Benefits of Walking : ಊಟ ಮಾಡಿದ ನಂತರ ವಾಕಿಂಗ್ ಮಾಡುವುದರಿಂದ ಎಷ್ಟು ಲಾಭ ಗೊತ್ತಾ? 

ಆಹಾರ ಸೇವಿಸಿದ ನಂತರ ನೀವು 15 ರಿಂದ 20 ನಿಮಿಷಗಳ ಕಾಲ ವಾಕ್ ಮಾಡಿ. ಇದರಿಂದ ನಿಮಗೆ ಸ್ಥೂಲಕಾಯ ಸಮಸ್ಯೆ ಬರುವುದಿಲ್ಲ.

Written by - Channabasava A Kashinakunti | Last Updated : Aug 18, 2021, 04:14 PM IST
  • ನೀವು ತೂಕ ಇಳಿಸಿಕೊಳ್ಳಲು ರಾತ್ರಿ ಊಟದ ನಂತರ ವಾಕಿಂಗ್ ಮಾಡಿ
  • ಟೈಪ್ 2 ಡಯಾಬಿಟಿಸ್ ಇರುವ ರೋಗಿಗಳಿಗೆ ಊಟ ಮಾಡಿದ ನಂತರ ವಾಕ್
  • ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ಆರಂಭ
Benefits of Walking : ಊಟ ಮಾಡಿದ ನಂತರ ವಾಕಿಂಗ್ ಮಾಡುವುದರಿಂದ ಎಷ್ಟು ಲಾಭ ಗೊತ್ತಾ?  title=

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ರಾತ್ರಿ ಊಟದ ನಂತರ ವಾಕಿಂಗ್ ಮಾಡಿ. ಇದರಿಂದ ನೀವು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಊಟದ ನಂತರ ವಾಕ್ ಮಾಡುವ ಮೂಲಕ, ನಮ್ಮ ದೇಹದ ಪ್ರತಿಯೊಂದು ಭಾಗ ಮತ್ತು ಸ್ನಾಯುಗಳು ಸರಿಯಾಗಿ ಕೆಲಸ ಮಾಡುತ್ತವೆ. ಈ ಕಾರಣದಿಂದಾಗಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಟೈಪ್ 2 ಡಯಾಬಿಟಿಸ್ ಇರುವ ರೋಗಿಗಳಿಗೆ ಊಟ ಮಾಡಿದ ನಂತರ ಸ್ವಲ್ಪ ವಾಕ್ ಮಾಡಿದರೆ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನ ಕಡಿಮೆ ಮಾಡುತ್ತದೆ.

ನೀವು ಎಷ್ಟು ಹೊತ್ತು ವಾಕ್ ಮಾಡಬೇಕು?

ಡಾ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಊಟ ಮಾಡಿದ ನಂತರ, ನೀವು ಪ್ರತಿದಿನ ಕನಿಷ್ಠ 15-20 ನಿಮಿಷಗಳ ಕಾಲ ವಾಕ್(Walking) ಮಾಡಬೇಕು. ನಿಮಗೆ ಹೆಚ್ಚು ಸಮಯವಿದ್ದರೆ ನೀವು ಅದನ್ನು ಹೆಚ್ಚಿಸಬಹುದು, ಆದರೆ ನೀವು ಊಟ ಮಾಡಿದ ಒಂದು ಗಂಟೆಯೊಳಗೆ ನಡೆಯಬೇಕು ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ : Expert Advice : ಮಧ್ಯಾಹ್ನ ಅನ್ನ ಊಟ ಮಾಡಿದ್ರೆ ಏಕೆ ಬೇಗ ನಿದ್ರೆ ಬರುತ್ತೆ ಗೊತ್ತಾ? ಇಲ್ಲಿದೆ ನೋಡಿ ತಜ್ಞರ ಸಲಹೆ

ತಿಂದ ನಂತರ ವಾಕ್ ಮಾಡುವುದರಿಂದ ಆಗುವ ಲಾಭಗಳು :

1. ಜೀರ್ಣಕ್ರಿಯೆ ಸುಧಾರಿಸುತ್ತದೆ

ಊಟ(Dinner)ದ ನಂತರ ವಾಕ್ ಮಾಡುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಹೊಟ್ಟೆ ಉಬ್ಬುವುದನ್ನು ಕಡಿಮೆ ಮಾಡುತ್ತದೆ, ಮಲಬದ್ಧತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದೇ ಇತರ ಹೊಟ್ಟೆ ಸಂಬಂಧಿತ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.

2. ತೂಕ ಇಳಿಕೆ ಸಹಾಯ

ಆಹಾರ(Food) ಸೇವಿಸಿದ ನಂತರ ನೀವು 15 ರಿಂದ 20 ನಿಮಿಷಗಳ ಕಾಲ ವಾಕ್ ಮಾಡಿ. ಇದರಿಂದ ನಿಮಗೆ ಸ್ಥೂಲಕಾಯ ಸಮಸ್ಯೆ ಬರುವುದಿಲ್ಲ. ಏಕೆಂದರೆ ವಾಕಿಂಗ್ ಚಯಾಪಚಯ ಕ್ರಿಯೆಯನ್ನ ಹೆಚ್ಚಿಸುತ್ತದೆ. ನಿಮ್ಮ ಚಯಾಪಚಯವು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ : Skin Care: ಕೇವಲ 2 ಚಮಚ ಮೊಸರನ್ನು ಮುಖಕ್ಕೆ ಹಚ್ಚಿ ಚರ್ಮದ ಸಮಸ್ಯೆಗಳಿಗೆ ಹೇಳಿ ಬೈ! ಬೈ!

3. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ

ಊಟದ ನಂತರ ವಾಕಿಂಗ್ ಮಾಡುವುದರಿಂದ ರೋಗನಿರೋಧಕ ಶಕ್ತಿ(Immunity Power)ಯನ್ನು ಹೆಚ್ಚಿಸುತ್ತದೆ, ಏಕೆಂದರೆ ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯಿಂದ ವಿಷವನ್ನು ಹೊರಹಾಕುತ್ತದೆ. ವಾಕಿಂಗ್ ನಮ್ಮ ಆಂತರಿಕ ಅಂಗಗಳಿಗೆ ಉತ್ತಮವಾಗಿ ಕೆಲಸ ಮಾಡುತ್ತದೆ.

4. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತರ, ನಿಮ್ಮ ದೇಹದಲ್ಲಿ ರಕ್ತ(Blood)ದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ಆರಂಭವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಊಟದ ನಂತರ ನೀವು ವಾಕ್ ಮಾಡಿದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ, ಇದರಿಂದಾಗಿ ಹೈಪರ್ಗ್ಲೈಸೀಮಿಯಾ ಅಪಾಯ ಬರುವುದಿಲ್ಲ.

ಇದನ್ನೂ ಓದಿ : Vegetables For Eyes: ದುರ್ಬಲ ಕಣ್ಣುಗಳನ್ನು ಬಲಪಡಿಸಲು ನಿಮ್ಮ ಆಹಾರದಲ್ಲಿರಲಿ ಈ ತರಕಾರಿಗಳು

5. ಖಿನ್ನತೆಯನ್ನ ತಡೆಯುತ್ತದೆ

ಊಟದ ನಂತರ ವಾಕ್ ಮಾಡುವುದು ನಿಮ್ಮ ದೇಹದಲ್ಲಿ ಎಂಡಾರ್ಫಿನ್ ಗಳನ್ನು ಬಿಡುಗಡೆ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News