ಬ್ಲಡ್ ಶುಗರ್ ಕಡಿಮೆ ಮಾಡಲು ಅಡುಗೆಮನೆಯಲ್ಲಿರುವ ಈ ಒಂದು ಮಸಾಲೆ ಸಾಕು

ಮಧುಮೇಹ: ಇಂದಿನ ಯುಗದಲ್ಲಿ ಪ್ರಪಂಚದಾದ್ಯಂತ ಬಹುತೇಕ ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ ಅಗ್ರಸ್ಥಾನದಲ್ಲಿದೆ. ಮಧುಮೇಹಿಗಳಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರವಾದ ಆಹಾರ ಕ್ರಮವೇ ಉತ್ತಮ ಮಾರ್ಗ.   

Written by - Yashaswini V | Last Updated : Jul 28, 2022, 09:39 AM IST
  • ಮಧುಮೇಹಿಗಳಿಗೆ ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ತುಂಬಾ ಪ್ರಯೋಜನಕಾರಿ ಆಗಿದೆ
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿ
  • ಆ ಮಸಾಲೆ ಯಾವುದು? ಅದನ್ನು ಯಾವ ರೀತಿ ಬಳಸಬೇಕು ತಿಳಿಯೋಣ...
ಬ್ಲಡ್ ಶುಗರ್ ಕಡಿಮೆ ಮಾಡಲು ಅಡುಗೆಮನೆಯಲ್ಲಿರುವ ಈ ಒಂದು ಮಸಾಲೆ ಸಾಕು title=
Turmeric For Diabetes

ಮಧುಮೇಹಕ್ಕೆ ಮನೆಮದ್ದು: ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಬ್ಲಡ್ ಶುಗರ್ ಲೆವೆಲ್ ಕಾಪಾಡಿಕೊಳ್ಳುವುದು ಯಾವುದೇ ಸವಾಲಿಗಿಂತ ಕಡಿಮೆ ಇಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚು ಕಡಿಮೆ ಆದರೆ ಅದರಿಂದ ಇತರ ಕಾಯಿಲೆಗಳು ಉಲ್ಬಣಿಸುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಹಾಗಾಗಿ, ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಬಹಳ ಮುಖ್ಯ. ಆಹಾರ ತಜ್ಞರ ಪ್ರಕಾರ ಬ್ಲಡ್ ಶುಗರ್ ಕಡಿಮೆ ಮಾಡಲು ಅಡುಗೆಮನೆಯಲ್ಲಿರುವ ಒಂದು ಮಸಾಲೆ ಬಹಳ ಪ್ರಯೋಜನಕಾರಿ ಎಂದು ನಂಬಲಾಗಿದೆ. ಅದುವೇ ಅರಿಶಿನ.

ಹೌದು, ಮಧುಮೇಹ ಸಮಸ್ಯೆ ಇರುವವರಿಗೆ ಅರಿಶಿನ ಬಹಳ ಪ್ರಯೋಜನಕಾರಿ ಆದ ಮಸಾಲೆ ಪದಾರ್ಥ ಎಂದು ನಂಬಲಾಗಿದೆ. ಅರಿಶಿನವು ಹಲವಾರು ತರಕಾರಿಗಳು ಮತ್ತು ಪಾಕವಿಧಾನಗಳನ್ನು ತಯಾರಿಸಲು ಬಳಸಲಾಗುವ ಮಸಾಲೆಯಾಗಿದೆ. ಅರಿಶಿನ ಸೇವನೆಯು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನವನ್ನು ನೀಡುತ್ತದೆ. ಮಧುಮೇಹಿಗಳಿಗೆ ಅರಿಶಿನ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ತಿಳಿಯೋಣ...

ಇದನ್ನೂ ಓದಿ- Bitter Gourd: ಈ ಜನರು ಅಪ್ಪಿತಪ್ಪಿಯೂ ಕೂಡ ಹಾಗಲಕಾಯಿ ಸೇವಿಸಬಾರದು, ಆರೋಗ್ಯಕ್ಕೆ ಮಾರಕ

ಮಧುಮೇಹಿಗಳಿಗೆ ಅರಿಶಿನದ ಪ್ರಯೋಜನಗಳು: 
* ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಬ್ಲಡ್ ಶುಗರ್ ಲೆವೆಲ್ ಸಹ ಹೆಚ್ಚಾಗುತ್ತದೆ. ಅರಿಶಿನದಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಹೆಚ್ಚುತ್ತಿರುವ ಗ್ಲೂಕೋಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

* ಅರಿಶಿನವನ್ನು ನಿಯಮಿತವಾಗಿ ಸೇವಿಸಿದರೆ, ಮೈಗ್ರೇನ್‌ನಂತಹ ತೊಂದರೆಗಳಲ್ಲಿಯೂ ನೀವು ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ ನೀವು ಅರಿಶಿನವನ್ನು ನೀರಿನಲ್ಲಿ ಬೆರೆಸಿ ಕುಡಿಯಬಹುದು. ಅಲ್ಲದೆ, ಈ ಮಸಾಲೆಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಅದು ಆರೋಗ್ಯಕ್ಕೆ ಒಳ್ಳೆಯದು. 

* ಬೆಳಗಿನ ಉಪಾಹಾರದ ಸಮಯದಲ್ಲಿ ಹಾಲು, ಅರಿಶಿನ ಮತ್ತು ಕರಿಮೆಣಸು ಬೆರೆಸಿ ಸೇವಿಸಿದರೆ, ಅದು ಮಧುಮೇಹ ರೋಗಿಗಳಿಗೆ ಖಂಡಿತವಾಗಿಯೂ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ- Belly Fat: ನಿಮ್ಮ ಕಚೇರಿಯ ಆಸನದಲ್ಲಿಯೇ ಕುಳಿತು ಈ ವ್ಯಾಯಾಮ ಮಾಡಿ, ಹೊಟ್ಟೆಯ ಬೊಜ್ಜು ಕರಗಿಸಿ

* ಅರಿಶಿನವನ್ನು ರಕ್ತಸ್ರಾವವನ್ನು ನಿಲ್ಲಿಸಲು ಸಹ ಬಳಸಲಾಗುತ್ತದೆ. ಯಾರಿಗಾದರೂ ಸಣ್ಣಪುಟ್ಟ ಗಾಯವಾಗಿ ರಕ್ತ ಬರುತ್ತಿದ್ದರೆ ಆ ಜಾಗರಲ್ಲಿ ಸ್ವಲ್ಪ ಅರಿಶಿನ ಹಾಕಿದರೆ ಕೂಡಲೇ ರಕ್ತಸ್ರಾವ ನಿಲ್ಲುತ್ತದೆ.

* ಡಯಾಬಿಟಿಸ್ ಸಮಸ್ಯೆ ಇರುವವರು ಮಾತ್ರವಲ್ಲ ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೂ ಸಹ ಅರಿಶಿನ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News