Yash : ಯಶ್‌ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಕೊಟ್ಟ ತಾಯಿ ಪುಷ್ಪ

ತಾಯಿ ಅಂದ್ರೆ ಆಕಾಶ. ತನ್ನ ಮಗುವನ್ನ ಒಂಭತ್ತು ತಿಂಗಳು ಹೆತ್ತು ಹೊತ್ತು ತನ್ನ ಸರ್ವಸ್ವವನ್ನೇ ತಾಯಿ ತನ್ನ ಮಕ್ಕಳಿಗಾಗಿ ಮುಡಿಪಾಗಿಡುತ್ತಾಳೆ. ಉಸಿರು ಇರೋವರೆಗೂ ಮಕ್ಕಳಿಗಾಗಿ ತ್ಯಾಗಮಯಿಯಾಗಿಯೇ ಇದ್ದು ಬಿಡುತ್ತಾರೆ. 

Written by - YASHODHA POOJARI | Last Updated : Apr 9, 2022, 02:37 PM IST
  • ಯಶ್‌ ಸಾಧನೆ ಬಗ್ಗೆ ತಾಯಿ ಪುಷ್ಟ ಮಾತು
  • ರಾಕಿಂಗ್‌ ಸ್ಟಾರ್‌ ಯಶ್‌ ವಿಚಾರದಲ್ಲಿ ಹೆತ್ತ ತಾಯಿಯೇ ಎಲ್ಲಾ ಆಗಿದ್ದರು
  • ಮಕ್ಕಳಿಗೆ ಏನೂ ಕೊರತೆಯಿಲ್ಲದಂತೆ ಸಾಕುತ್ತಿದ್ದ ಯಶ್‌ ತಾಯಿ
Yash : ಯಶ್‌ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಕೊಟ್ಟ ತಾಯಿ ಪುಷ್ಪ title=
Yash

ಜೀವನದಲ್ಲಿ ಹಿಂದೆ ಗುರು, ಮುಂದೆ ಗುರಿ ಇದ್ರೆ ಅಸಾಧ್ಯ ಅನ್ನೋ ಮಾತೇ ಇಲ್ಲ. ರಾಕಿಂಗ್‌ ಸ್ಟಾರ್‌ ಯಶ್‌ (Yash) ವಿಚಾರದಲ್ಲಿ ಹೆತ್ತ ತಾಯಿಯೇ ಎಲ್ಲಾ ಆಗಿದ್ದರು. ಗುರುವಾಗಿ, ಮಾರ್ಗದರ್ಶಕರಾಗಿ, ತಾಯಿಯಾಗಿ ಮಾಡಿರೋ ಕೆಲಸ ಮಾತ್ರ ಅದ್ಭುತ.

ತಾಯಿ ಅಂದ್ರೆ ಆಕಾಶ. ತನ್ನ ಮಗುವನ್ನ ಒಂಭತ್ತು ತಿಂಗಳು ಹೆತ್ತು ಹೊತ್ತು ತನ್ನ ಸರ್ವಸ್ವವನ್ನೇ ತಾಯಿ ತನ್ನ ಮಕ್ಕಳಿಗಾಗಿ ಮುಡಿಪಾಗಿಡುತ್ತಾಳೆ. ಉಸಿರು ಇರೋವರೆಗೂ ಮಕ್ಕಳಿಗಾಗಿ ತ್ಯಾಗಮಯಿಯಾಗಿಯೇ ಇದ್ದು ಬಿಡುತ್ತಾರೆ. ಅದೇ ರೀತಿ ಇವತ್ತು ಯಶಸ್ಸಿನ ಉತ್ತುಂಗದಲ್ಲಿರುವ ರಾಕಿಂಗ್‌ ಸ್ಟಾರ್‌ ಯಶ್‌ ಕುಟುಂಬದ ಹಿಂದಿನ ಜೀವನದ ಸ್ಟೋರಿ ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯೇ ಸರಿ.

