ಅರ್ಜುನ್ ಕಪೂರ್-ಮಲೈಕಾ ಲವ್ವಿ ಡವ್ವಿಗೆ ಅನಿಲ್ ಕಪೂರ್ ಏನ್ ಹೇಳಿದ್ರು ಗೊತ್ತಾ?

ಬಾಲಿವುಡ್ ನಲ್ಲಿ ಈಗ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ಸುದ್ದಿಯೆಂದರೆ ಅದು ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವಿನ ಡೇಟಿಂಗ್ ಸುದ್ದಿ.

Last Updated : Dec 9, 2018, 05:18 PM IST
ಅರ್ಜುನ್ ಕಪೂರ್-ಮಲೈಕಾ ಲವ್ವಿ ಡವ್ವಿಗೆ ಅನಿಲ್ ಕಪೂರ್ ಏನ್ ಹೇಳಿದ್ರು ಗೊತ್ತಾ? title=

ನವದೆಹಲಿ: ಬಾಲಿವುಡ್ ನಲ್ಲಿ ಈಗ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ಸುದ್ದಿಯೆಂದರೆ ಅದು ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವಿನ ಡೇಟಿಂಗ್ ಸುದ್ದಿ.

ಅಷ್ಟಕ್ಕೂ ಈ ಸುದ್ದಿ ಹೆಚ್ಹು ವೈರಲ್ ಆಗುತಿರುವುದಕ್ಕೆ ಕಾರಣವೂ ಇದೇ ಏಕಂದರೆ ಅರ್ಬಾಜ್ ಖಾನ್ ಗೆ ಗುಡ್ ಬೈ ಹೇಳಿದ ನಂತರ ಈಗ ಮಲೈಕಾ ಆರೋರಾ ಈಗ ಅರ್ಜುನ್ ಕಪೂರ್ ಸೆಳೆತಕ್ಕೆ ಒಳಗಾಗಿದ್ದಾರೆ.ಇತ್ತೀಚೆಗಷ್ಟೇ ಅವರು ಮುಂಬೈವೊಂದರ ಹೋಟೆಲ್ ಗೆ ಪಾರ್ಟಿಗೆ ಜೋತೆಯಾಗಿ ಹೋಗಿದ್ದ ಈ ಜೋಡಿ ಯಾರಿಗೂ ಗೊತ್ತಾಗುವುದು ಬೇಡವೆಂದು ಅರ್ಜುನ್ ಕಪೂರ್ ಮುಖವನ್ನು ಮುಚ್ಚಿಕೊಂಡು ಕಾರಿನತ್ತ ಓಡಿಹೋಗಿದ್ದರು.ಆದರೂ ಮಾಧ್ಯಮದವರು ಈ ಫೋಟೋಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಈ ಇಬ್ಬರ ಜೋಡಿಯ ನಡುವೆ ಸಾಕಷ್ಟು ವಯಸ್ಸಿನ ಅಂತರವಿದೆ.ಆದ್ರೆ ಪ್ರೀತಿಗೆ ಯಾವ ಬಂದವೂ ಇಲ್ಲ ಎನ್ನುವಂತೆ ಈ ಜೋಡಿ ಮಾತ್ರ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇದೆ. ಈಗ ಮಲೈಕಾ ಮತ್ತು ಅರ್ಜುನ್ ಕಪೂರ್ ಸಂಬಂಧದ ವಿಚಾರ ಮನೆಯವರೆಗೂ ತಲುಪಿದೆ. ಅರ್ಜುನ್ ಕಪೂರ್ ಚಿಕ್ಕಪ್ಪನಾಗಿರುವ ಅನಿಲ್ ಕಪೂರ್ ಗೆ ಈ ವಿಚಾರವಾಗಿ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿರುವ ಅವರು "ನನಗೆ ಅರ್ಜುನ್ ಚೆನ್ನಾಗಿ ಗೊತ್ತು, ಅವನಿಗೆ ಯಾವುದು ತೃಪ್ತಿಯನ್ನು ತರುತ್ತದೆಯೋ ಅದೂ ನಮಗೂ ಸಹ ಸಂತೋಷವನ್ನು ಮಾಡುತ್ತದೆ " ಎಂದು  ಹೇಳಿದ್ದಾರೆ. ಆ ಮೂಲಕ ಇಬ್ಬರ ನಡುವಿನ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಈ ಜೋಡಿಗೆ ಕಂಕಣ ಭಾಗ್ಯವು ಕೂಡಿ ಬಂದರೆ ಅಚ್ಚರಿ ಇಲ್ಲವೆನ್ನಬಹುದು. 

Trending News