Better Sleep Diet : ಈ ಐದು ವಸ್ತುಗಳನ್ನು ಸೇವಿಸಿ ನೋಡಿ , ಗಾಢ ನಿದ್ದೆಗೆ ಕೊರತೆಯಿರುವುದಿಲ್ಲ

ನಮ್ಮಲ್ಲಿ ಅನೇಕರು ರಾತ್ರಿಯಲ್ಲಿ ನಿದ್ದೆ ಬಾರದಿರುವ ಸಮಸ್ಯೆಯನ್ನು ಎದುರಿಸುತ್ತಾರೆ. ಅನೇಕ ಜನರು ರಾತ್ರಿಯಿಡೀ ಮಗ್ಗಲು ಬದಲಿಸುತ್ತಲೇ ಇರುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಸರಿಯಾದ ಆಹಾರ ಸೇವಿಸದೇ ಇರಬಹುದು, ಅನಾರೋಗ್ಯಕರ ಆಹಾರ ಪದ್ದತಿಯನ್ನು ತಮ್ಮದಾಗಿಸಿಕೊಂಡಿರಬಹುದು.

Written by - Ranjitha R K | Last Updated : Sep 16, 2021, 07:10 PM IST
  • ಆರೋಗ್ಯವಾಗಿರಲು ನಿದ್ರೆ ಕೂಡ ಅಗತ್ಯ.
  • ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ 6 ರಿಂದ 8 ಗಂಟೆಗಳ ನಿದ್ದೆ ಬೇಕು.
  • ಪನೀರ್ ನಲ್ಲಿ ಅಧಿಕ ಪ್ರಮಾಣದಲ್ಲಿ ಟ್ರಿಪ್ಟೊಫಾನ್ ಇರುತ್ತದೆ
Better Sleep Diet : ಈ ಐದು ವಸ್ತುಗಳನ್ನು ಸೇವಿಸಿ ನೋಡಿ , ಗಾಢ ನಿದ್ದೆಗೆ ಕೊರತೆಯಿರುವುದಿಲ್ಲ  title=
ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ 6 ರಿಂದ 8 ಗಂಟೆಗಳ ನಿದ್ದೆ ಬೇಕು. (file photo)

ನವದೆಹಲಿ : ನಮ್ಮಲ್ಲಿ ಅನೇಕರು ರಾತ್ರಿಯಲ್ಲಿ ನಿದ್ದೆ ಬಾರದಿರುವ ಸಮಸ್ಯೆಯನ್ನು ಎದುರಿಸುತ್ತಾರೆ. ಅನೇಕ ಜನರು ರಾತ್ರಿಯಿಡೀ ಮಗ್ಗಲು ಬದಲಿಸುತ್ತಲೇ ಇರುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಸರಿಯಾದ ಆಹಾರ ಸೇವಿಸದೇ ಇರಬಹುದು, ಅನಾರೋಗ್ಯಕರ ಆಹಾರ ಪದ್ದತಿಯನ್ನು ತಮ್ಮದಾಗಿಸಿಕೊಂಡಿರಬಹುದು. ಅಥವಾ ನಿದ್ರಾಹೀನತೆಯ ರೋಗ ಕಾಡುತ್ತಿರಬಹದು. ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ 6 ರಿಂದ 8 ಗಂಟೆಗಳ ನಿದ್ದೆ ಬೇಕು ಎನ್ನಲಾಗುತ್ತದೆ (Sleeping Tips). ನಿರಂತರವಾಗಿ ನಿದ್ರಿಸಲು ತೊಂದರೆ ಅನುಭವಿಸುತ್ತಿದ್ದರೆ, ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ, ಅದನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಲು, ವೈದ್ಯರನ್ನು ಸಂಪರ್ಕಿಸಿ. ಮತ್ತು ನೀವು ಮಲಗುವ ಮುನ್ನ ಚಹಾ, ಕಾಫಿ (Tea Coffee) ಸೇವಿಸುತ್ತಿದ್ದರೆ, ಈ ಅಭ್ಯಾಸದಿಂದ ದೂರವಿರಿ. ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ, ನಿದ್ರಾಹೀನತೆಯ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಒಳ್ಳೆಯ ನಿದ್ರೆಗಾಗಿ ಈ ವಸ್ತುಗಳನ್ನು ಸೇವಿಸಿ:
1. ಬಾದಾಮಿ : ಬಾದಾಮಿಯನ್ನು (Almond) ಮೆಗ್ನೀಸಿಯಮ್‌ನ ಉತ್ತಮ ಮೂಲವೆಂದು ಹೇಳಲಾಗುತ್ತದೆ. ಬಾದಾಮಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ (Benefits of almond). ಬಾದಾಮಿಯನ್ನು ಸೇವಿಸುವುದರಿಂದ ಸ್ನಾಯುಗಳನ್ನು ಸಡಿಲಗೊಳಿಸಬಹುದು. ಬಾದಾಮಿಯಲ್ಲಿ ಟ್ರಿಪ್ಟೊಫಾನ್ ಕೂಡ ಇರುತ್ತದೆ. ಬಾದಾಮಿಯನ್ನು ಸೇವಿಸುವುದರಿಂದ ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಬಹುದು. 

