Benefits Of Jeera: ಈ ಕಾರಣಗಳಿಗಾಗಿ ಆಹಾರದಲ್ಲಿ ಸೇವಿಸಲೇ ಬೇಕು ಜೀರಿಗೆ

Benefits Of Eating Cumin : ಜೀರಿಗೆ ಒಂದು ಮಸಾಲೆ ಪದಾರ್ಥ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರತಿಯೊಂದು ಒಗ್ಗರಣೆಯಲ್ಲಿ ಜೀರಿಗೆಯನ್ನು ಬಳಸಲಾಗುತ್ತದೆ.  ಖಾದ್ಯ ಯಾವುದೇ ಆಗಿರಲಿ ಅದಕ್ಕೆ ಜೀರಿಗೆ ಸೇರಿತೆಂದರೆ ರುಚಿ ಹೆಚ್ಚುತ್ತದೆ. 

Written by - Ranjitha R K | Last Updated : Jul 22, 2021, 07:19 PM IST
  • ಜೀರಿಗೆಯಲ್ಲಿ ಔಷಧೀಯ ಗುಣಗಳು ಹೇರಳವಾಗಿರುತ್ತದೆ
  • ಪ್ರತಿದಿನ ಜೀರಿಗೆ ಸೇವಿಸುವುದರಿಂದ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು.
  • ಜೀರಿಗೆ ಪೋಷಕಾಂಶಗಳಿಂದ ಕೂಡಿದೆ
Benefits Of Jeera: ಈ ಕಾರಣಗಳಿಗಾಗಿ ಆಹಾರದಲ್ಲಿ ಸೇವಿಸಲೇ ಬೇಕು ಜೀರಿಗೆ  title=
ಪ್ರತಿದಿನ ಜೀರಿಗೆ ಸೇವಿಸುವುದರಿಂದ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು. (file photo)

ನವದೆಹಲಿ : Benefits Of Eating Cumin : ಜೀರಿಗೆ ಒಂದು ಮಸಾಲೆ ಪದಾರ್ಥ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರತಿಯೊಂದು ಒಗ್ಗರಣೆಯಲ್ಲಿ ಜೀರಿಗೆಯನ್ನು ಬಳಸಲಾಗುತ್ತದೆ.  ಖಾದ್ಯ ಯಾವುದೇ ಆಗಿರಲಿ ಅದಕ್ಕೆ ಜೀರಿಗೆ ಸೇರಿತೆಂದರೆ ರುಚಿ ಹೆಚ್ಚುತ್ತದೆ. ಜೀರಿಗೆಯನ್ನು ವೈಜ್ಞಾನಿಕವಾಗಿ ಕ್ಯುಮಿನಿಯಂ ಸಿಮಿನಿಯಂ (cuminium cyminium) ಎಂದು ಕರೆಯಲಾಗುತ್ತದೆ. ಜೀರಿಗೆ  ಖಾದ್ಯದ  ರುಚಿ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ (Benefits Of Jeera). ಜೀರಿಗೆಯಲ್ಲಿ ಫೈಬರ್ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮ್ಯಾಂಗನೀಸ್, ಸೆಲೆನಿಯಮ್, ಸತು, ಸೇರಿದಂತೆ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಜೀರಿಗೆ ಆಯುರ್ವೇದ ಗುಣಗಳಿಂದ ತುಂಬಿದೆ. ಜೀರಿಗೆ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ದುರ್ವಾಸನೆ, ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಬಹುದು. 

1.ಮಲಬದ್ಧತೆ : ಮಲಬದ್ಧತೆಯ (Constipation) ಸಮಸ್ಯೆ ಎದುರಿಸುತ್ತಿರುವವರಿಗೆ ಜೀರಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮಲಬದ್ಧತೆ ಅಥವಾ ಅಜೀರ್ಣದ ಸಮಸ್ಯೆಯಿಂದ (Digestion problem) ಬಳಲುತ್ತಿದ್ದರೆ, ಹುರಿದ ಜೀರಿಗೆ ಬೆರೆಸಿದ ಒಂದು ಲೋಟ ಮಜ್ಜಿಗೆಗೆ (Butter milk) ಬ್ಲ್ಯಾಕ್ ಸಾಲ್ಟ್ ಸೇರಿಸಿ ಸೇವಿಸಬೇಕು. ಹೀಗೆ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು. ಇದು ಜೀರ್ಣ ಕ್ರಿಯೆಯನ್ನು ಕೂಡಾ ಉತ್ತಮಗೊಳಿಸುತ್ತದೆ. 

ಇದನ್ನೂ ಓದಿ : ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ನಿತ್ಯ ಕುಡಿಯಿರಿ, ಈ ಸಮಸ್ಯೆಗಳಿಂದ ಸಿಗಲಿದೆ ಮುಕ್ತಿ

2. ಬಾಯಿಯ ದುರ್ವಾಸನೆ  : ಬಾಯಿಯ ದುರ್ವಾಸನೆ ತೆಗೆದುಹಾಕುವಲ್ಲಿ ಜೀರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಜೀರಿಗೆ ಮತ್ತು ಕಲ್ಲು ಉಪ್ಪನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಪುಡಿಯಿಂದ ನಿಮ್ಮ ಹಲ್ಲುಗಳನ್ನು ಮಸಾಜ್ ಮಾಡಿ, ಇದು ಹಲ್ಲುನೋವಿಗೂ  ಪರಿಹಾರ ಸೂಚಿಸುತ್ತದೆ. ಅಲ್ಲದೆ, ಬಾಯಿಯ ದುರ್ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. 

3. ಪಿರಿಯೇಡ್ಸ್ : ಪಿರಿಯೇಡ್ಸ್ ಸರಿಯಾಗಿ ಆಗುತ್ತಿಲ್ಲ ಎನ್ನುವ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಜೀರಿಗೆ ವರದಾನವಾಗಿದೆ. ಸರಿಯಾದ ಸಮಯಕ್ಕೆ  ಪಿರಿಯೇಡ್ಸ್  (irregular periods) ಆಗುವಂತೆ ಜೀರಿಗೆ ಸಹಾಯ ಮಾಡುತ್ತದೆ. ಅಲ್ಲದೆ, ಪಿರಿಯೇಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ನೋವು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಜೀರಿಗೆಯನ್ನು ಮೊಸರು(Curd), ಸಲಾಡ್ ಮತ್ತು ಮಜ್ಜಿಗೆಯಲ್ಲಿ ಬಳಸಬಹುದು.

ಇದನ್ನೂ ಓದಿ : Benefits of Flaxseeds : ಪ್ರತಿದಿನ ಸೇವಿಸಿ 1 ಚಮಚ 'ಅಗಸೆಬೀಜ : ಇದರಿಂದ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತಾ?

4. ಸಂಧಿವಾತ: ಜೀರಿಗೆ ಅಥವಾ ಜೀರಿಗೆ ಎಣ್ಣೆಯನ್ನು ಸೇವಿಸುವುದರಿಂದ ಸಂಧಿವಾತಕ್ಕೆ (arthritis) ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಜೀರಿಗೆಯಲ್ಲಿ ಆ್ಯಂಟಿ ಇನ್ ಫ್ಲಮೆಟರಿ  ಆ್ಯಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿರುತ್ತದೆ. ಇದು ನೋವು ಮತ್ತು ಸಂಧಿವಾತದ ಸಮಸ್ಯೆಯಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News