Diabetes Patients : ಮಧುಮೇಹಿಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಈ 5 ಹಣ್ಣುಗಳು!

ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಈ ರೋಗದ ವಿರುದ್ಧ ಹೋರಾಡಬಹುದು. ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾದ 5 ಹಣ್ಣು ಬಗ್ಗೆ ಮಾಹಿತಿ ನಿಮಗಾಗಿ ಇಲ್ಲಿದೆ.

Written by - Channabasava A Kashinakunti | Last Updated : Apr 9, 2022, 01:34 PM IST
  • ಈ ಹಣ್ಣು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ
  • ಸೇಬು- ಪೇರಲ ರಕ್ತದಲ್ಲಿನ ಸಕ್ಕರೆಯನ್ನು ಸಹ ನಿಯಂತ್ರಿಸುತ್ತದೆ
  • ಇತರ ಯಾವ ಹಣ್ಣುಗಳು ಪ್ರಯೋಜನಕಾರಿ ಎಂದು ತಿಳಿಯಿರಿ
Diabetes Patients : ಮಧುಮೇಹಿಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಈ 5 ಹಣ್ಣುಗಳು! title=

ನವದೆಹಲಿ : ಯಾವುದೇ ಕಾಯಿಲೆಯ ವಿರುದ್ಧ ಹೋರಾಡುವಲ್ಲಿ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ಕೆಲವು ಹಣ್ಣುಗಳು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಅಂತಹ ಕೆಲವು ಹಣ್ಣುಗಳಿವೆ, ಇದು ಮಧುಮೇಹದ ಕಾಯಿಲೆಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕಳಪೆ ದಿನಚರಿ ಮತ್ತು ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಜನ ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಅಂತಹ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಈ ರೋಗದ ವಿರುದ್ಧ ಹೋರಾಡಬಹುದು. ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾದ 5 ಹಣ್ಣು ಬಗ್ಗೆ ಮಾಹಿತಿ ನಿಮಗಾಗಿ ಇಲ್ಲಿದೆ.

ಪೇರಲ ಹಣ್ಣು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಪೇರಲವನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ವಿಟಮಿನ್ ಎ ಮತ್ತು ಸಿ, ಫೋಲೇಟ್, ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪೇರಲ ಮಧುಮೇಹಕ್ಕೆ ಪ್ರಯೋಜನಕಾರಿ ಎಂದು ವಿವರಿಸಿ. ಪೇರಲೆಯು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Hing Water : ಪ್ರತಿದಿನ 'ಇಂಗು ಬೆರಿಸಿದ ನೀರು' ಕುಡಿಯಿರಿ, ಬೊಜ್ಜು ಕಡಿಮೆ ಮಾಡಿಕೊಳ್ಳಿ

ಮಧುಮೇಹ ರೋಗಿಗಳಿಗೂ ನೇರಳೆ ಹಣ್ಣು  ಪ್ರಯೋಜನಕಾರಿಯಾಗಿದೆ

ನೇರಳೆ ಹಣ್ಣು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ನೇರಳೆ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪ್ರತಿದಿನ ಸೇಬು ಹಣ್ಣು ಸೇವಿಸಿ 

ಇದಲ್ಲದೆ, ಮಧುಮೇಹ ರೋಗಿಗಳಿಗೆ ಸೇಬು ತುಂಬಾ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ಇದು ಕರಗಬಲ್ಲ ಮತ್ತು ಕರಗದ ಫೈಬರ್ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಿವಿ ಹಣ್ಣು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ

ಎಲ್ಲರಿಗೂ ತಿಳಿದಿರುವಂತೆ, ಕಿವಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಮಧುಮೇಹಿಗಳೂ ಇದನ್ನು ತಿನ್ನುವುದರಿಂದ ಪ್ರಯೋಜನವಾಗುತ್ತದೆ. ಕಿವಿಯಲ್ಲಿ ವಿಟಮಿನ್ ಎ, ವಿಟಮಿನ್-ಸಿ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ : Summer Health Tips : ಬೇಸಿಗೆಯಲ್ಲಿ ಪ್ರತಿದಿನ ಸೇವಿಸಿ ಮೊಸರು : ಇದರಿಂದ ಆರೋಗ್ಯಕ್ಕಿದೆ ಈ 4 ಪ್ರಯೋಜನಗಳು

ಕಿತ್ತಳೆ ಹಣ್ಣು ಕೂಡ ಪ್ರಯೋಜನಕಾರಿಯಾಗಿದೆ

ಮಧುಮೇಹಿಗಳಿಗೆ ಕಿತ್ತಳೆಯು ರಾಮಬಾಣವೂ ಹೌದು. ಕಿತ್ತಳೆಯಲ್ಲಿ ಫೈಬರ್, ವಿಟಮಿನ್ ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ಮಧುಮೇಹವನ್ನು ನಿವಾರಿಸಲು ಕೆಲಸ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News