ಬಚ್ಚನ್ ಫ್ಯಾಮಿಲಿ ಮಹಿಳೆಯರ ಆರೋಗ್ಯಕರ ಕೂದಲ ಸೀಕ್ರೆಟ್ ಇದೇ ಅಂತೆ! ಜಯಾ ಬಚ್ಚನ್ ಬಿಚ್ಚಿಟ್ಟ ಗುಟ್ಟು

Hair Care secrets bachchan family :ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ಜಯಾ ಬಚ್ಚನ್ ಕೂದಲ ಆರೈಕೆಯ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. 

Written by - Ranjitha R K | Last Updated : Apr 2, 2024, 02:07 PM IST
  • ಕೂದಲಿನ ಸಮಸ್ಯೆಗಳ ಪರಿಹಾರಕ್ಕೆ ಮಹಿಳೆಯರು ಹೆಚ್ಚು ಮನೆ ಮದ್ದನ್ನು ಅನುಸರಿಸುತ್ತಾರೆ.
  • ಜಯಾ ಬಚ್ಚನ್ ಕೂಡಾ ಹೀಗೆಯೇ ಒಂದು ನೈಸರ್ಗಿಕ ಉಪಾಯವನ್ನು ಅನುಸರಿಸುತ್ತಾರೆ
  • ಪ್ರತಿ ವಾರ ತಮ್ಮ ಕೂದಲಿಗೆ ಈ ತರಕಾರಿ ರಸವನ್ನು ಹಚ್ಚುತ್ತಾರೆಯಂತೆ
ಬಚ್ಚನ್ ಫ್ಯಾಮಿಲಿ ಮಹಿಳೆಯರ ಆರೋಗ್ಯಕರ ಕೂದಲ ಸೀಕ್ರೆಟ್ ಇದೇ ಅಂತೆ!  ಜಯಾ ಬಚ್ಚನ್ ಬಿಚ್ಚಿಟ್ಟ ಗುಟ್ಟು  title=

Jaya Bachchan Hair Care secrets: ಆರೋಗ್ಯಕರ, ಕಪ್ಪು ಕೂದಲು ಮತ್ತು ಕೂದಲಿನ ಸಮಸ್ಯೆಗಳ ಪರಿಹಾರಕ್ಕೆ ಮಹಿಳೆಯರು ಹೆಚ್ಚು ಮನೆ ಮದ್ದನ್ನು ಅನುಸರಿಸುತ್ತಾರೆ. ನೈಸರ್ಗಿಕ ಮತ್ತು ಆಯುರ್ವೇದ ವಸ್ತುಗಳನ್ನು ಕೂದಲಿಗೆ ಹಚ್ಚುವ ಮತ್ತು ಅವುಗಳನ್ನು ಸೇವಿಸುವ ಮೂಲಕ ಕೂದಲನ್ನು ಸಮಸ್ಯೆಗಳಿಂದ ದೂರ ಇಡಬಹುದು. ಹಿರಿಯ ನಟಿ ಮತ್ತು ಸಂಸದೆ ಜಯಾ ಬಚ್ಚನ್ ಕೂಡಾ ಹೀಗೆಯೇ ಒಂದು ನೈಸರ್ಗಿಕ ಉಪಾಯವನ್ನು ಅನುಸರಿಸುತ್ತಾರೆಯಂತೆ. ಅವರು ಮಾತ್ರವಲ್ಲ ಅವರ ಪರಿವಾರದ ಎಲ್ಲರೂ ಈ ವಿಧಾನವನ್ನೇ ಬಳಸುತ್ತಾರೆಯಂತೆ.  ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ಜಯಾ ಬಚ್ಚನ್ ಕೂದಲ ಆರೈಕೆಯ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. 

