Overthinking:ನಿಮಗೂ ಕೂಡ ಅತಿಯಾಗಿ ಯೋಚಿಸುವ ಕಾಯಿಲೆ ಇದೆಯೇ? ಈ ಸಲಹೆಗಳನ್ನು ಅನುಸರಿಸಿ

Tips To Deal Overthinking: ಅತಿಯಾಗಿ ಯೋಚಿಸುವ ಅಭ್ಯಾಸ ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಸಾಬೀತಾಗಬಹುದು. ಅತಿಯಾಗಿ ಯೋಚಿಸುವುದನ್ನು ಕಡಿಮೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jul 25, 2022, 05:23 PM IST
  • ಅತಿಯಾಗಿ ಯೋಚಿಸುವ ಅಥವಾ ಅತಿಯಾಗಿ ಆಲೋಚಿಸುವ ಅಭ್ಯಾಸ ನಿಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಸಾಬೀತಾಗಬಹುದು.
  • ದಿನವಿಡೀ ಕೆಲಸ ಮಾಡಿ ರಾತ್ರಿಯ ಹೊತ್ತು ಮಲಗಲು ಹಾಸಿಗೆಗೆ ತೆರಳಿದಾಗ,
  • ಹಲವರು ತಮ್ಮ ಕಚೇರಿಯ ಕೆಲಸದ ಬಗ್ಗೆ ಅಥವಾ ತಮ್ಮ ಸಂಬಂಧದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ.
Overthinking:ನಿಮಗೂ ಕೂಡ ಅತಿಯಾಗಿ ಯೋಚಿಸುವ ಕಾಯಿಲೆ ಇದೆಯೇ? ಈ ಸಲಹೆಗಳನ್ನು ಅನುಸರಿಸಿ title=
Overthinking Side Effects

Tips To Deal Overthinking: ಅತಿಯಾಗಿ ಯೋಚಿಸುವ ಅಥವಾ ಅತಿಯಾಗಿ ಆಲೋಚಿಸುವ ಅಭ್ಯಾಸ ನಿಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಸಾಬೀತಾಗಬಹುದು. ದಿನವಿಡೀ ಕೆಲಸ ಮಾಡಿ ರಾತ್ರಿಯ ಹೊತ್ತು ಮಲಗಲು ಹಾಸಿಗೆಗೆ ತೆರಳಿದಾಗ, ಹಲವರು ತಮ್ಮ ಕಚೇರಿಯ ಕೆಲಸದ ಬಗ್ಗೆ ಅಥವಾ ತಮ್ಮ ಸಂಬಂಧದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಇದರಿಂದ ಜನರು ತುಂಬಾ ಚಿಂತೆ ಮತ್ತು ಉದ್ವಿಗ್ನತೆಯನ್ನು ಅನುಭವಿಸುತ್ತಾರೆ. ನೀವು ಈ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುತ್ತಿದ್ದರೆ, ಅದು ಮೆದುಳಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ನೀವು ನಿದ್ರಾಹೀನತೆಯ ಜೊತೆಗೆ ಖಿನ್ನತೆಯಂತಹ ಸಮಸ್ಯೆಗಳಿಗೆ ಗುರಿಯಾಗುವಿರಿ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಅತಿಯಾಗಿ ಯೋಚಿಸುವುದನ್ನು ಕಡಿಮೆ ಮಾಡಲು ನೀವು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅತಿಯಾಗಿ ಯೋಚಿಸುವ ಅಭ್ಯಾಸವನ್ನು ಕಡಿಮೆ ಮಾಡಲು, ಈ ಕ್ರಮಗಳನ್ನು ಅನುಸರಿಸಿ

ಪಾದದ ಅಡಿಭಾಗವನ್ನು ಎಣ್ಣೆಯಿಂದ ಮಸಾಜ್ ಮಾಡಿ
ರಾತ್ರಿ ಮಲಗುವ ಮುನ್ನ ಪಾದಗಳನ್ನು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ದೇಹದಲ್ಲಿನ ವಾತ ಸಮತೋಲನ ಸ್ಥಿತಿಯಲ್ಲಿರುತ್ತದೆ ಮತ್ತು ನಿಮಗೂ ಕೂಡ ಇದರಿಂದ ಆರಾಮದಾಯಕ ಮತ್ತು ಶಾಂತಿಯುತ ಅನುಭವ ಸಿಗುತ್ತದೆ. ಇದು ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ನೀವು ಬೇಗನೆ ನಿದ್ರೆಗೆ ಜಾರುವಿರಿ. ಇದರಿಂದ ನಿಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ
ದಿನವಿಡಿಯ ಆಯಾಸ, ಒತ್ತಡ ಮತ್ತು ಆತಂಕವನ್ನು ಹೋಗಲಾಡಿಸಲು ಎಣ್ಣೆಯಿಂದ ನೆತ್ತಿಯ ಭಾಗದಲ್ಲಿ ಮಸಾಜ್ ಮಾಡುವುದು ಒಂದು ಉತ್ತಮ ಮಾರ್ಗವಾಗಿದೆ. ನಿಮ್ಮನ್ನು ನೀವು ಆರಾಮವಾಗಿರುವಂತೆ ಮಾಡಲು ಇದು ಸುಲಭವಾದ ಮಾರ್ಗವಾಗಿದೆ. ವಿಶೇಷವಾಗಿ ನೀವು ಬಿಸಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿದರೆ, ಅದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ತಲೆನೋವು ಅಥವಾ ಒತ್ತಡದಂತಹ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ-ಹಲ್ಲಿನ ಸಮಸ್ಯೆಗಳಿಗೆ ಸರಳ ಪರಿಹಾರ ನೀಡುತ್ತೆ ಈ ವಸ್ತುಗಳು

ಮಲಗುವ ಮುನ್ನ ಹಾಲು ಕುಡಿಯಿರಿ
ಮಲಗುವ ಮುನ್ನ ಹಾಲನ್ನು ಸೇವಿಸಿದರೆ ಒತ್ತಡ ಮತ್ತು ಆತಂಕ ದೂರವಾಗುತ್ತದೆ.

ಇದನ್ನೂ ಓದಿ-Health Tips: ಪುರುಷರ ಹಲವು ಸಮಸ್ಯೆಗಳಿಗೆ ರಾಮಬಾಣ ಗಿಲೋಯ್ ಸೇವನೆ, ಹೇಗೆ ಸೇವಿಸಬೇಕು?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News