ಇದನ್ನೂ ಓದಿ : Dandruff Treatment : ತಲೆಹೊಟ್ಟಿಗೆ ಶಾಶ್ವತ ಪರಿಹಾರ ಮತ್ತು ಸುಂದರ ಕೂದಲಿಗೆ ತಪ್ಪದೆ ಬಳಸಿ ಈ ಮನೆಮದ್ದುಗಳನ್ನ 

2. ಅಶ್ವಗಂಧ : ನೀವು ನಿದ್ರಾಹೀನತೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ಅಶ್ವಗಂಧವನ್ನು (Ashwagandh) ಆಹಾರದಲ್ಲಿ ಸೇರಿಸಿ. ಆಯುರ್ವೇದದಲ್ಲಿ ಅಶ್ವಗಂಧವನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಶ್ವಗಂಧದಲ್ಲಿ ಒತ್ತಡ ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುವ ಅನೇಕ ಅಂಶಗಳು ಕಂಡು ಬರುತ್ತವೆ. 

3. ಪನೀರ್ : ಪನೀರ್ ನಲ್ಲಿ (Paneer) ಅಧಿಕ ಪ್ರಮಾಣದಲ್ಲಿ ಟ್ರಿಪ್ಟೊಫಾನ್ ಅಂಶ ಇರುತ್ತದೆ. ಟ್ರಿಪ್ಟೊಫಾನ್ ಒಂದು ಅಮೈನೋ ಆಮ್ಲವಾಗಿದ್ದು ಅದು ನ್ಯುರೋ ಟ್ರಾನ್ಸ್ಮೀಟರ್  ಸಿರೊಟೋನಿನ್ ಅನ್ನು ಉತ್ಪಾದಿಸುತ್ತದೆ. ಉತ್ತಮ ನಿದ್ರೆ ಪಡೆಯಲು ಇವು ಸಹಾಯಕವಾಗಬಹುದು. ಪನೀರ್ (Benefits of paneer) ಅನ್ನು ಆಹಾರದಲ್ಲಿ ಸೇರಿಸುವ ಮೂಲಕ, ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಬಹುದು.

4. ಪುದೀನ ರಸ: ನಿಮಗೆ ನಿದ್ದೆ ಮಾಡಲು ತೊಂದರೆ ಇದ್ದರೆ, ರಾತ್ರಿ ಮಲಗುವಾಗ ಪುದೀನ ರಸವನ್ನು (Mint juice) ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ : High Blood Pressure: ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತೆ ಈ ಆಹಾರ ಪದಾರ್ಥಗಳು

5. ಬಿಸಿ ಹಾಲು : ಹಾಲು (milk) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ, ಅದು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News