ʼವಾಟ್ಸಾಪ್ ಚಾನೆಲ್‌ʼ ಸೃಷ್ಟಿಕರ್ತನನ್ನೇ ಹಿಂದಿಕ್ಕಿದ ಕತ್ರಿನಾ..! ಟಾಪ್‌ 9 ಸೆಲೆಬ್ರಿಟಿ ಲಿಸ್ಟ್‌ ಇಲ್ಲಿದೆ

Whatsapp channels list : ಇತ್ತೀಚಿಗೆ ಪ್ರಾರಂಭವಾದ ವಾಟ್ಸಾಪ್ ಚಾನೆಲ್‌ನಲ್ಲಿ ಕೆಲವು ಸೆಲೆಬ್ರಿಟಿಗಳ ಫ್ಯಾನ್ಸ್‌ ಫಾಲೋಯಿಂಗ್ ವಿಪರೀತವಾಗಿ ಹೆಚ್ಚುತ್ತಿದೆ. ಈ ಪೈಕಿ ಟಾಪ್ 9 ಸೆಲೆಬ್ರಿಟಿಗಳ ಲಿಸ್ಟ್‌ ಇಲ್ಲಿದೆ.

Written by - Krishna N K | Last Updated : Sep 28, 2023, 02:54 PM IST
  • ವಾಟ್ಸಾಪ್ ಚಾನೆಲ್‌ನಲ್ಲಿ ಕೆಲವು ಸೆಲೆಬ್ರಿಟಿಗಳ ಫ್ಯಾನ್ಸ್‌ ಫಾಲೋಯಿಂಗ್ ವಿಪರೀತವಾಗಿ ಹೆಚ್ಚುತ್ತಿದೆ.
  • ಈ ವೈಶಿಷ್ಟ್ಯ ಪ್ರಾರಂಭವಾದ ಕೆಲವು ದಿನಗಳಲ್ಲೇ ಕೆಲ ಸೆಲೆಬ್ರಿಟಿಗಳು ಅನುಯಾಯಿಗಳ ವಿಚಾರದಲ್ಲಿ ದಾಖಲೆ ನಿರ್ಮಿಸಿದ್ದಾರೆ.
  • ವಾಟ್ಸಾಪ್ ಚಾನೆಲ್‌ಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳು ಯಾರು ಅಂತ ಈಗ ತಿಳಿಯೋಣ ಬನ್ನಿ.
ʼವಾಟ್ಸಾಪ್ ಚಾನೆಲ್‌ʼ ಸೃಷ್ಟಿಕರ್ತನನ್ನೇ ಹಿಂದಿಕ್ಕಿದ ಕತ್ರಿನಾ..! ಟಾಪ್‌ 9 ಸೆಲೆಬ್ರಿಟಿ ಲಿಸ್ಟ್‌ ಇಲ್ಲಿದೆ title=

Whatsapp channels top list india : ವಾಟ್ಸಾಪ್‌ ಮುಖ್ಯಸ್ಥ ಮಾರ್ಕ್ ಇತ್ತೀಚೆಗೆ ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಹೊಸ ಫೀಚರ್‌ ಅನ್ನು ಪರಿಚಯಿಸಿದರು. ಅದೇ ವಾಟ್ಸಾಪ್ ಚಾನೆಲ್. ಇತರ ಸಾಮಾಜಿಕ ಮಾಧ್ಯಮ ಆಪ್‌ಗಳಲ್ಲಿರುವಂತೆ, ಸೆಲೆಬ್ರಿಟಿಗಳನ್ನು ಈ ಫೀಚರ್‌ ಮೂಲಕ ಅನುಸರಿಸಬಹುದು. ಈ ವೈಶಿಷ್ಟ್ಯ ಪ್ರಾರಂಭವಾದ ಕೆಲವು ದಿನಗಳಲ್ಲೇ ಕೆಲ ಸೆಲೆಬ್ರಿಟಿಗಳು ಅನುಯಾಯಿಗಳ ವಿಚಾರದಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳಾದ ಕತ್ರಿನಾ ಕೈಫ್, ಅಕ್ಷಯ್ ಕುಮಾರ್, ಸನ್ನಿ ಲಿಯೋನ್ ಈಗಾಗಲೇ ವಾಟ್ಸಾಪ್ ಚಾನೆಲ್‌ಗಳನ್ನು ರಚಿಸಿದ್ದಾರೆ. ದಕ್ಷಿಣದ ಸೆಲೆಬ್ರಿಟಿಗಳಾದ ವಿಜಯ್‌ ದೇವರಕೊಂಡ, ಮೊಹನ್‌ಲಾಲ್ ಮತ್ತು ಮಮ್ಮುಟ್ಟಿ ಕೂಡ ಈ ಪಟ್ಟಿಯಲ್ಲಿದ್ದಾರೆ. ಬಳಕೆದಾರರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಂದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು WhatsApp ಚಾನಲ್‌ಗಳ ಮೂಲಕ ಪಡೆಯಬಹುದು. ವಾಟ್ಸಾಪ್ ಚಾನೆಲ್‌ಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳು ಯಾರು ಅಂತ ಈಗ ತಿಳಿಯೋಣ ಬನ್ನಿ.

