ಬೆಳಗ್ಗಿನ ಉಪಹಾರದಲ್ಲಿ ಇದನ್ನೇ ಸೇವಿಸಿ :ಬಾಯಿ ರುಚಿ ಹೆಚ್ಚಿಸುವುದರ ಜೊತೆಗೆ ಬ್ಲಡ್ ಶುಗರ್ ಅನ್ನು ಕೂಡಾ ಏರಲು ಬಿಡುವುದಿಲ್ಲ

Best option for breakfast :ಮಧುಮೇಹ ರೋಗಿಗಳಿಗೆ ಬೆಳಗಿನ ಉಪಾಹಾರವು ಮುಖ್ಯವಾಗಿರುತ್ತದೆ. ಮಧುಮೇಹ ರೋಗಿಗಳು ಸಮಯ ಸಮಯಕ್ಕೆ ಆಹಾರ ಸೇವಿಸುತ್ತಲೇ ಇರಬೇಕು. ಇಲ್ಲವಾದರೆ ಬ್ಲಡ್ ಶುಗರ್ ಹೆಚ್ಚಾಗುವ ಅಪಾಯ ಇರುತ್ತದೆ.   

Written by - Ranjitha R K | Last Updated : May 21, 2024, 01:36 PM IST
  • ಇಲ್ಲಿನ ಪಾಕ ವಿಧಾನ ದೇಶ ವಿದೇಶಗಳಲ್ಲಿ ಪ್ರಸಿದ್ದವಾಗಿದೆ.
  • ಪ್ರದೇಶದಿಂದ ಪ್ರದೇಶಕ್ಕೆ ಆಹಾರ ಪದ್ದತಿಗಳು ಕೂಡಾ ಬದಲಾಗುತ್ತಿರುತ್ತವೆ.
  • ಆರೋಗ್ಯಕರ ಉಪಹಾರ ಅಗತ್ಯ
ಬೆಳಗ್ಗಿನ ಉಪಹಾರದಲ್ಲಿ ಇದನ್ನೇ ಸೇವಿಸಿ :ಬಾಯಿ ರುಚಿ ಹೆಚ್ಚಿಸುವುದರ ಜೊತೆಗೆ ಬ್ಲಡ್ ಶುಗರ್ ಅನ್ನು ಕೂಡಾ ಏರಲು ಬಿಡುವುದಿಲ್ಲ title=

Best option for breakfast : ಭಾರತವು ತಿನಿಸುಗಳ ದೇಶವಾಗಿದೆ.ಇಲ್ಲಿನ ಪಾಕ ವಿಧಾನ ದೇಶ ವಿದೇಶಗಳಲ್ಲಿ ಪ್ರಸಿದ್ದವಾಗಿದೆ.ಪ್ರದೇಶದಿಂದ ಪ್ರದೇಶಕ್ಕೆ ನಮ್ಮ ಸಂಸ್ಕೃತಿ ಬದಲಾಗುವ ಹಾಗೆ ಆಹಾರ ಪದ್ದತಿಗಳು ಕೂಡಾ ಬದಲಾಗುತ್ತಿರುತ್ತವೆ.ಅವುಗಳಲ್ಲಿ ಬಹಳಷ್ಟು ಆಹಾರ ಆರೋಗ್ಯಕ್ಕೆ ಅನುಕೂಲಕರವಾಗಿರುತ್ತವೆ.ಮಧುಮೇಹ ರೋಗಿಗಳಿಗೆ ಬೆಳಗಿನ ಉಪಾಹಾರವು ಮುಖ್ಯವಾಗಿರುತ್ತದೆ. ಮಧುಮೇಹ ರೋಗಿಗಳು ಸಮಯ ಸಮಯಕ್ಕೆ ಆಹಾರ ಸೇವಿಸುತ್ತಲೇ ಇರಬೇಕು. ಇಲ್ಲವಾದರೆ ಬ್ಲಡ್ ಶುಗರ್ ಹೆಚ್ಚಾಗುವ ಅಪಾಯ ಇರುತ್ತದೆ. 

