ಈ ನಾಲ್ಕು ಸಮಸ್ಯೆ ಇದ್ದವರಿಗೆ ವಿಷವಾಗಿ ಪರಿಣಮಿಸಬಹುದು ನೆಲ್ಲಿಕಾಯಿ.!

Amla Side Effects: ಆರೋಗ್ಯದ ಗಣಿಯಾಗಿದ್ದರೂ ಕೂಡಾ ನೆಲ್ಲಿಕಾಯಿಯನ್ನು ಕೆಲವು ಆರೋಗ್ಯ ಸಮಸ್ಯೆಗಳಿದ್ದವರು ತಪ್ಪಿಯೂ ತಿನ್ನುವಂತಿಲ್ಲ. ಒಂದೊಮ್ಮೆ ಸೇವಿಸಿದರೆ ಅದರ ಅಡ್ಡ ಪರಿಣಾಮಗಳನ್ನು ಕೂಡಾ ಎದುರಿಸಬೇಕಾಗುತ್ತದೆ.   

Written by - Ranjitha R K | Last Updated : Dec 2, 2022, 08:57 AM IST
  • ಚಳಿಗಾಲ ಆರಂಭವಾಗಿದೆ. ಮಾರುಕಟ್ಟೆಗೆ ನೆಲ್ಲಿಕಾಯಿ ಲಗ್ಗೆ ಇಟ್ಟಿದೆ.
  • ನೆಲ್ಲಿಕಾಯಿ ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು.
  • ಕೆಲವು ಆರೋಗ್ಯ ಸಮಸ್ಯೆಗಳಿದ್ದವರು ತಪ್ಪಿಯೂ ಇದನ್ನು ತಿನ್ನುವಂತಿಲ್ಲ.
ಈ ನಾಲ್ಕು ಸಮಸ್ಯೆ ಇದ್ದವರಿಗೆ ವಿಷವಾಗಿ ಪರಿಣಮಿಸಬಹುದು ನೆಲ್ಲಿಕಾಯಿ.! title=
Amla Side Effects

Amla Side Effects : ಚಳಿಗಾಲ ಆರಂಭವಾಗಿದೆ. ಮಾರುಕಟ್ಟೆಗೆ ನೆಲ್ಲಿಕಾಯಿ ಲಗ್ಗೆ ಇಟ್ಟಿದೆ. ಈ ಋತುವಿನಲ್ಲಿ ನೆಲ್ಲಿಕಾಯಿ ಹೇರಳವಾಗಿ ಸಿಗುತ್ತದೆ. ನೆಲ್ಲಿಕಾಯಿ ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು. ಅನೇಕ ರೋಗಗಳಿಗೆ ನೆಲ್ಲಿಕಾಯಿ ರಾಮಬಾಣ. ನೆಲ್ಲಿಕಾಯಿಯಲ್ಲಿ ವಿಟಮಿನ್-ಸಿ ಪ್ರಮಾಣ ಅಧಿಕವಾಗಿರುತ್ತದೆ. ಈ ಕಾರಣದಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಾಕಾರಿಯಾಗಿದೆ. ಇನ್ನು ಕೂದಲು ಚರ್ಮದ ಆರೋಗ್ಯಕ್ಕಾಗಿಯೂ ಇದನ್ನೂ ಬಳಸಲಾಗುತ್ತದೆ. ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಲು ನೈಸರ್ಗಿಕವಾಗಿ ಬಳಸಬಹುದಾದ ವಸ್ತು ಇದು. ಹೀಗೆ ಹೇಳುತ್ತಾ ಹೋದರೆ ನೆಲ್ಲಿ ಕಾಯಿ ಉಪಯೋಗಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನೆಲ್ಲಿಕಾಯಿಯನ್ನು ಅನೇಕ ರೀತಿಯಲ್ಲಿ ಸೇವಿಸಬಹುದು. ಆದರೆ ಆರೋಗ್ಯದ ಗಣಿಯಾಗಿದ್ದರೂ ಕೂಡಾ ನೆಲ್ಲಿಕಾಯಿಯನ್ನು ಕೆಲವು ಆರೋಗ್ಯ ಸಮಸ್ಯೆಗಳಿದ್ದವರು ತಪ್ಪಿಯೂ ತಿನ್ನುವಂತಿಲ್ಲ. ಒಂದೊಮ್ಮೆ ಸೇವಿಸಿದರೆ ಅದರ ಅಡ್ಡ ಪರಿಣಾಮಗಳನ್ನು ಕೂಡಾ ಎದುರಿಸಬೇಕಾಗುತ್ತದೆ. 