ಇದನ್ನೂ ಓದಿ: ʼಎಡಗೈಯೇ ಅಪಘಾತಕ್ಕೆ ಕಾರಣʼ ವಿಶೇಷ ಪಾತ್ರದಲ್ಲಿ ನಿರೂಪ ಭಂಡಾರಿ

ಕತ್ರಿನಾ ಕೈಫ್ : ವಾಟ್ಸಾಪ್ ಚಾನೆಲ್‌ಗಳನ್ನು ಅನುಸರಿಸುವ ವಿಷಯದಲ್ಲಿ ಕತ್ರಿನಾ ಕೈಫ್ ಇತರ ಸೆಲೆಬ್ರಿಟಿಗಳನ್ನು ಮೀರಿಸಿದ್ದಾರೆ. 13.7 ಮಿಲಿಯನ್ ಅನುಯಾಯಿಗಳು ಪ್ರಸ್ತುತ ಕತ್ರಿನಾ ಕೈಫ್ ಅನ್ನು ವಾಟ್ಸಾಪ್ ಚಾನೆಲ್‌ನಲ್ಲಿ ಅನುಸರಿಸುತ್ತಿದ್ದಾರೆ.  ಕತ್ರಿನಾ ಮೆಟಾದ ಏಕೈಕ ನಾಯಕ ಜುಕರ್‌ಬರ್ಗ್‌ನನ್ನು ಮೀರಿಸಿ ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ. ಸದ್ಯ ಜುಕರ್ ಕೇವಲ 9.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಅಕ್ಷಯ್ ಕುಮಾರ್ :  ನಟ ಅಕ್ಷಯ್‌ ಕುಮಾರ್‌ ಅವರನ್ನು ವಾಟ್ಸಾಪ್ ಚಾನೆಲ್‌ನಲ್ಲಿ ಹೆಚ್ಚಿನ ಬಳಕೆದಾರರು ಹಿಂಬಾಲಿಸುತ್ತಿದ್ದಾರೆ. ಈಗಾಗಲೇ 7.7 ಮಿಲಿಯನ್ ಬಳಕೆದಾರರು ಅವರನ್ನು ಫಾಲೋ ಮಾಡುತ್ತಿದ್ದಾರೆ. ತಮ್ಮ ಚಾನೆಲ್‌ನಲ್ಲಿ ಅಕ್ಷಯ್ ತಮ್ಮ ಅಭಿಮಾನಿಗಳೊಂದಿಗೆ ಸಿನಿಮಾಗಳ ಬಗ್ಗೆ ಮಾತ್ರವಲ್ಲದೆ ತಮ್ಮ ಸಾಮಾಜಿಕ ಸೇವಾ ಚಟುವಟಿಕೆಗಳು ಮತ್ತು ಫಿಟ್ನೆಸ್ ಸಲಹೆಗಳ ಬಗ್ಗೆಯೂ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಶಾರುಖ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌..! ʼಜವಾನ್‌ʼ 1 ಟಿಕೆಟ್‌ ಖರೀದಿಸಿದ್ರೆ 1 ಉಚಿತ

ದಿಲ್ಜಿತ್ ದೋಸಾಂಜ್ : ಪಂಜಾಬಿ ಮತ್ತು ಬಾಲಿವುಡ್ ಗಾಯಕ ದಿಲ್ಜಿತ್ ದೋಸಾಂಜ್ ಅನೇಕ ಹಾಲಿವುಡ್ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ವಾಟ್ಸಾಪ್‌ನಲ್ಲಿ ಅವರ ಅನುಯಾಯಿಗಳನ್ನು ಹೆಚ್ಚಿಸಿದ್ದಾರೆ. ದಿಲ್ಜಿತ್ ಅವರ ವಾಟ್ಸಾಪ್ ಚಾನೆಲ್ ಈಗಾಗಲೇ 5 ಮಿಲಿಯನ್ ಹಿಂಬಾಲಕರನ್ನು ಹೊಂದಿದೆ. ಗಾಯಕ ಹೆಚ್ಚಾಗಿ ವಾಟ್ಸಾಪ್ ಚಾನೆಲ್‌ಗಳಲ್ಲಿ ತನ್ನ ದೈನಂದಿನ ದಿನಚರಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತಾನೆ.