ಇದನ್ನು ಓದಿ: V Ravichandran : ಕ್ರೇಜಿಸ್ಟಾರ್​ ರವಿಚಂದ್ರನ್​ಗೆ ಡಾಕ್ಟರೇಟ್ ನೀಡಿದ ಬೆಂಗಳೂರು ನಗರ ವಿವಿ

ತನ್ನ ಮಕ್ಕಳಿಗೆ ಏನೂ ಕೊರತೆಯಿಲ್ಲದಂತೆ ಸಾಕುತ್ತಿದ್ದ ಯಶ್‌ ತಾಯಿಗೆ ಅವರ ಕುಟುಂಬಸ್ಥರೇ ವಿರೋಧ ವ್ಯಕ್ತಪಡಿಸುತ್ತಿದ್ದರಂತೆ. ಯಶ್‌ ಬಾಲ್ಯದಲ್ಲಿರುವಾಗ ಅವರ ತಾಯಿಗೆ, ಗಂಡ ದುಡಿದ ಹಣವನ್ನೆಲ್ಲಾ ಎತ್ತಿಡದೆ ಮಕ್ಕಳಿಗಾಗಿ ಖರ್ಚು ಮಾಡುತ್ತಿದ್ದಾರೆ. ಹಿಂಗಾದ್ರೆ ಮುಂದೆ ಹೆಂಗೆ ಅನ್ನೋ ರೀತಿ ಸಂಬಂಧಿಕರು ಮಾತನಾಡಿಕೊಳ್ಳುತ್ತಿದ್ದರಂತೆ. ಆದರೆ ಯಶ್‌ ತಾಯಿ ಯಾರ ಮಾತಿಗೂ ಮಣೆ ಹಾಕದೇ ತಾವಾಯಿತು, ಮಕ್ಕಳಾಯಿತು ಅಂತ ಇದ್ದರಂತೆ.

ಯಶ್‌ ತಾಯಿ ಪುಷ್ಪ ಮಾತ್ರ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಬಡತನವಿದ್ದರೂ ಮಕ್ಕಳ ಆಸೆ ಏನಿದೆ ಅನ್ನೋದನ್ನ ನೀಗಿಸಲು ಪ್ರತಿದಿನ ಪ್ರತಿಕ್ಷಣ ಪರದಾಡುತ್ತಿದ್ದರಂತೆ. ಯಶ್‌ ಆರನೇ ತರಗತಿಯಲ್ಲಿದ್ದಾಗ ಪುಷ್ಪ ಅವರು ತಮ್ಮ ಮಗನಿಗಾಗಿ ಒಂದು ಬಟ್ಟೆಯನ್ನ ಶಾಪಿಂಗ್‌ ಮಾಡಿಕೊಂಡು ತಂದ್ರಂತೆ. ಆದ್ರೆ ಆ ಬಟ್ಟೆಯನ್ನ ಯಶ್‌ ಲೈಕ್‌ ಮಾಡದೇ, ನನಗೆ ಆ ಉಡುಪು ಯಾವುದೇ ಕಾರಣಕ್ಕೂ ಬೇಡವೆಂದು ಅದನ್ನ ಹಾಕಲೇ ಇಲ್ವಂತೆ. ಅಲ್ಲಿಂದ ಇಲ್ಲಿಯವರೆಗೂ ಯಶ್‌ಗೆ ಬೇಕಾದ ಶಾಪಿಂಗ್‌ ವಿಚಾರದಲ್ಲಿ ತಾಯಿ ತಲೆಕೆಡಿಸಿಕೊಂಡಿಲ್ಲ. ಮಗನ ಚಾಯ್ಸ್‌ಗೆ ಬಿಟ್ಟುಬಿಟ್ಟರಂತೆ.

ಇದನ್ನು ಓದಿ: ಈ ಕಾರಣಕ್ಕಾಗಿ ಕನ್ನಡಕ್ಕಿಂತಲೂ ತೆಲುಗಿನಲ್ಲಿ ಹೆಚ್ಚಿದ ಕೆಜಿಎಫ್‌-2 ಕ್ರೇಜ್...!

