High Uric Acid ಸಮಸ್ಯೆಗೆ ರಾಮಬಾಣ ಗೋಧಿ ಹುಲ್ಲಿನ ರಸ, ಇಲ್ಲಿದೆ ಬಳಕೆಯ ಸರಿಯಾದ ವಿಧಾನ

High Uric Acid: ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುವವರಿಗೆ ಗೋಧಿ ಹುಲ್ಲನ್ನು ರಾಮಬಾಣವಿದ್ದಂತೆ ಎಂದು ಹೇಳಲಾಗುತ್ತದೆ. ಯೂರಿಕ್ ಆಮ್ಲದ ಸಮಸ್ಯೆಯಿಂದ ಪರಿಹಾರ ಪಡೆಯಲು ಗೋಧಿ ಹುಲ್ಲನ್ನು ಹೇಗೆ ಬಳಸುವುದು ಎಂದು ತಿಳಿಯೋಣ... 

Written by - Yashaswini V | Last Updated : May 17, 2024, 11:04 AM IST
  • ಆಯುರ್ವೇದದ ಪ್ರಕಾರ, ಯೂರಿಕ್ ಆಸಿಡ್ ಸಮಸ್ಯೆಯಿಂದ ಪರಿಹಾರ ಪಡೆಯಲು ಗೋಧಿ ಹುಲ್ಲನ್ನು ರಾಮಬಾಣ ಎಂದು ಪರಿಗಣಿಸಲಾಗಿದೆ.
  • ಗೋಧಿ ಹುಲ್ಲಿನ ರಸ ಎಂದರೆ ವೀಟ್ ಗ್ರಾಸ್ ಜ್ಯೂಸ್ ಸೇವನೆಯಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
  • ಆದರೆ, ಇದನ್ನು ಬಳಸುವ ಸರಿಯಾದ ವಿಧಾನ ತಿಳಿದಿರಬೇಕು ಅಷ್ಟೇ...
High Uric Acid ಸಮಸ್ಯೆಗೆ ರಾಮಬಾಣ ಗೋಧಿ ಹುಲ್ಲಿನ ರಸ, ಇಲ್ಲಿದೆ ಬಳಕೆಯ ಸರಿಯಾದ ವಿಧಾನ  title=

High Uric Acid Treatment: ಇತ್ತೀಚಿನ ದಿನಗಳಲ್ಲಿ ಯೂರಿಕ್ ಆಸಿಡ್ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಟ್ಟ ಜೀವನಶೈಲಿ ಮತ್ತು ಒತ್ತಡ ಇದಕ್ಕೆ ಪ್ರಮುಖ ಕಾರಣವಿರಬಹುದು. ಆದರೆ, ದೇಹದಲ್ಲಿ ಯೂರಿಕ್ ಆಮ್ಲ (Uric acid)  ಹೆಚ್ಚಾದಾಗ ಇದು 
ಕೀಲು ನೋವಿನ ಜೊತೆಗೆ, ಮೊಣಕಾಲುಗಳು ಮತ್ತು ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ತೀವ್ರವಾದ ನೋವುಂಟು ಮಾಡುತ್ತದೆ. ಇದರಿಂದ ಪರಿಹಾರ ಪಡೆಯಲು ಜೀವನಶೈಲಿಯಲ್ಲಿ ಬದಲಾವಣೆ ತುಂಬಾ ಅಗತ್ಯವಾಗಿದೆ. 

ಏನಿದು ಯೂರಿಕ್ ಆಸಿಡ್: 
ಯೂರಿಕ್ ಆಸಿಡ್ (Uric acid) ಅಥವಾ ಯೂರಿಕ್ ಆಮ್ಲವು ಒಂದು ಒಂದು ರೀತಿಯ ತ್ಯಾಜ್ಯ ಉತ್ಪನ್ನವಾಗಿದ್ದು ಇದು ದೇಹದಿಂದ ಹೊರಬಾರದೇ ಸಂಗ್ರಹವಾಗಲು ಪ್ರಾರಂಭಿಸಿದಾಗ ಹಲವು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹಾಗಾಗಿ, ಈ ಸಮಸ್ಯೆಯನ್ನು ನಿರ್ಲಕ್ಷಿಸದೆ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ ಎನ್ನುತ್ತಾರೆ ವೈದ್ಯರು. 

