಟಿ ಗ್ರಾಂಟ್ಸ್ ಎಂಬ ಸಂಸ್ಥೆಗೆ ನೀಡಲಾಗುವುದು ಎಂದು ತಿಳಿದುಬಂದಿದೆ.

ವಿರಾಟ್-ಅನುಷ್ಕಾ ಕೆಟ್ಟೊ ಅಭಿಯಾನವನ್ನು ಪ್ರಾರಂಭಿಸಿದರು:
ಜನರಿಂದ (ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್) ಕೆಟ್ಟೊದಿಂದ ಹಣ ಸಂಗ್ರಹಿಸುವ ವೇದಿಕೆಯ ಮೂಲಕ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ. ಇದಕ್ಕಾಗಿ ನಾವು ಎರಡು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದೇವೆ ಎಂದು ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ (Virat Kohli), ಕೋವಿಡ್ -19 ಏಕಾಏಕಿಯಿಂದಾಗಿ ನಮ್ಮ ದೇಶವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ಪ್ರಶ್ನಿಸಲಾಗುತ್ತಿದೆ, ನಾವು ಒಗ್ಗೂಡಿ ನಮ್ಮ ಭಾರತಕ್ಕೆ ಸಹಾಯ ಮಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.

 
 
 
 
 

ಇದನ್ನೂ ಓದಿ- Covid precautions: ಕರೋನಾ ತಪ್ಪಿಸಲು ಆಯುಷ್ ಸಚಿವಾಲಯದ ಈ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ

ಕೋವಿಡ್ -19 ಪರಿಹಾರಕ್ಕಾಗಿ ಹಣವನ್ನು ಸಂಗ್ರಹಿಸಲು ಅನುಷ್ಕಾ ಮತ್ತು ನಾನು (ವಿರಾಟ್) ಕೆಟ್ಟೊದಲ್ಲಿ ಅಭಿಯಾನವನ್ನು (campaign on Ketto) ಪ್ರಾರಂಭಿಸಿದ್ದೇವೆ ಮತ್ತು ನಿಮ್ಮ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಜೀವ ಉಳಿಸಲು ಯಾವುದೇ ಪ್ರಮಾಣವು ತುಂಬಾ ಚಿಕ್ಕದಲ್ಲ. ಈ ಹೋರಾಟದಲ್ಲಿ ನಿಮ್ಮ ಸಹಾಯ ಅತ್ಯಗತ್ಯ. ನಮ್ಮ ಈ ಅಭಿಯಾನದಲ್ಲಿ ನೀವು ಕೈಜೋಡಿಸಿ. ನಮ್ಮ ದೇಶವನ್ನು ಸುರಕ್ಷಿತವಾಗಿ ಮತ್ತು  ಸದೃಢವಾಗಿಡಲು ನಮ್ಮ ಕೈಲಾದದ್ದನ್ನು ಮಾಡೋಣ ಎಂದು ವಿರಾಟ್ ಕೊಹ್ಲಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News