Health Tips: ರಾತ್ರಿ ನಿದ್ರೆ ಸರಿಯಾಗಿ ಬರ್ತಿಲ್ವಾ? ಈ ಸಲಹೆ ಪಾಲಿಸಿ ಸುಖವಾಗಿ ನಿದ್ರಿಸಿ

Sleep Disorders and Problems: ಮನಸ್ಸನ್ನು ಶಾಂತಗೊಳಿಸಲು ಧ್ಯಾನವು ಉತ್ತಮ ಮಾರ್ಗವಾಗಿದೆ. ಅಲ್ಪಕಾಲದ ನಿದ್ರೆ ಇಲ್ಲದಿರುವಿಕೆಗೆ ಅಥವಾ ನಿದ್ರಾಹೀನತೆಯ ವ್ಯಾಧಿಗೆ ಧ್ಯಾನವು ಸಹಾಯವಾಗುತ್ತದೆ. ಪ್ರತಿನಿತ್ಯ ಬಿಡದೇ ಮಾಡುವ ಧ್ಯಾನದ ಅಭ್ಯಾಸದಿಂದ ನಿದ್ರೆಯ ಗತಿ ಸುಧಾರಿಸುತ್ತದೆ. ಧ್ಯಾನ ಮುಂತಾದ ಅಭ್ಯಾಸಗಳು ನಿದ್ರಾಹೀನತೆಯ ವ್ಯಾಧಿಯನ್ನು ಪರಿಹರಿಸಲು ಪರಿಣಾಮಕಾರಿ ಔಷಧಿ. ​

Written by - Puttaraj K Alur | Last Updated : Feb 4, 2024, 05:13 PM IST
  • ಅಲ್ಪಕಾಲದ ನಿದ್ರೆ ಇಲ್ಲದಿರುವಿಕೆಗೆ ಅಥವಾ ನಿದ್ರಾಹೀನತೆಯ ವ್ಯಾಧಿಗೆ ಧ್ಯಾನವು ಸಹಕಾರಿ
  • ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ನಿದ್ರಾಹೀನತೆಗೆ ಉತ್ತಮ ಪರಿಹಾರವಾಗಿದೆ
  • ಆಹಾರ ಸೇವಿಸಿದ ಮದ್ಯ ಸೇವನೆ ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ
Health Tips: ರಾತ್ರಿ ನಿದ್ರೆ ಸರಿಯಾಗಿ ಬರ್ತಿಲ್ವಾ? ಈ ಸಲಹೆ ಪಾಲಿಸಿ ಸುಖವಾಗಿ ನಿದ್ರಿಸಿ title=
ನಿದ್ರಾಹೀನತೆಗೆ ಪರಿಹಾರ

Sleeping Problem: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಬಹುತೇಕರು ನಿದ್ರೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ನಿದ್ರಾಹೀನತೆಯಿಂದ ಬಳಲಿ ಸುಸ್ತಾಗುತ್ತಾರೆ. ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರದೆ ಪದೇ ಪದೇ ಎಚ್ಚರವಾಗುವುದು ಸಾಮಾನ್ಯ ದಿನಚರಿಯಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಏಳುವವರು ನಿದ್ರೆ ಮಾಡಿದರೂ ಸಹ ಏಳಲು ಆಲಸ್ಯ ತೋರುತ್ತಾರೆ. ಇದರ ಹಿಂದೆ ಅನೇಕ ಕಾರಣಗಳಿವೆ. ನೀವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿದರೆ ಸಮಸ್ಯೆಗಳು ಮತ್ತಷ್ಟು ಹೆಚ್ಚುತ್ತವೆ. ನಿದ್ರೆ ನಮಗೆ ಪ್ರಕೃತಿದತ್ತವಾಗಿ ಬಂದಿರುವ ವರ. ಸ್ವಲ್ಪ ಗದ್ದಲ, ಶಬ್ಧವಾದರೂ ಸಹ ನೀವು ಎಚ್ಚರವಾಗಿಬಿಡುತ್ತಿರಿ. ಬಳಿಕ ಮತ್ತೆ ನಿದ್ರೆ ಮಾಡಲು ಹೋದರೆ ನಿಮಗೆ ನಿದ್ರೆಯೇ ಬರುವುದಿಲ್ಲ. ಇದು ನಿಮಗೆ ಕಿರಿಕಿಯನ್ನುಂಟು ಮಾಡಬಹುದು.

