Corona Virus : ಕೊರೊನಾ ವೈರಸ್ ಭಯವೇ? ಈ 5 ಆಹಾರ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ

Immunity booster : ಕೊರೊನಾ ವೈರಸ್ ಮತ್ತೊಮ್ಮೆ ಪ್ರಪಂಚದಾದ್ಯಂತ ಹರಡಲು ಪ್ರಾರಂಭಿಸಿದೆ, ಭಾರತದಲ್ಲಿಯೂ ಕೋವಿಡ್ -19 ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಇನ್ನೊಮ್ಮೆ ಎಚ್ಚೆತ್ತುಕೊಳ್ಳಬೇಕಾಗಿದೆ.   

Written by - Chetana Devarmani | Last Updated : Apr 14, 2023, 04:34 PM IST
  • ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು
  • ಕೊರೊನಾ ವೈರಸ್ ಭಯವೇ?
  • ಈ 5 ಆಹಾರ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ
Corona Virus : ಕೊರೊನಾ ವೈರಸ್ ಭಯವೇ? ಈ 5 ಆಹಾರ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ title=
Corona Virus

Corona Virus : ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೆ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯವಿದೆ. ಮೊದಲು ಮಾಸ್ಕ್ ಧರಿಸಲು ಪ್ರಾರಂಭಿಸಿ ಮತ್ತು ನಿಮ್ಮ ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯಿರಿ. ನಮ್ಮಲ್ಲಿ ಅನೇಕರು ಕೊರೊನಾ ಲಸಿಕೆಯ ಎಲ್ಲಾ ಡೋಸ್‌ಗಳನ್ನು ತೆಗೆದುಕೊಂಡಿರಬಹುದು, ಆದರೆ ಇನ್ನೂ ವೈರಲ್ ಸೋಂಕಿನ ಅಪಾಯ ಉಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ, ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸಹ ಅಗತ್ಯವಾಗಿದೆ.

1. ಅರಿಶಿನ : ಭಾರತದ ಪ್ರತಿಯೊಂದು ಮನೆಯಲ್ಲೂ ಅರಿಶಿನವನ್ನು ಸೇವಿಸಲಾಗುತ್ತದೆ. ಈ ಮಸಾಲೆಯಲ್ಲಿ ಅನೇಕ ಔಷಧೀಯ ಮತ್ತು ಆಯುರ್ವೇದ ಗುಣಗಳು ಕಂಡುಬರುತ್ತವೆ. ಈ ಮಸಾಲೆಯನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. 

ಇದನ್ನೂ ಓದಿ : Diabetic Sugar: ನಿಮ್ಮ ಆಹಾರದಲ್ಲಿ ಈ ಸಕ್ಕರೆಯನ್ನು ಬಳಸಿ, ಮಧುಮೇಹದಿಂದ ದೂರ ಉಳಿಯಿರಿ!

2. ಬ್ರೊಕೊಲಿ : ಹಸಿರು ತರಕಾರಿಗಳಲ್ಲಿ ಬ್ರೊಕೊಲಿಯನ್ನು ಅತ್ಯಂತ ಶಕ್ತಿಯುತವೆಂದು ಪರಿಗಣಿಸಲಾಗುತ್ತದೆ. ಇದು ರೋಗಗಳ ವಿರುದ್ಧ ಹೋರಾಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದರಲ್ಲಿ ಸಲ್ಫೊರಾಫೇನ್ ಎಂಬ ಉತ್ಕರ್ಷಣ ನಿರೋಧಕವು ಕಂಡುಬರುತ್ತದೆ. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.

3. ಪಾಲಕ್‌ : ಪಾಲಕ್ ಸೊಪ್ಪು ಅತ್ಯಂತ ಪೌಷ್ಟಿಕವಾದ ಸೊಪ್ಪು. ಇದರಲ್ಲಿ ಅನೇಕ ರೀತಿಯ ಆಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವೈರಲ್ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 
 
4. ಗ್ರೀನ್‌ ಟೀ : ಗ್ರೀನ್‌ ಟೀ ಅನ್ನು ಅನೇಕ ಪಾನೀಯಗಳಲ್ಲಿ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಕಡಿಮೆ ಪ್ರಮಾಣದ ಕೆಫೀನ್ ಅನ್ನು ಹೊಂದಿರುತ್ತದೆ. ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಬಯಸಿದರೆ, ಪ್ರತಿದಿನ 2 ಕಪ್ ಗ್ರೀನ್‌ ಟೀ ಅನ್ನು ತೆಗೆದುಕೊಳ್ಳಿ.

ಇದನ್ನೂ ಓದಿ : Health Care: ಮೀನು ತಿನ್ನುವುದರಿಂದ  ಆರೋಗ್ಯಕ್ಕೆ ಇವೆ  ಹಲವು ಪ್ರಯೋಜನಗಳು

5. ಸೂರ್ಯಕಾಂತಿ ಬೀಜಗಳು : ಸೂರ್ಯಕಾಂತಿ ಬೀಜಗಳಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ಇದರಲ್ಲಿರುವ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಇದನ್ನು ಪರಿಷ್ಕರಿಸಿರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News