ಅಡುಗೆ ಮಾಡುವಾಗ ಈ ಮಸಾಲೆಯನ್ನು ಬಳಸಿದರೆ ಹೊಟ್ಟೆಯ ಸಮಸ್ಯೆ ಎದುರಾಗುವುದಿಲ್ಲ !

Spices Can Help Digestion:ಕೆಲವು ಮಸಾಲೆಗಳನ್ನು ಆಹಾರದಲ್ಲಿ ಬಳಸಲೇಬೇಕು. ಈ ಮಸಾಲೆಗಳನ್ನು ಬಳಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.   

Written by - Ranjitha R K | Last Updated : Feb 2, 2023, 01:33 PM IST
  • ಅನೇಕ ರೀತಿಯ ಮಸಾಲೆಗಳನ್ನು ಅಡುಗೆಗೆ ಬಳಸಲಾಗುತ್ತದೆ.
  • ಮಸಾಲೆ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.
  • ಅಡುಗೆ ಮಾಡುವಾಗ ಈ ಮಸಾಲೆಯನ್ನು ಬಳಸಲೇಬೇಕು
ಅಡುಗೆ ಮಾಡುವಾಗ ಈ ಮಸಾಲೆಯನ್ನು ಬಳಸಿದರೆ ಹೊಟ್ಟೆಯ ಸಮಸ್ಯೆ ಎದುರಾಗುವುದಿಲ್ಲ ! title=

Spices Can Help Digestion : ಭಾರತದಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಅಡುಗೆಗೆ ಬಳಸಲಾಗುತ್ತದೆ. ಮಸಾಲೆಗಳನ್ನು ಬಳಸಿ ಅಡುಗೆಯನ್ನು ರುಚಿಕರವಾಗಿಸುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಮಸಾಲೆಗಳನ್ನು ಬಳಸುವುದು ಕೆಲವೊಮ್ಮೆ ಜೀರ್ಣಕ್ರಿಯೆಯನ್ನು ಹಾನಿಗೊಳಿಸುತ್ತದೆ. ಈ ಕಾರಣದಿಂದಾಗಿ ಹೆಚ್ಚಿನ ವೈದ್ಯರು ಮಸಾಲೆಯುಕ್ತ ಆಹಾರವನ್ನು ಸೇವಿಸದಂತೆ ಸಲಹೆ ನೀಡುತ್ತಾರೆ.  ಆದರೆ ಕೆಲವು ಮಸಾಲೆಗಳನ್ನು ಆಹಾರದಲ್ಲಿ ಬಳಸಲೇಬೇಕು. ಈ ಮಸಾಲೆಗಳನ್ನು ಬಳಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. 

ಅಡುಗೆ ಮಾಡುವಾಗ ಈ ಮಸಾಲೆಯನ್ನು  ಖಂಡಿತವಾಗಿಯೂ ಬಳಸಿ : 
ಜೀರಿಗೆ :
ಜೀರಿಗೆ ಬಳಕೆಯಿಂದ ಆಹಾರದ ಘಮ ಹೆಚ್ಚುವುದು ಮಾತ್ರವಲ್ಲ, ರುಚಿಯೂ ಹೆಚ್ಚುತ್ತದೆ. ಇದರೊಂದಿಗೆ ಜೀರಿಗೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಯಾವುದೇ ರೀತಿಯ ಅಡುಗೆ ಮಾಡಿದರೂ ಅದರಲ್ಲಿ ಜೀರಿಗೆ ಸೇರಿಸುವುದನ್ನು ಮರೆಯಬೇಡಿ. 

ಇದನ್ನೂ  ಓದಿ : Health Tips: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಈ ಹಿಟ್ಟಿನ ದೋಸೆ ಸೇವಿಸಿ: ಒಂದು ವಾರದಲ್ಲಿ ಮಧುಮೇಹ ಮಾಯ

ಓಮ ಕಾಳು : 
ಓಮ ಕಾಳು ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತೂಕವನ್ನು ಕಡಿಮೆ ಮಾಡಲು ಮತ್ತು ಶೀತದಿಂದ ಪರಿಹಾರಕ್ಕಾಗಿ ಓಮ ಕಾಳನ್ನು ಬಳಸಲಾಗುತ್ತದೆ. ಯಾವುದೇ ಮಸಾಲೆಯುಕ್ತ ಆಹಾರವನ್ನು ತಯಾರಿಸುತ್ತಿದ್ದರೆ, ಅದರಲ್ಲಿ ಒಮಕಾಳನ್ನು ಸೇರಿಸಿ. ಇದು ಎಲ್ಲಾ ರೀತಿಯ ಮಸಾಲೆಗಳು ಮತ್ತು  ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇಂಗು :
ಇಂಗನ್ನು ಬೇಳೆಯಿಂದ ಹಿಡಿದು, ಎಲ್ಲಾ ಅಡುಗೆಗಳಲ್ಲಿಯೂ  ಬಳಸಲಾಗುತ್ತದೆ. ಹೊಟ್ಟೆ ನೋವು, ಗ್ಯಾಸ್, ಅಜೀರ್ಣದಂತಹ ಸಮಸ್ಯೆಗಳನ್ನು ತೊಡೆದು ಹಾಕಲು ಇಂಗು ಸಹಾಯ ಮಾಡುತ್ತದೆ.  ಹೊಟ್ಟೆಯ ಸಮಸ್ಯೆಗಳನ್ನು ಬಗೆಹರಿಸಲು  ಎಲ್ಲಾ ರೀತಿಯ ಅಡುಗೆಯಲ್ಲಿ ಇಂಗನ್ನು ಬಳಸಿ. 

ಇದನ್ನೂ  ಓದಿ : Foods To Avoid Eating With Tea : ಚಹಾ ಜೊತೆ ಈ ಆಹಾರ ಪದಾರ್ಥಗಳನ್ನು ಸೇವಿಸಿದ್ರೆ ಆರೋಗ್ಯಕ್ಕಿದೆ ಅಪಾಯ!

ಸೋಂಫು : 
ಸೋಂಫನ್ನು ಅನೇಕ ರೀತಿಯ ಅಡುಗೆಯಲ್ಲಿ ಬಳಸಲಾಗುತ್ತದೆ. ಈ ಮಸಾಲೆ ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣ ಕ್ರಿಯೆಯನ್ನು ಕೂಡಾ ಸುಧಾರಿಸುತ್ತದೆ. ಅದಕ್ಕಾಗಿಯೇಪ್ರತಿ ಅಡುಗೆಯಲ್ಲಿ ಇಂಗನ್ನು ಬಳಸುವಂತೆ ಸೂಚಿಸಲಾಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News