ಆರೋಗ್ಯಕರ ಉಪಹಾರ ಅಗತ್ಯ : 
ತಜ್ಞರ ಪ್ರಕಾರ, ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಯಾವಾಗಲೂ ಆರೋಗ್ಯಕರ ಉಪಹಾರವನ್ನೇ ಸೇವಿಸಬೇಕು.ಬೆಳಗಿನ ಉಪಾಹಾರದಲ್ಲಿ ಸಾಕಷ್ಟು ಆರೋಗ್ಯಕರ ಕೊಬ್ಬು,ಪ್ರೋಟೀನ್,ಫೈಬರ್ ಮತ್ತು  ಕಡಿಮೆ ಕಾರ್ಬೋಹೈಡ್ರೇಟ್‌ಗಳಿರುವ ಆಹಾರ ಸೇವಿಸಬೇಕು.ಈ ಪ್ರಕಾರ ನೋಡುವುದಾದರೆ ಮಧುಮೇಹ ರೋಗಿಗಳು ಪೋಹಾ ಅಥವಾ ಅವಲಕ್ಕಿ ಸೇವಿಸಬೇಕು.ಇದು ಕಬ್ಬಿಣ, ಫೈಬರ್ ಮತ್ತು ವಿಟಮಿನ್ ಗಳಿಂದ  ಸಮೃದ್ಧವಾಗಿದೆ.

ಇದನ್ನೂ ಓದಿ : International Tea Day: ಮಧುಮೇಹ ನಿಯಂತ್ರಣಕ್ಕೆ ಚಮತ್ಕಾರಿ ಚಹಾಗಳಿವು

ಅವಲಕ್ಕಿ ಪ್ರಯೋಜನಗಳು : 
ಅಕ್ಕಿಯನ್ನು ಚಪ್ಪಟೆ ಮಾಡುವ ಮೂಲಕ ಅವಲಕ್ಕಿಯನ್ನು   ತಯಾರಿಸಲಾಗುತ್ತದೆ.ಇದನ್ನು ತಯಾರಿಸುವಾಗ ತರಕಾರಿಗಳು,ನಿಂಬೆ, ಕಡಲೆಕಾಯಿ ಮತ್ತು ಕೊತ್ತಂಬರಿ ಸಹ ಸೇರಿಸಲಾಗುತ್ತದೆ.ಇದರಿಂದಾಗಿ ಅದು ಹೆಚ್ಚು ಆರೋಗ್ಯಕರವಾಗುತ್ತದೆ. 

ಅವಲಕ್ಕಿ ತೂಕ ನಷ್ಟ ಮಾಡಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.ಇದು ಹೃದ್ರೋಗ,ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಕ್ಯಾನ್ಸರ್ ರೋಗಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.ಇದು ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಅವಲಕ್ಕಿಯಲ್ಲಿ ಫೈಬರ್‌ ಅಧುಕ ಪ್ರಮಾಣದಲ್ಲಿ ಇರುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿದೆ.

ಇದನ್ನೂ ಓದಿ :  Health Tips: ಹೃದಯದ ಸಮಸ್ಯೆ ಕ್ಯಾನ್ಸರ್‌ & ಮಲಬದ್ಧತೆಗೆ ಅತ್ತಿ ಹಣ್ಣು ರಾಮಬಾಣ

ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.ಅಕ್ಕಿಯನ್ನು ಕುದಿಸಿ ಬಿಸಿಲಿನಲ್ಲಿ ಒಣಗಿಸಿ ಅವಲಕ್ಕಿ ಮಾಡುತ್ತಾರೆ.ಹುದುಗುವಿಕೆಯ ಸಮಯದಲ್ಲಿ,ಅದರಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಕಡಿಮೆ ಕ್ಯಾಲೋರಿಗಳ ಕಾರಣ,ಇದು ಮಧುಮೇಹ ರೋಗಿಗಳಿಗೆ ಆರೋಗ್ಯಕರ ಆಯ್ಕೆಯಾಗಿದೆ.

(ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ. ) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News