ಗೋಧಿ ಹಿಟ್ಟಿನ ಬದಲು ಈ ಹಿಟ್ಟಿನ ಚಪಾತಿ ಸೇವಿಸಿದರೆ ಹೃದ್ರೋಗದ ಅಪಾಯ ಕಡಿಮೆ

ಗೋಧಿ ಹಿಟ್ಟಿನಿಂದ ಚಪಾತಿ ಮಾಡುವುದು ವಾಡಿಕೆ. ಈ ಅಭ್ಯಾಸವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ  ಇದರ ಬದಲಿಗೆ ಕಾಳುಗಳನ್ನು ಪುಡಿ ಮಾಡಿಟ್ಟುಕೊಂಡು ಅದರಿಂದ  ತಯಾರಿಸುವ ಚಪಾತಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. 

Written by - Ranjitha R K | Last Updated : Feb 3, 2023, 09:53 AM IST
  • ಗೋಧಿ ಹಿಟ್ಟಿನ ಬದಲಿಗೆ ಬಳಸಿ ಈ ಹಿಟ್ಟು
  • ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ
  • ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ
 ಗೋಧಿ ಹಿಟ್ಟಿನ ಬದಲು ಈ ಹಿಟ್ಟಿನ ಚಪಾತಿ ಸೇವಿಸಿದರೆ ಹೃದ್ರೋಗದ ಅಪಾಯ ಕಡಿಮೆ  title=

ಬೆಂಗಳೂರು : ನಮ್ಮಲ್ಲಿ ಗೋಧಿ ಹಿಟ್ಟಿನಿಂದ ಚಪಾತಿ ಮಾಡುವುದು ವಾಡಿಕೆ.  ಈ ಅಭ್ಯಾಸವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ ಇದರ ಬದಲಿಗೆ ಕಾಳುಗಳನ್ನು  ಪುಡಿ ಮಾಡಿಟ್ಟುಕೊಂಡು ಅದರಿಂದ ತಯಾರಿಸುವ ಚಪಾತಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಲ್ಲಿ ಸಮೃದ್ದವಾಗಿರುವ ಹಿಟ್ಟನ್ನು ಚಪಾತಿಗೆ ಬಳಸುವುದು ಉತ್ತಮ. ಕಡಲೆ ಹಿಟ್ಟಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಹಾಗಾಗಿ ಕಡಲೆ ಹಿಟ್ಟಿನ ಚಪಾತಿ ಸೇವಿಸುವುದು ಬೆಸ್ಟ್ ಆಯ್ಕೆ.  

 ಕಡಲೆ ಹಿಟ್ಟಿನ ಚಪಾತಿ ಪ್ರಯೋಜನಗಳು :
1. ಕೊಲೆಸ್ಟ್ರಾಲ್  ನಿಯಂತ್ರಣಕ್ಕೆ ಬರುತ್ತದೆ :
 ಕಡಲೆ ಹಿಟ್ಟಿನಲ್ಲಿ ಪ್ರೋಟೀನ್ ಮತ್ತು ನಾರಿನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಜೊತೆಗೆ ಇದು ಕಡಿಮೆ ಕ್ಯಾಲೊರಿ ಹೊಂದಿರುತ್ತದೆ.  ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ರಕ್ತದ ರಕ್ತನಾಳಗಳಲ್ಲಿ ಸಂಗ್ರಹವಾಗಲು ಬಿಡುವುದಿಲ್ಲ. ಹೀಗಾದಾಗ ಅನೇಕ ರೋಗಗಳ ಅಪಾಯ ಕಡಿಮೆಯಾಗುತ್ತದೆ. 

ಇದನ್ನೂ ಓದಿ : ಪುರುಷ ಅಥವಾ ಮಹಿಳೆ, ಯಾರಿಗೆ ಕ್ಯಾನ್ಸರ್ ಅಪಾಯ ಹೆಚ್ಚು?

2. ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ : 
ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕಡಲೆ ಹಿಟ್ಟಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಕಡಲೆ ಹಿಟ್ಟಿನ ಚಪಾತಿ ನಿತ್ಯ ಸೇವಿಸಿದರೆ ಉತ್ತಮ. 

3. ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ :
ಮಧುಮೇಹ ರೋಗಿಗಳು ತಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹಿಗಳು ಗೋಧಿ ಹಿಟ್ಟು ಸೇವಿಸುವ ಬದಲು ಕಡಲೆ ಹಿಟ್ಟಿನ ಚಪಾತಿ ಸೇವಿಸಬೇಕು. ಇದರ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿದ್ದು, ಇದು ಮಧುಮೇಹ ರೋಗಿಗಳಿಗೆ  ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪ್ರೋಟೀನ್ ಮತ್ತು ಡಯೆಟರಿ ಫೈಬರ್ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. 

ಇದನ್ನೂ ಓದಿ : ಬಿಳಿ ಕೂದಲು, ಕೂದಲುದುರುವಿಕೆ ಸಮಸ್ಯೆಗೆ ರಾಮಬಾಣ ಉಪಾಯ ಈ ಗಿಡದ ಎಲೆಗಳು!

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News