ಕೆಲಸ ಮತ್ತು ಒತ್ತಡ, ಹಣಕಾಸು ಮತ್ತು ಭವಿಷ್ಯದ ಬಗೆಗಿನ ಚಿಂತೆ ಅಥವಾ ಮರೆಯಲಾಗದ ಅಹಿತಕರ ಅನುಭವವನ್ನು ಮೆಲುಕು ಹಾಕುವುದರ ಬಗ್ಗೆಯೇ ನಿಮ್ಮ ಮನಸ್ಸು ತುಂಬಿಹೋಗಿರುತ್ತದೆ. ಇದು ಕೂಡ ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಬಹುದು. ಮೆದುಳಿನಲ್ಲಿ ಉಂಟಾಗುವ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು. ನಿಮ್ಮ ದೇಹವನ್ನು ಅಗತ್ಯವಿರುವ ನಿದ್ರೆಗೆ ಮತ್ತೆ ಮರಳಿಸುವುದು ಹೇಗೆ? ಎಚ್ಚರದ ಬಳಿಕವೂ ಮತ್ತೆ ಸರಿಯಾಗಿ ನಿದ್ರೆ ಮಾಡಲು ತಜ್ಞರು ನೀಡಿರುವ 8 ಉಪಯುಕ್ತ ಸಲಹೆಗಳು ಇಲ್ಲಿವೆ ನೋಡಿ. ಇವುಗಳನ್ನು ಪಾಲಿಸುವ ಮೂಲಕ ನೀವು ಮಗುವಿನಂತೆ ಸುಖವಾಗಿ ನಿದ್ರಿಸಿರಿ.

ಇದನ್ನೂ ಓದಿ: ವಿಶ್ವದ 2ನೇ ಅತ್ಯುತ್ತಮ ಪಾನೀಯ ಸ್ಥಾನದಲ್ಲಿ ʼಮಸಾಲಾ ಚಾಯ್ʼ..! ಮಾಡುವ ಸರಳ ವಿಧಾನ ಇಲ್ಲಿದೆ

ಆಳವಾಗಿ ಉಸಿರಾಡಿ: ಆಳವಾಗಿ ಉಸಿರಾಡಿದರೆ ಒತ್ತಡ ಕಡಿಮೆಯಾಗುತ್ತದೆ, ಇದರಿಂದ ಸಾಕಷ್ಟು ವಿಶ್ರಾಂತಿ ಪಡೆಯಬಹುದು. ನಿಮ್ಮ ಹೊಟ್ಟೆಯ ಮೇಲೆ ಕೈ ಇಟ್ಟು, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಮೂಗಿನ ಮೂಲಕ ನಿಧಾನವಾಗಿ ಆಳವಾಗಿ ಉಸಿರು ತೆಗೆದುಕೊಳ್ಳಿ. ನಿಮ್ಮ ಹೊಟ್ಟೆಯ ಏರಿಳಿತದ ಅನುಭವವದ ಬಗ್ಗೆ ಗಮನಿಸಿರಿ. ಈಗ ನಿಧಾನವಾಗಿ ಉಸಿರಾಡಲು ಪ್ರಯತ್ನಿಸಿ. ಈಗ ಆ ಉಸಿರನ್ನು ಬಹಳ ನಿಧಾನವಾಗಿ ಹೊರಗೆಬಿಡಿ. ನಿಧಾನವಾಗಿ ಉಸಿರಾಡುವಾಗ ಮೂಗು ಮತ್ತು ಬಾಯಿಯ ಮೂಲಕ ಮುಖ್ಯ ಉಸಿರಾಟದ ಸ್ನಾಯುಗಳನ್ನು ಬಳಸಿ. ದೇಹ ಮತ್ತು ಮನಸ್ಸಿನ ವಿಶ್ರಾಂತಿಗೆ ಇದು ಸಹಾಯ ಮಾಡುತ್ತದೆ.