ಹೌದು, ಜಯಾ ಬಚ್ಚನ್ ಪ್ರಕಾರ ಅವರು ಪ್ರತಿ ವಾರ ತಮ್ಮ ಕೂದಲಿಗೆ ಈ ತರಕಾರಿ ರಸವನ್ನು ಹಚ್ಚುವುದರಿಂದಲೇ ಅವರ ಕೂದಲು ಅಷ್ಟೊಂದು ಆರೋಗ್ಯಕರವಾಗಿರುವುದಂತೆ. ಈ ಪಾಡ್‌ಕ್ಯಾಸ್ಟ್‌ನಲ್ಲಿ ಜಯಾಬಚ್ಚನ್ ಮತ್ತು ಶ್ವೇತಾ ತಾವು ಕೂದಲಿಗೆ ಈರುಳ್ಳಿ ರಸವನ್ನು ಹಚ್ಚುತ್ತೇವೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ, ಕೂದಲಿಗೆ ಈರುಳ್ಳಿ ರಸ ಹಚ್ಚುವುದರೊಂದಿಗೆ  ಅವರ ಕೂದಲಿಗೆ ಇದು ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎನ್ನುವುದನ್ನು ಕೂಡಾ ವಿವರಿಸಿದ್ದಾರೆ. 

ಇದನ್ನೂ ಓದಿ : ಮೊಸರಿನೊಂದಿಗೆ ಈ ವಸ್ತುಗಳನ್ನು ತಪ್ಪಿಯೂ ಸೇವಿಸಬೇಡಿ

ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಏನು ಪ್ರಯೋಜನ? : 
ಈರುಳ್ಳಿ ರಸವನ್ನು ಹೇರ್ ಕೇರ್ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈರುಳ್ಳಿ ರಸ ಮತ್ತು ಈರುಳ್ಳಿ ಸಿಪ್ಪೆಯ ನೀರಿನಿಂದ ಕೂದಲನ್ನು ತೊಳೆಯುವುದನ್ನು ಅನೇಕ ಸಲೂನ್‌ಗಳಲ್ಲಿ ಕೂಡಾ ಶಿಫಾರಸು ಮಾಡುತ್ತಾರೆ. ಈರುಳ್ಳಿ ಕೂದಲಿಗೆ ಅನೇಕ ರೀತಿಯ ಪ್ರಯೋಜನಗಳನ್ನೂ ತಂದುಕೊಡುತ್ತದೆ. ಕೂದಲು ಉದುರುವುದು, ತಲೆಹೊಟ್ಟು, ಕೂದಲ ತುದಿ ಒಡೆಯುವುದು ಮುಂತಾದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಈರುಳ್ಳಿ ಕೆಲಸ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಈರುಳ್ಳಿ ರಸ  ಹೊಂದಿರುವ ಎಣ್ಣೆ ಮತ್ತು ಶಾಂಪೂ ಮಾರುಕಟ್ಟೆಯಲ್ಲಿ ಸಿಗುತ್ತವೆ. 

ಈರುಳ್ಳಿ ರಸವು ಕೂದಲನ್ನು ಪೋಷಿಸಿ, ಬಲಪಡಿಸುತ್ತದೆ : 
ಕೂದಲಿನ ಬೇರುಗಳು ಅಥವಾ ಕೂದಲಿನ ಕಿರುಚೀಲಗಳು ಈರುಳ್ಳಿ ರಸದಿಂದ  ಸದೃಢವಾಗುತ್ತದೆ. spilt ends ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಈರುಳ್ಳಿ ರಸ  ತುಂಬಾ ಪ್ರಯೋಜನಕಾರಿಯಾಗಿದೆ. ಕೂದಲು ಉದುರುವ ಸಂದರ್ಭದಲ್ಲಿ ಹಲವರು ಈರುಳ್ಳಿ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹಚ್ಚುತ್ತಾರೆ. ಈರುಳ್ಳಿಯಲ್ಲಿ ಕಂಡುಬರುವ ಸಲ್ಫರ್ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ದಪ್ಪ ಮತ್ತು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಈರುಳ್ಳಿ ರಸವು ನೆತ್ತಿಯ ಸೋಂಕು, ತುರಿಕೆ ಮತ್ತು ಇತರ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ : ಬೇಸಿಗೆಯಲ್ಲಿ ಈ ಹಣ್ಣಿನ ರಸ ಬೆರೆಸಿ ಕುಡಿದರೆ ಅಮೃತವಾಗುವುದು ನೀರು ! ನೀವೂ ಪರೀಕ್ಷಿಸಿ ನೋಡಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News