ವೇಗವಾಗಿ ಹೆಚ್ಚುತ್ತಿದೆ ಡೆಂಗ್ಯೂ, ಚಿಕೂನ್‌ಗುನ್ಯಾ: ಆರೋಗ್ಯ ಇಲಾಖೆ ನೀಡಿದೆ ಈ ಎಚ್ಚರಿಕೆ

Dengue, Chikungunya Alert: ಡೆಂಗ್ಯೂ, ಚಿಕೂನ್‌ಗುನ್ಯಾ ಸೊಳ್ಳೆ ಕಡಿತದಿಂದ ಬರುವ ಸಾಮಾನ್ಯ ಕಾಯಿಲೆಗಳು. ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಭಾಗಗಳಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆ ಈ ಬಗ್ಗೆ ಎಚ್ಚರಿಕೆ ನೀಡಿದೆ. 

Written by - Yashaswini V | Last Updated : Apr 30, 2024, 12:51 PM IST
  • ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿವೆ
  • ಈ ಕುರಿತಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
  • ಇದರಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸದಂತೆ ಸೂಚಿಸಿದೆ.
ವೇಗವಾಗಿ ಹೆಚ್ಚುತ್ತಿದೆ ಡೆಂಗ್ಯೂ, ಚಿಕೂನ್‌ಗುನ್ಯಾ: ಆರೋಗ್ಯ ಇಲಾಖೆ ನೀಡಿದೆ ಈ ಎಚ್ಚರಿಕೆ  title=

Dengue, Chikungunya Symptoms: ಸೊಳ್ಳೆ ಕಚ್ಚುವುದರಿಂದ ನಿದ್ರೆಗೆ ಭಂಗವಾಗುವುದಷ್ಟೇ ಅಲ್ಲ ಸೊಳ್ಳೆ ಕಚ್ಚುವುದರಿಂದ ದೇಹಕ್ಕೆ ಹೊಕ್ಕುವ  ಅಪಾಯಕಾರಿ ವೈರಸ್‌ನ ಪರಿಣಾಮದಿಂದಾಗಿ ಡೆಂಗ್ಯೂ, ಚಿಕೂನ್‌ಗುನ್ಯಾ (Chikungunya), ಮಲೇರಿಯಾದಂತಹ ರೋಗಗಳು ಬರುತ್ತವೆ. ಗಮನಾರ್ಹವಾಗಿ ಎಲ್ಲಾ ಸೊಳ್ಳೆಗಳ ಕಡಿತವು ಅಪಾಯಕಾರಿಯಲ್ಲದಿದ್ದರೂ, ರೋಗದ ಅಪಾಯಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಕಡಿತವನ್ನು ತ್ಕಪ್ಪಿಸುವುದು ಒಳ್ಳೆಯದು. 

ಉತ್ತರಾಖಂಡದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಡೆಂಗ್ಯೂ (Dengue) ಮತ್ತು ಚಿಕೂನ್‌ಗುನ್ಯಾ (Chikungunya) ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತಂತೆ ಉತ್ತರಾಖಂಡ ಆರೋಗ್ಯ ಇಲಾಖೆ (Uttarakhand Health Department) ಎಚ್ಚರಿಕೆ ನೀಡಿದೆ. ಇದರಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸದಂತೆ ಸೂಚಿಸಿದೆ. 

ಇದನ್ನೂ ಓದಿ- ಈ ಸಮಯದಲ್ಲಿ ಎಳನೀರು ಕುಡಿದರೆ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದೇ ಇಲ್ಲ

ಡೆಂಗ್ಯೂ ರೋಗಲಕ್ಷಣಗಳು (Symptoms of dengue)? 
* ತೀವ್ರವಾದ ತಲೆನೋವು 
* ಕಣ್ಣುಗಳಲ್ಲಿ ತೀವ್ರವಾದ ನೋವು 
* ಇದ್ದಕ್ಕಿದ್ದಂತೆ ಜ್ವರ ಹೆಚ್ಚಾಗುವುದು. 
* ಜಾಯಿಂಟ್ ಮತ್ತು ಸ್ನಾಯುಗಳಲ್ಲಿ ನೋವು 
* ವಾಂತಿ-ವಾಕರಿಗೆ

ಚಿಕೂನ್‌ಗುನ್ಯಾ ರೋಗಲಕ್ಷಣಗಳು (Chikungunya symptoms): 
ಚಿಕೂನ್‌ಗುನ್ಯಾ ರೋಗಿಗಳಲ್ಲಿ ತಲೆನೋವು, ಸ್ನಾಯು ನೋವು, ಕೀಲುಗಳಲ್ಲಿ ಊತ/ದದ್ದು, ಜ್ವರ ಸಾಮಾನ್ಯವಾಗಿ ಕಂಡು ಬರುವ ರೋಗಲಕ್ಷಣಗಳು. 

ಇದನ್ನೂ ಓದಿ- ಜೀರಿಗೆ ನೀರಿಗೆ ಎರಡು ಚಿಟಕಿ ಈ ಪುಡಿ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಕರಗುವುದು!ಜೊತೆಗೆ ಮೂತ್ರಪಿಂಡದಿಂದ ಜಾರಿ ಬರುವುದು ಕಿಡ್ನಿ ಸ್ಟೋನ್ !

ಸಿಡಿಸಿ ಪ್ರಕಾರ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ರೋಗಲಕ್ಷಣಗಳೆರಡೂ ಒಂದೇ ಆದರೂ ಡೆಂಗ್ಯೂಗಿಂತ ಚಿಕೂನ್‌ಗುನ್ಯಾದಲ್ಲಿ ಊತ ಮತ್ತು ನೋವು ಹೆಚ್ಚಾಗಿರುತ್ತದೆ. ಚಿಕೂನ್‌ಗುನ್ಯಾ ರೋಗಿಗಳಲ್ಲಿ ಕೀಲುಗಳಲ್ಲಿ ತೀವ್ರವಾದ ನೋವು ಕಂಡು ಬರುತ್ತದೆ. ಡೆಂಗ್ಯೂ ರೋಗಿಗಳಲ್ಲಿ ರಕ್ತಸ್ರಾವ, ಉಸಿರಾಟದ ತೊಂದರೆ ಕಂಡುಬರುವುದಲ್ಲದೆ, ಬಿಳಿ ರಕ್ತಕಣಗಳು ವೇಗವಾಗಿ ಕಡಿಮೆಯಾಗುತ್ತವೆ. 

ಸೊಳ್ಳೆಯಿಂದ ಹರಡುವ ರೋಗಗಳನ್ನು ತಪ್ಪಿಸಲು ಈ ಮಾರ್ಗಗಳನ್ನು ಅನುಸರಿಸಿ: 
>> ಉದ್ದನೆಯ ತೋಳುಳ್ಳ ಉಡುಪುಗಳನ್ನು ಧರಿಸಿ. 
>> ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ. 
>> ಮನೆ ಒಳಗೆ-ಹೊರಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. 
>> ಮುಸ್ಸಂಜೆ ವೇಳೆ ಹೊರಗಡೆ ಹೋಗುವುದನ್ನು ತಪ್ಪಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News