ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಒಂದಿಷ್ಟು ಸಲಹೆ!

'ರೋಗವನ್ನು ಗುಣಪಡಿಸುವುದಕ್ಕಿಂತ ಅದು ಬರದಂತೆ ತಡೆಗಟ್ಟುವುದೇ ಲೇಸು' ಎಂಬ ಮಾತಿದೆ. ಹಾಗಾಗಿ ನೀವು ಚಳಿಗಾಲದಲ್ಲಿ ಆರೋಗ್ಯವಾಗಿರಲು ಐದು ಉತ್ತಮ ಸಲಹೆಗಳು ಇಲ್ಲಿವೆ.

Last Updated : Dec 28, 2018, 02:55 PM IST
ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಒಂದಿಷ್ಟು ಸಲಹೆ! title=

ಈಗಾಗಲೇ ಚಳಿಗಾಲ ಆರಂಭವಾಗಿದೆ. ಕೆಲವರಿಗೆ ಚಳಿ ಇಷ್ಟವಾದರೆ, ಮತ್ತೆ ಕೆಲವರಿಗೆ ಚಳಿಗೆ ಶೀತ, ಜ್ವರ, ಅಸ್ತಮಾ, ಮೈ-ನೋವು, ಬಿಗಿತ ಮತ್ತು ಕೆಲವು ರೀತಿಯ ಸೋಂಕುಗಳು ತಗುಲಿ ಎಲ್ಲಿ ಆರೋಗ್ಯ ಹದಗೆಡುತ್ತದೋ ಎಂಬ ಭಯ, ಆತಂಕ! ಇದ್ದೇ ಇರುತ್ತದೆ.

ಆದರೆ ಈ ಸಮಸ್ಯೆಗಳನ್ನು ಸುಲಭವಾಗಿ ಗುಣಪಡಿಸಲು ಹಲವಾರು ವಿಧಾನಗಳಿವೆ. ಅವುಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಭಯ ಬಿಡಿ, ಸಲಹೆಗಳನ್ನು ಅನುಸರಿಸಿ

'ರೋಗವನ್ನು ಗುಣಪಡಿಸುವುದಕ್ಕಿಂತ ಅದು ಬರದಂತೆ ತಡೆಗಟ್ಟುವುದೇ ಲೇಸು' ಎಂಬ ಮಾತಿದೆ. ಹಾಗಾಗಿ ನೀವು ಚಳಿಗಾಲದಲ್ಲಿ ಆರೋಗ್ಯವಾಗಿರಲು ಐದು ಉತ್ತಮ ಸಲಹೆಗಳು ಇಲ್ಲಿವೆ.

* ಸ್ಯಾನಿಟೈಜ್ :
ನೀವು ಎಲ್ಲೇ ಇದ್ದರೂ ಹ್ಯಾಂಡ್ ಸ್ಯಾನಿಟೈಸರ್ ಬಳಸಿ. ಗಾಳಿಯಲ್ಲಿ ಅನೇಕ ಸೋಂಕುಗಳು ಉಂಟಾಗುವುದರಿಂದ, ನಿಮ್ಮ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಮತ್ತು ಸೋಂಕಿತ ಜನರೊಂದಿಗೆ ಮತ್ತು ಸಾರ್ವಜನಿಕ ವಸತಿಗೃಹಗಳು ಇತ್ಯಾದಿಗಳಿಂದ ದೂರವಿದ್ದರೆ ಒಳಿತು.

* ವಿಟಮಿನ್ ಯುಕ್ತ ಆಹಾರ ಸೇವಿಸಿ:
ವಿಟಮಿನ್ C ಮತ್ತು ಸಿಟ್ರಸ್ ಹಣ್ಣುಗಳು, ಬೆಳ್ಳುಳ್ಳಿ ಮುಂತಾದ ಸತುಯುಕ್ತ ಆಹಾರ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 

* ಹಣ್ಣುಗಳು ಮತ್ತು ತರಕಾರಿಗಳು:
ಪೌಷ್ಟಿಕ ಆಹಾರ ಸೇವನೆಯು ದೇಹವನ್ನು ಸದಾ ಆರೋಗ್ಯವಾಗಿಡುತ್ತದೆ. ಆದ್ದರಿಂದ, ನಾವು ಅಗತ್ಯವಿರುವ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅವಶ್ಯಕವಾಗಿದೆ.

* ವ್ಯಾಯಾಮ ಮಾಡಿ : 
ಚಳಿಗಾಲದಲ್ಲಿ ಸಾಮಾನ್ಯವಾಗಿ ನಾವು ಹೆಚ್ಚು ಆಹಾರ ಸೇವಿಸುತ್ತೇವೆ. ಇದರಿಂದ ದೇಹದ ತೂಕ ಹೆಚ್ಚಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನಮ್ಮ ದೇಹದ ತೂಕವನ್ನು ಸಮತೊಲನದಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಹೆಚ್ಚಿನ ವ್ಯಾಯಾಮ ಮಾಡಿ. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗಿ ಜೀರ್ಣಕ್ರಿಯೆ ಸುಗಮವಾಗುತ್ತದೆ.  

* ಹೆಚ್ಚು ನೀರು ಕುಡಿಯಿರಿ :
ಅನೇಕ ಜನರು ಚಳಿಗಾಲದಲ್ಲಿ ಬಾಯಾರಿಕೆಯೇ ಆಗುವುದಿಲ್ಲ, ನೀರು ಕುಡಿಯಬೇಕೆಂದು ಅನಿಸುವುದೇ ಇಲ್ಲ ಎಂದು ಹೇಳುತ್ತಾರೆ. ಹಾಗಂತ ನೀರನ್ನು ಕುಡಿಯದೇ ಇರುವುದು ಒಳ್ಳೆಯದಲ್ಲ. ಶೀತ ವಾತಾವರಣ ಶುಷ್ಕತೆಯನ್ನು ಉಂಟುಮಾಡುತ್ತದೆ. ಇದು ತುರಿಕೆ ಅಥವಾ ಶೀತ ಹುಣ್ಣು ಮೊದಲಾದ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯಿರಿ. ಇದರಿಂದ ಚರ್ಮ ಒಡೆಯುವುದು, ಕಾಲು ಬಿರುಕು ಬಿಡುವುದು ಮೊದಲಾದ ಕೆಲವು ಸಮಸ್ಯೆಗಳಿಂದ ದೂರ ಉಳಿಯಲು ಸಹಾಯವಾಗುತ್ತದೆ.

ಈ ಅಂಶಗಳನ್ನು ಪಾಲಿಸಿದರೆ ಚಳಿಗಾಲವೂ ನಿಮಗೆ ಆನಂದವನ್ನು ನೀಡಬಲ್ಲದು. 

Trending News