Migraine ನೋವು ನಿವಾರಣೆಗೆ ದೇಸಿ ತುಪ್ಪ, ಶುಂಠಿ ಹಾಗೂ ದಾಲ್ಚಿನಿ ಮನೆಮದ್ದು

ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಜನರು ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸುತ್ತಿದ್ದಾರೆ. ಒಂದು ವೇಳೆ ನಿಮಗೂ ಕೂಡ ಮೈಗ್ರೇನ್ ಅಟ್ಯಾಕ್ ಅನುಭವಿಸುತ್ತಿದ್ದರೆ ಮತ್ತು ಅದು ಅಷ್ಟೊಂದು ತೀವ್ರವಾಗಿಲ್ಲ ಎಂದಾದರೆ ಈ ಮನೆಮದ್ದುಗಳನ್ನು ಟ್ರೈ ಮಾಡಬಹುದು.  

Last Updated : Aug 30, 2020, 03:14 PM IST
Migraine ನೋವು ನಿವಾರಣೆಗೆ ದೇಸಿ ತುಪ್ಪ, ಶುಂಠಿ ಹಾಗೂ ದಾಲ್ಚಿನಿ ಮನೆಮದ್ದು  title=

ನವದೆಹಲಿ: ತಲೆನೋವು ಏನೇ ಇರಲಿ, ಅದು ನಮ್ಮ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಇಂದಿನ ಒತ್ತಡ ಭರಿತ ಜೀವನದಲ್ಲಿ, ಮಕ್ಕಳು ಅಥವಾ ಹಿರಿಯರು, ಬಹುತೇಕ ಎಲ್ಲರೂ ತಲೆನೋವಿನ ಬಗ್ಗೆ ದೂರು ನೀಡುತ್ತಾರೆ. ಕೆಲವೊಮ್ಮೆ, ಈ ನೋವು ಮೈಗ್ರೇನ್‌ನ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ಇತರ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಮೈಗ್ರೈನ್ ಏನು?
ಮೈಗ್ರೇನ್ ತಲೆನೋವಿನ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ತಲೆಯ ಅರ್ಧಭಾಗದಲ್ಲಿ ನೋವು ಉಂಟುಮಾಡುತ್ತದೆ. ಈ ನೋವು  ಆಗಾಗ ಬರುತ್ತಿದ್ದರೂ ಕೂಡ,  ಕೆಲವೊಮ್ಮೆ ಅದು ತಲೆಯಿಡಿ ವ್ಯಾಪಿಸುತ್ತದೆ. ಈ ನೋವು ಕೆಲವು ನಿಮಿಷಗಳಿಂದ ಹಿಡಿದು ಕೆಲವು ದಿನಗಳವರೆಗೆ ಮುಂದುವರಿಯಬಹುದು. ಮೈಗ್ರೇನ್ ಅನ್ನು ನ್ಯೂರಾಲಾಜಿಕಲ್ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಈ ತಲೆನೋವಿನ ಜೊತೆಗೆ, ಕೆಲವು ಜನರು ವಾಂತಿ ಅಥವಾ ಶೀತದಂತಹ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

ಪ್ರತಿ ತಲೆನೋವು ಮೈಗ್ರೇನ್ ಅಲ್ಲ ಎಂಬುದನ್ನು ಸಹ ನೆನಪಿನಲ್ಲಿಡಿ. ನೀವು ಆಗಾಗ್ಗೆ ತಲೆನೋವು ಹೊಂದಿದ್ದರೆ ಅಥವಾ ಅದರೊಂದಿಗೆ ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಂತರ ಒಮ್ಮೆ ವೈದ್ಯರನ್ನು ಸಂಪರ್ಕಿಸಿ.

ಆನುವಂಶಿಕ ಕಾಯಿಲೆ ಎಂದೇ ಹೇಳಲಾಗುವ ಮೈಗ್ರೇನ್ ನಲ್ಲಿ ಕ್ಲಾಸಿಕಲ್ ಮೈಗ್ರೇನ್ ಹಾಗೂ ನಾನ್-ಕ್ಲಾಸಿಕಲ್ ಮೈಗ್ರೇನ್ ಎಂಬ ಎರಡು ವಿಧಗಳಿವೆ. ಎರಡೂ ವಿಧದ ಮೈಗ್ರೇನ್ ಕಾಯಿಲೆ ಬಂದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧಿ ಪಡೆಯುವುದು ಉತ್ತಮ. ನಿಮಗೆ ತಿಳಿದ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದರಿಂದ ದೂರ ಉಳಿಯಿರಿ.

ಲಕ್ಷಣಗಳು

  • ಹಸಿವು ಕಡಿಮೆಯಾಗುವುದು.
  • ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದು.
  • ಪೂರ್ಣ ಅಥವಾ ಅರ್ಧ ತಲೆಯಲ್ಲಿ ವಿಪರೀತ ತಲೆನೋವು
  • ಬೆವರು ಬರುವುದು.
  • ಬೆಳಕು ಹಾಗೂ ಗಟ್ಟಿ ಧ್ವನಿ ಕೇಳಿದಾಗ ಹೆದರಿಕೆಯಾಗುವುದು ಇತ್ಯಾದಿ 

ಮೈಗ್ರೇನ್ ನೋವು ಕಡಿಮೆಯಾಗಲು ಇಲ್ಲಿವೆ ಮನೆ ಮದ್ದು

  • ದೇಸಿ ತುಪ್ಪ- ಮೈಗ್ರೇನ್ ನ ವಿಪರೀತ ನೋವು ತಡೆಯಲು ನಿತ್ಯ 2-2 ಹನಿ ದೇಸಿ ತುಪ್ಪವನ್ನು ನಿಮ್ಮ ಮೂಗಿನ ಎರಡು ಹೊರಳೆಗಳಲ್ಲಿ ಹಾಕಿ.
  • ಲವಂಗ್ ಪೌಡರ್- ತಲೆಯಲ್ಲಿ ವಿಪರೀತ ನೋವು ಕಂಡು ಬಂದಾಗ ಹಾಲಿನಲ್ಲಿ ಲವಂಗ್ ಪೌಡರ್ ಹಾಗೂ ಉಪ್ಪನ್ನು ಬೆರೆಸಿ ಸೇವಿಸಿ.
  • ಶುಂಠಿ- 1 ಚಮಚೆ ಹಸಿ ಶುಂಠಿ ರಸವನ್ನು ಜೇನುತುಪ್ಪದ ಜೊತೆಗೆ ಬೆರೆಸಿ ಸೇವಿಸಿ. ಹಸಿ ಶುಂಠಿ ಬೆರೆಸಿದ ಚಹಾ ಸೇವನೆ ಕೂಡ ಉತ್ತಮ.
  • ದಾಲ್ಚಿನಿ- ನೀರಿನಲ್ಲಿ ದಾಲ್ಚಿನಿಯನ್ನು ಅರಿದು ಅದರ ಪೇಸ್ಟ್ ಅನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ.
  • ಮಸಾಜ್-ಕೊಬ್ಬರಿ ಎಣ್ಣೆಯನ್ನು ಹದ ಬಿಸಿ ಮಾಡಿ, ತಲೆಯ ನೋವು ಇರುವ ಭಾಗಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ .

Trending News