 ನೆಗಡಿ, ಕೆಮ್ಮುವಿನಿಂದ ಬಳಲುತ್ತಿದ್ದಾಗ ನೆಲ್ಲಿಕಾಯಿಯಿಂದ ದೂರವಿರಿ : 
ನೆಲ್ಲಿಕಾಯಿ ದೇಹವನ್ನು ತಂಪಾಗಿಸುತ್ತದೆ. ಇದೇ ಕಾರಣಕ್ಕೆ ಶೀತ, ನೆಗಡಿ ಕೆಮ್ಮು ಜ್ವರದಿಂದ ಬಳಲುತ್ತಿರುವವರು ನೆಲ್ಲಿಕಾಯಿಯಿಂದ ದೂರವಿರಬೇಕು ಎಂದು ಹೇಳಲಾಗುತ್ತದೆ. ಈ ಸಮಸ್ಯೆಗಳಿದ್ದಾಗ ಬಾಯಿ ರುಚಿ ಎಂದು ಕೊಂಡು ತಿನ್ನಲು ಹೋದರೆ ಅದು ದೇಹದ ಉಷ್ಣತೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಪರಿಣಾಮ ಮನೆಯಲ್ಲಿಯೇ ವಾಸಿಮಾಡಿಕೊಳ್ಳಬಹುದಾದ    ಸಮಸ್ಯೆ ಆಸ್ಪತ್ರೆ ಬಾಗಿಲವರೆಗೆ ಹೋಗಬಹುದು. 

ಇದನ್ನೂ ಓದಿ :  Diabetes : ಮಧುಮೇಹಿಗಳೆ ಬೆಳಗಿನ ಉಪಾಹಾರದಲ್ಲಿ ಮಾಡಬೇಡಿ ಈ ತಪ್ಪುಗಳನ್ನು!

ಲೋ ಬ್ಲಡ್ ಶುಗರ್ ರೋಗಿಗಳು ಎಚ್ಚರ : 
ಯಾವುದಾದರೂ ಆರೋಗ್ಯ ಸಮಸ್ಯೆಗಾಗಿ ಆ್ಯಂಟಿ ಬಯೋಟಿಕ್ ಔಷಧಿಯನ್ನು ಸೇವಿಸುತ್ತಿದ್ದರೆ, ಅಂಥವರು ನೆಲ್ಲಿಕಾಯಿ ತಿನ್ನಬಾರದು. ಮಾತ್ರವಲ್ಲ ಯಾರ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿರುತ್ತದೆಯೋ ಅಂದರೆ ಲೋ ಬ್ಲಡ್ ಶುಗರ್ ಸಮಸ್ಯೆಯಿಂದ ಬಳಲುತ್ತಿರುವವರು ಕೂಡಾ ನೆಲ್ಲಿಕಾಯಿಯಿಂದ ಅಂತರ ಕಾಯ್ದುಕೊಳ್ಳುವುದು ಒಳಿತು.  ಇಲ್ಲವಾದರೆ ಇದು ಗಂಭೀರ ಆರೋಗ್ಯ ಸಮಸ್ಯೆಗೆ ತಳ್ಳಬಹುದು.  

ಮೂತ್ರಪಿಂಡ ರೋಗಿಗಳಿಗೆ ಅಪಾಯ ತಂದೊಡ್ಡುತ್ತದೆ ನೆಲ್ಲಿ : 
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರು  ನೆಲ್ಲಿಕಾಯಿಯನ್ನು ಅಪ್ಪಿ ತಪ್ಪಿ ಕೂಡಾ ಸೇವಿಸಬಾರದು. ನೆಲ್ಲಿಕಾಯಿ ತಿನ್ನುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಸೋಡಿಯಂ ಪ್ರಮಾಣ ಹೆಚ್ಚಾದಾಗ ಅದನ್ನು ಫಿಲ್ಟರ್ ಮಾಡುವುದು ಕಿಡ್ನಿಗೆ ಕಷ್ಟವಾಗುತ್ತದೆ. ಹೀಗಾದಾಗ ಇದು ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು. 

ಇದನ್ನೂ ಓದಿ :  Men's Health Tips : ವಿವಾಹಿತ ಪುರುಷರೆ ನೀವು ತಪ್ಪದೆ ಸೇವಿಸಿ ಕಲ್ಲಂಗಡಿ ಬೀಜಗಳು!

ಶಸ್ತ್ರಚಿಕಿತ್ಸೆಗೆ 2 ವಾರಗಳ ಮೊದಲು  ನೆಲ್ಲಿ ಸೇವನೆ ನಿಷಿದ್ಧ : 
ಯಾವುದೇ ರೀತಿಯ ಕಾಯಿಲೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎನ್ನುವುದು ತಿಳಿದಿದ್ದರೆ, ಶಸ್ತ್ರಚಿಕಿತ್ಸೆಗೆ 2 ವಾರಗಳ ಮೊದಲೇ ನೆಲ್ಲಿಕಾಯಿಯ ಸೇವನೆಯನ್ನು ನಿಲ್ಲಿಸಿಬಿಡಬೇಕು. ಯಾಕೆಂದರೆ ಶಸ್ತ್ರ ಚಿಕಿತ್ಸೆಗೆ ಮುನ್ನ ನೆಲ್ಲಿ ಕಾಯಿ ತಿನ್ನುತ್ತಿದ್ದರೆ  ರಕ್ತನಾಳಗಳು ಒಡೆಯುವ ಅಪಾಯವಿರುತ್ತದೆ. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News