ನಿದ್ರಾ ಧ್ಯಾನ ಮತ್ತು ಸ್ನಾಯುಗಳ ವಿಶ್ರಾಂತಿ: ಮನಸ್ಸನ್ನು ಶಾಂತಗೊಳಿಸಲು ಧ್ಯಾನವು ಉತ್ತಮ ಮಾರ್ಗವಾಗಿದೆ. ಅಲ್ಪಕಾಲದ ನಿದ್ರೆ ಇಲ್ಲದಿರುವಿಕೆಗೆ ಅಥವಾ ನಿದ್ರಾಹೀನತೆಯ ವ್ಯಾಧಿಗೆ ಧ್ಯಾನವು ಸಹಾಯವಾಗುತ್ತದೆ. ಪ್ರತಿನಿತ್ಯ ಬಿಡದೇ ಮಾಡುವ ಧ್ಯಾನದ ಅಭ್ಯಾಸದಿಂದ ನಿದ್ರೆಯ ಗತಿ ಸುಧಾರಿಸುತ್ತದೆ. ಧ್ಯಾನ ಮುಂತಾದ ಅಭ್ಯಾಸಗಳು ನಿದ್ರಾಹೀನತೆಯ ವ್ಯಾಧಿಯನ್ನು ಪರಿಹರಿಸಲು ಪರಿಣಾಮಕಾರಿ ಔಷಧಿ. ನಿದ್ರೆಯ ಧ್ಯಾನ ಮತ್ತು ಸ್ನಾಯುಗಳ ವಿಶ್ರಾಂತಿಗೆ ಪ್ರಯತ್ನಿಸಬೇಕು. ನಿಮ್ಮ ಉಸಿರಾಟ ಮತ್ತು ಮನಸ್ಸನ್ನು ಸರಿಯಾಗಿ ಕೇಂದ್ರಿಕರಿಸಿದರೆ ನೀವು ಉತ್ತಮ ನಿದ್ರೆ ಪಡೆಯಬಹುದು.

ನಿಮ್ಮ ತಪ್ಪು ಒಪ್ಪಿಕೊಳ್ಳಿರಿ: ದಿನನಿತ್ಯದ ಜೀವನದಲ್ಲಿ ನಾವು ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆ ಕ್ರಮವನ್ನು ಅನುಸರಿಸುತ್ತಿರುತ್ತೇವೆ. ಇದು ಕೂಡ ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸರಿಯಾದ ಜೀವನಶೈಲಿ ರೂಢಿಸಿಕೊಳ್ಳುವುದು ಕೂಡ ಉತ್ತಮ. ನೀವು ಮಾಡಿರುವ ತಪ್ಪಿಗೆ ದೂರು ಹೇಳದೆ ಸರಿಯಾದ ಮಾರ್ಗದಲ್ಲಿ ಬದುಕಿದರೆ ಉತ್ತಮ ಜೀವನ ನಿಮ್ಮದಾಗುತ್ತದೆ.

ಗಡಿಯಾರ ನೋಡುವುದನ್ನು ನಿಲ್ಲಿಸಿ: ನಿದ್ದೆ ಮಾಡದಿರುವ ಬಗ್ಗೆ ಇನ್ನಷ್ಟು ಆತಂಕ ಮತ್ತು ಅಪರಾಧಿ ಭಾವನೆ ನಿಮಗಿದೆಯಾ? ಹಾಗಾದ್ರೆ ನೀವು ಗಡಿಯಾರ ನೋಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಒಂದು ಕೆಟ್ಟ ರಾತ್ರಿಯ ನಿದ್ರೆಯ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಬಹಳ ಮುಖ್ಯ. ಏಕೆಂದರೆ ಆ ಆತಂಕವು ನಿದ್ರೆಗೆ ಮರಳಲು ಕಷ್ಟವಾಗುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ರಿಸುವುದನ್ನು ರೂಢಿಸಿಕೊಳ್ಳಿ. ನಿದ್ರಿಸಲು ಎಷ್ಟು ಗಂಟೆ ಮೀಸಲಿಟ್ಟಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಪ್ರತಿದಿನವೂ ಇದನ್ನು ಪಾಲಿಸಿದರೆ ನಿಮಗೆ ಎಂದಿಗೂ ನಿದ್ರಾಭಂಗವಾಗುವುದಿಲ್ಲ.

