ಅವಳಿ ಮಕ್ಕಳಾದರೂ ಜನನ ಮಾತ್ರ ದ್ವಿ-ವರ್ಷದಲ್ಲಿ

ಪ್ರಪಂಚದಾದ್ಯಂತ ಸುಮಾರು 1000 ಜನಸಂಖ್ಯೆಗೆ ನಾಲ್ಕು ಜನರಿಗೆ ಮಾತ್ರ ಒಂದೇ ಸಮಯಕ್ಕೆ ಅವಳಿಗಳು  ಜನಿಸುತ್ತವೆ.

Last Updated : Jan 3, 2018, 01:28 PM IST
ಅವಳಿ ಮಕ್ಕಳಾದರೂ ಜನನ ಮಾತ್ರ ದ್ವಿ-ವರ್ಷದಲ್ಲಿ title=

ನವದೆಹಲಿ: ನಾವು ತದ್ರೂಪಿ ಅವಳಿಗಳನ್ನು ನೋಡಿದಾಗ ಅಥವಾ ಪದಗಳನ್ನು ಕೇಳಿದಾಗ, ನಾವು ಜನ್ಮ ದಿನಾಂಕ ಮತ್ತು ವರ್ಷವನ್ನು ಹಂಚಿಕೊಳ್ಳುವ ಒಡಹುಟ್ಟಿದವರನ್ನು ಅರ್ಥೈಸಿಕೊಳ್ಳುತ್ತೇವೆ. ಆದರೆ ಪ್ರತ್ಯೇಕ ದಿನಗಳು ಮತ್ತು ವರ್ಷಗಳಲ್ಲಿ ಹುಟ್ಟಿದ ವಿಚಾರಗಳು ಅತ್ಯಂತ ಅಪರೂಪವಾಗಿ ನಡೆಯುತ್ತವೆ.  ಅವಳಿ ಮಕ್ಕಳಾದರೂ ಜನನ ಮಾತ್ರ ದ್ವಿ ವರ್ಷದಲ್ಲಿ ಸಂಭವಿಸಿದ ಘಟನೆಗಳೂ ಕೆಲವೊಮ್ಮೆ ನಡೆಯುತ್ತದೆ.

ಹೌದು, ಜೋಕ್ವಿನ್ ಮತ್ತು ಐಟಾನಾ ಡಿ ಜೀಸಸ್ ಒಂಟಿವರ್ಸ್ ವಿಷಯದಲ್ಲಿ ಈ ರೀತಿ ಅಪರೂಪದ ಜನನವಾಗಿದೆ. ಒಂಟಿವರ್ಸ್ ಅವಳಿಗಳು ಜನವರಿ 27, 2018 ರಂದು ಜನ್ಮ ತಾಳುವ ನಿರೀಕ್ಷೆ ಇತ್ತು. ಆದಾಗ್ಯೂ, ಘಟನೆಗಳ ತಿರುವಿನಲ್ಲಿ, ಅವರ ತಾಯಿ ಹೊಸ ವರ್ಷದ ಮುನ್ನಾದಿನದಂದು ಅವಧಿಗೂ ಮುನ್ನವೇ ಹೆರಿಗೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೆರಿಗೆ ಏನೋ ಸುಸೂತ್ರವಾಗಿ ಆಯಿತು. ಅವಳಿ ಮಕ್ಕಳು ಜನಿಸಿದರು. ಆದರೆ ಆ ಅವಳಿ ಮಕ್ಕಳ ಜನನದಲ್ಲಿ 20 ನಿಮಿಷಗಳ ಅಂತರವಿತ್ತು. ಇದರಿಂದಾಗಿ ಎರಡೂ ಮಕ್ಕಳ ಜನ್ಮ ದಿನಾಂಕ ಬೇರೆ ಬೇರೆ ವರ್ಷಗಳು. 

ಜೋಕ್ವಿನ್ ಡಿಸೆಂಬರ್ 31, 2017 ರಂದು 11:58 ಕ್ಕೆ ಜನ್ಮ ತಾಳಿದರೆ, ಅವರ ಸಹೋದರಿ ಜನವರಿ 1, 2018 ರಂದು 12:16 ಗಂಟೆಗೆ ಜನಿಸಿದರು.

ಪ್ರಪಂಚದಾದ್ಯಂತ ಸುಮಾರು 1000 ಜನಸಂಖ್ಯೆಗೆ ನಾಲ್ಕು ಜನರಿಗೆ ಮಾತ್ರ ಒಂದೇ ಸಮಯಕ್ಕೆ ಅವಳಿಗಳು  ಜನಿಸುತ್ತವೆ ಎಂದು ತಿಳಿದುಬಂದಿದೆ, ಆದರೆ ಅಂತಹ ಸಂದರ್ಭಗಳು ಬಹು ಅಪರೂಪ. ಕಳೆದ ವರ್ಷ, ಯುಎಸ್ನಲ್ಲಿ ಅಂತಹ ನಾಲ್ಕು ಜನ್ಮ ದಾಖಲೆಗಳಿವೆ.

Trending News