ಸೋಷಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡ್ತಿದೆ 'ಯೋಗಿ ದುನಿಯಾ' ಚಿತ್ರದ `ಜನನಾ ಮರಣಾ' ಹಾಡು...

 ಈ ಚಿತ್ರದ ಹಾಡುಗಳಲ್ಲಿ ಯೋಗಿ ಡ್ಯಾನ್ಸ್ ಮಾಡಿರೋ 'ಜೋರು ಮಗಾ ಬಾರೋ ಮಗಾ ...' ಹಾಡು ಸಖತ್ ಹಿಟ್ ಆಗಿದೆ.

Updated: Mar 13, 2018 , 02:05 PM IST
ಸೋಷಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡ್ತಿದೆ 'ಯೋಗಿ ದುನಿಯಾ' ಚಿತ್ರದ `ಜನನಾ ಮರಣಾ' ಹಾಡು...

ಬೆಂಗಳೂರು: ಲೂಸ್ ಮಾದ ಯೋಗಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಯೋಗಿ ದುನಿಯಾ’. ಬಹು ಸಮಯದ ನಂತರ ತಮ್ಮದೇ ಬ್ಯಾನರ್ನಲ್ಲಿ ಮಾಡುತ್ತಿರುವ ಈ ಚಿತ್ರದಲ್ಲಿ ಸಿಹಿಕಹಿ ಚಂದ್ರು ಅವರ ಪುತ್ರಿ ಹಿತ ಚಂದ್ರಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

ಅಷ್ಟೇ ಅಲ್ಲ, ಯೋಗಿ ಮದುವೆಯಾದ ನಂತರ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಚಿತ್ರ 'ಯೋಗಿ ದುನಿಯಾ'. ಇದೀಗ ಈ ಚಿತ್ರದ ಹಾಡುಗಳಲ್ಲಿ ಯೋಗಿ ಡ್ಯಾನ್ಸ್ ಮಾಡಿರೋ 'ಜೋರು ಮಗಾ ಬಾರೋ ಮಗಾ ...' ಹಾಡು ಸಖತ್ ಹಿಟ್ ಆಗಿದೆ. ಈ ಹಾಡಿಗೆ ಯೋಗಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. 

ಈ ಹಾಡಿನೊಂದಿಗೆ ಚಿತ್ರದ 'ಜನನಾ ಮರಣಾ…' ಅಂತ ಚಿತ್ರದ ನಾಯಕಿಯ ಪರಿಸ್ಥಿತಿಯನ್ನು ಬಿಚ್ಚಿಡುವ ಹಾಡು ಎಲ್ಲರ ಮನಗೆದ್ದಿದೆ. ಭರತ್‌ ಬಿಜೆ ಸಂಗೀತ ಸಂಯೋಜನೆಗೆ ಗಾಯಕಿ ಇಂಚರಾ ರಾವ್‌ ಧ್ವನಿಗೂಡಿಸಿದ್ದಾರೆ. ಬಹಳ ಇಮ್ಪಾಗಿರುವ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಹಳ ಹಿಟ್ ಆಗಿದೆ. 

ಹರಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಎನ್.ವೆಂಕಟೇಶ್ ಬಾಬು, ಮಹೇಶ್ ಸಿದ್ದರಾಜು ಬಂಡವಾಳ ಹಾಕಿದ್ದಾರೆ. ಸದ್ಯದಲ್ಲೇ ‘ಯೋಗಿ ದುನಿಯಾ’ ಚಿತ್ರ ಬಿಡುಗಡೆಯಾಗಲಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಯಾವ ಮಟ್ಟಕ್ಕೆ ಹವಾ ಕ್ರಿಯೇಟ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.