ಇದನ್ನೂ ಓದಿ: Pomegranate Benefits: ದಾಳಿಂಬೆ ಜ್ಯೂಸ್ ಸೇವನೆಯಿಂದಾಗುತ್ತವೆ ಹಲವು ಆರೋಗ್ಯ ಲಾಭಗಳು!

ಆಲ್ಕೊಹಾಲ್ ಸೇವಿಸಬೇಡಿ: ಆಹಾರ ಸೇವಿಸಿದ ತಕ್ಷಣ ಮಲಗುವುದು ಅಥವಾ ಮದ್ಯ ಸೇವನೆ ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಆಲ್ಕೊಹಾಲ್ ಕುಡಿಯುವುದರಿಂದ ನೀವು ಬೇಗನೆ ನಿದ್ರಿಸಬಹುದು. ಆದರೆ ನಿಮಗೆ ಗೊತ್ತಾಗದೆ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳಬಹುದು ಅಥವಾ ಭಾಗಶಃ ಎಚ್ಚರಗೊಳ್ಳಬಹುದು. ಇನ್ನೇನು ಮಲಗಲು 4 ಗಂಟೆ ಸಮಯವಿರುವಾಗ ಆಲ್ಕೋಹಾಲ್ ಸೇವಿಸುವುದರಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲವೆಂದು ಸಂಶೋಧನೆಗಳು ಹೇಳಿವೆ.

ಹೆಚ್ಚು ಚಿಂತೆ ಮಾಡಬೇಡಿ: ಹಾಸಿಗೆಗೆ ಹೋಗುವ ಮುನ್ನ ಸಾಧ್ಯವಾದಷ್ಟು ನಿಮ್ಮ ಚಿಂತೆಗಳನ್ನು ತೊಡೆದುಹಾಕಲು ಪ್ರಯತ್ನಿಸುವುದು ಉತ್ತಮ. ಜಂಕ್ ಫುಡ್ ಸೇವನೆ, ಅತಿಯಾಗಿ ಚಿಂತೆ ಮಾಡುವುದು, ಹಳೆಯ ನೆನಪುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಮೆಲಕು ಹಾಕುವುದು ಹೀಗೆ ಹಲವಾರು ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಅವುಗಳನ್ನು ಕೂಡಲೇ ನಿಲ್ಲಿಸಿರಿ. ನಿಮಗಿರುವ ಚಿಂತೆಗಳು ಏನು ಎಂಬುದನ್ನು ಬರೆದಿಟ್ಟುಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳಿರಿ.

ಹೆಚ್ಚು ಸ್ಮಾರ್ಟ್‌ಫೋನ್ ಬಳಸಬೇಡಿ: ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಹೆಚ್ಚಾಗಿ ಬಳಸಬೇಡಿ. ಮಲಗುವ 1 ಗಂಟೆ ಮುಂಚೆ ಕಂಪ್ಯೂಟರ್, ಸೆಲ್ ಫೋನ್ ಬಳಸದಿರುವುದೇ ಉತ್ತಮ. ಗ್ಯಾಜೆಟ್ ಗಳ ಅತಿಯಾದ ಬಳಕೆ ನಿದ್ರೆಯನ್ನು ಹಾಳು ಮಾಡುತ್ತದೆ. ಇದು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಹೀಗಾಗಿ ಈ ಬಗ್ಗೆ ತುಂಬಾ ಎಚ್ಚರಿಕೆ ವಹಿಸುವುದು ಸೂಕ್ತ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News