ಯಶ್‌ ಅಲಿಯಾಸ್‌ ನವೀನ್‌ ಪ್ರೀತಿಗೆ ಬಿದ್ದಂತಹ ಸಂದರ್ಭದಲ್ಲಿ ತಾಯಿ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದರು. ಆಗ ತಾಯಿ ಮೊದಲು ನೀನು ನಿನ್ನ ಕಾಲ ಮೇಲೆ ನಿಲ್ಲು. ಆಮೇಲೆ ಮದುವೆ ಆದ್ರೆ ಆಯ್ತು ಅಂತ ನೇರವಾಗಿ ಒಪ್ಪಿಗೆ ಸೂಚಿಸಿದ್ರಂತೆ. ನಾವು ತಂದ ಬಟ್ಟೆಯನ್ನೇ ಮೆಚ್ಚಿಕೊಳ್ಳದ ಮಗ ನಾವು ಹುಡುಕೋ ಸೊಸೆಯನ್ನ ಹೇಗೆ ಒಪ್ಪಲು ಸಾಧ್ಯ ಎಂದು ಸಂದರ್ಶನವೊಂದರಲ್ಲಿ ನಗುತ್ತಲೇ ಹೇಳಿದ್ದಾರೆ ಯಶ್‌ ತಾಯಿ ಪುಷ್ಪ.

ಆ ಕಾಲದಲ್ಲಿ ಮಕ್ಕಳಿಗೆ ಯೂಸ್‌ ಮಾಡೋ ಬೇಬಿ ಸೋಪ್‌ ಬೆಲೆ 90 ರೂಪಾಯಿ. ಕಷ್ಟವಾದರೂ ಮಗನಿಗೆ ಅದೇ ಸೋಪ್‌ ತಂದು ಸ್ನಾನ ಮಾಡಿಸುತ್ತಿದ್ವಿ ಅನ್ನೋ ನೆನಪನ್ನು ಕೂಡ ಮೆಲುಕು ಹಾಕಿದ್ದಾರೆ. ನನ್ನ ಮಗ ಮಾಡಿರೋ ಈ ಸಾಧನೆ ನನಗೆ ಶೂನ್ಯ ಅನಿಸುತ್ತಿದೆ. ನನ್ನ ಮಗ ಇನ್ನೂ ಏನೋ ಮಾಡಬೇಕು, ಮಾಡುತ್ತಾನೆ ಅನ್ನೋ ಭರವಸೆ ನನಗಿದೆ. ಈ ಯಶಸ್ಸಿನಿಂದ ನಂಗೆ ಖುಷಿ ಸಿಕ್ಕಿಲ್ಲ ಅನ್ನೋದನ್ನ ಕೂಡ ಇದೇ ಸಂದರ್ಭದಲ್ಲಿ ಹೇಳಿದ್ದಾರೆ ಯಶ್‌ ತಾಯಿ.

ವಿಶ್ವಮಟ್ಟದಲ್ಲಿ ಮಗನ ಸಾಧನೆ ಬಗ್ಗೆ ಟಾಕ್‌ ನಡೆದರೂ ತಾಯಿ ಪುಷ್ಪ, ನನ್ನ ಮಗನ ಸಾಧನೆ ಇಷ್ಟೇ ಅಲ್ಲ ಇನ್ನೂ ಸಾಧಿಸೋದು ಬಾಕಿ ಇದೆ ಅಂತಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ತಾಯಿ ಇದೇ ರೀತಿ ಸಪೋರ್ಟ್‌ ಮಾಡಿದ್ರೆ ಇಂತಹ ನೂರಾರು ಯಶ್‌ ಭೂಮಿ ಮೇಲೆ ಅಭೂತಪೂರ್ವ ಸಾಧನೆಗಳನ್ನ ಮಾಡಲು ಪ್ರೇರೇಪಣೆ ಸಿಕ್ಕಂತಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News