ಸನ್ನಿ ಲಿಯೋನ್ : ಒಂದು ಕಾಲದಲ್ಲಿ ಪೋರ್ನ್ ಸ್ಟಾರ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸನ್ನಿ ಲಿಯೋನ್‌ ಸಧ್ಯ ಬಾಲಿವುಡ್‌ನಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ. ಈಗ ಅವರ ಸಾಮಾಜಿಕ ಸೇವಾ ಚಟುವಟಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಸನ್ನಿ ವಾಟ್ಸಾಪ್ ಚಾನೆಲ್‌ ಅನ್ನು 4.4 ಅನುಯಾಯಿಗಳು ಹಿಂಬಾಲಿಸುತ್ತಿದ್ದಾರೆ.

ಮೋನಾಲಿಸಾ : ಭೋಜ್‌ಪುರಿ ನಟಿ ಮೋನಾಲಿಸಾ ವಾಟ್ಸಾಪ್ ಚಾನೆಲ್‌ನಲ್ಲಿ 2.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ತಮ್ಮ ಆನ್-ಸ್ಕ್ರೀನ್ ಅನುಭವಗಳು, ಫ್ಯಾಷನ್ ಸಲಹೆಗಳು ಮತ್ತು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾಳೆ.

ಇದನ್ನೂ ಓದಿ:ಆಸ್ಟ್ರೇಲಿಯಾ ಬ್ಯಾಟರ್‌ ಮಾರ್ನಸ್ ಮುಂದೆ ವಿರಾಟ್ ಕೊಹ್ಲಿ ಡ್ಯಾನ್ಸ್‌ : ವಿಡಿಯೋ ವೈರಲ್‌

ಮೋಹನ್‌ ಲಾಲ್‌ : ಮಲಯಾಳಂ ಚಿತ್ರರಂಗದ ಲೆಜೆಂಡ್ ನಟ ಮೋಹನ್ ಲಾಲ್ ಕೂಡ ವಾಟ್ಸಾಪ್ ಚಾನೆಲ್‌ ಹೊಂದಿದ್ದಾರೆ. 1.2 ಮಿಲಿಯನ್ ಜನರು ಈಗಾಗಲೇ ಮೋಹನ್ ಲಾಲ್ ಅವರನ್ನು ಅನುಸರಿಸುತ್ತಿದ್ದಾರೆ. ಅವರು ಹೆಚ್ಚಾಗಿ ತಮ್ಮ ಚಲನಚಿತ್ರಗಳ ವಿವರವನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ವಿಜಯ್‌ ದೇವರಕೊಂಡ : ವಾಟ್ಸಾಪ್ ಚಾನೆಲ್‌ನಲ್ಲಿ ಫಾಲೋವರ್ಸ್ ಹೆಚ್ಚಿಸುತ್ತಿರುವ ಟಾಪ್ 9 ರಲ್ಲಿರುವ ಏಕೈಕ ತೆಲುಗು ಸೆಲೆಬ್ರಿಟಿ ವಿಜಯ್ ದೇವರಕೊಂಡ. ವಿಜಯ್, ಅತಿ ಕಡಿಮೆ ಸಮಯದಲ್ಲಿ ವಾಟ್ಸಾಪ್ ಚಾನೆಲ್ ನಲ್ಲಿ 1.2 ಮಿಲಿಯನ್ ಫಾಲೋವರ್ಸ್ ಗಳಿಸಿದ್ದಾರೆ. ಈ ವಿಚಾರದಲ್ಲಿ ಟಾಲಿವುಡ್ ಸೆಲೆಬ್ರಿಟಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನೇಹಾ ಕಕ್ಕರ್ : ಗಾಯಕಿ ನೇಹಾ ಕಕ್ಕರ್ ಅವರ ಧ್ವನಿಗೆ ಬಾಲಿವುಡ್‌ನಲ್ಲಿ ಪ್ರತ್ಯೇಕ ಅಭಿಮಾನಿ ಬಳಗವಿದೆ. ಹಿನ್ನೆಲೆ ಗಾಯಕಿಯಾಗಿ ಫುಲ್ ಕ್ರೇಜ್ ಗಳಿಸಿರುವ ನೇಹಾ ಈಗಾಗಲೇ ತಮ್ಮ ವಾಟ್ಸಾಪ್ ಚಾನೆಲ್ ನಲ್ಲಿ 1.1 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News