ಆಯುರ್ವೇದದ (Ayurveda) ಪ್ರಕಾರ, ಯೂರಿಕ್ ಆಸಿಡ್ ಸಮಸ್ಯೆಯಿಂದ ಪರಿಹಾರ ಪಡೆಯಲು ಗೋಧಿ ಹುಲ್ಲನ್ನು ರಾಮಬಾಣ ಎಂದು ಪರಿಗಣಿಸಲಾಗಿದೆ. ಗೋಧಿ ಹುಲ್ಲಿನ ರಸ ಎಂದರೆ ವೀಟ್ ಗ್ರಾಸ್ ಜ್ಯೂಸ್ ಸೇವನೆಯಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ (Uric acid problem) ಸುಲಭ ಪರಿಹಾರ ಪಡೆಯಬಹುದು. ಆದರೆ, ಇದನ್ನು ಬಳಸುವ ಸರಿಯಾದ ವಿಧಾನ ತಿಳಿದಿರಬೇಕು ಅಷ್ಟೇ... 

ಇದನ್ನೂ ಓದಿ- Duck Eggs: ವಾರಕ್ಕೊಮ್ಮೆ ಬಾತುಕೋಳಿಯ ಮೊಟ್ಟೆಯನ್ನು ಸೇವಿಸಿದರೆ ದೇಹದ ಆರೋಗ್ಯಕ್ಕೆ ಏನಾಗುತ್ತದೆ ತಿಳಿದಿದೆಯೇ??

ಗೋಧಿ ಹುಲ್ಲಿನ ರಸವನ್ನು ಹೇಗೆ ತಯಾರಿಸುವುದು? 
ಎರಡು ಚಮಚ ಗೋಧಿ ಹುಲ್ಲಿನ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಮಿಕ್ಸರ್‌ಗೆ ಹಾಕಿ ಗ್ರೈಂಡ್ ಮಾಡಿದರೆ ವೀಟ್ ಗ್ರಾಸ್ ಜ್ಯೂಸ್ (Wheatgrass juice) ತಯಾರಾಗುತ್ತದೆ. 

ಗೋಧಿ ಹುಲ್ಲಿನ ರಸದ ಪ್ರಯೋಜನಗಳು: 
ಗೋಧಿ ಹುಲ್ಲಿನ ರಸದಲ್ಲಿ ವಿಟಮಿನ್ ಬಿ, ವಿಟಮಿನ್ ಇ, ವಿಟಮಿನ್ ಎ, ಸತು, ಕ್ಯಾಲ್ಸಿಯಂ, ಅಯೋಡಿನ್ ಮತ್ತು ಮೆಗ್ನೀಸಿಯಮ್ ಮುಂತಾದ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿ ಹೆಚ್ಚಾಗಿರುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. 

ಇದನ್ನೂ ಓದಿ- Soups For Diabetes: ಮಧುಮೇಹ ನಿಯಂತ್ರಣಕ್ಕೆ ವರದಾನವಿದ್ದಂತೆ ಈ 3 ಬಗೆಯ ವೆಜ್ ಸೂಪ್‌ಗಳು

ಯೂರಿಕ್ ಆಸಿಡ್ ನಿಯಂತ್ರಿಸಲು ಗೋಧಿ ಹುಲ್ಲಿನ ರಸವನ್ನು ಬಳಸುವುದು ಹೇಗೆ? 
ಗೋಧಿ ಹುಲ್ಲಿನ ರಸದಿಂದ ನೀವು ಯೂರಿಕ್ ಆಸಿಡ್ ನಿಯಂತ್ರಿಸಲು ಬಯಸಿದರೆ ಇದನ್ನು ಬಳಸುವಾಗ ಎರಡು ಪ್ರಮುಖ ಅಂಶಗಳ ಬಗ್ಗೆ ನಿಗಾವಹಿಸುವುದು ಅಗತ್ಯವಾಗಿದೆ. 
* ಮೊದಲನೆಯದಾಗಿ ತಾಜಾ ರಸ ಸೇವನೆಯಿಂದ ಅಷ್ಟೇ ನೀವು ರಸದ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. 
* ಎರಡನೆಯದಾಗಿ, ಗೋಧಿ ಹುಲ್ಲಿನ ರಸವನ್ನು ತಯಾರಿಸಿದ ಬಳಿಕ ಅದನ್ನು ಫಿಲ್ಟರ್ ಮಾಡಿ ನಂತರ ಸೇವಿಸಿ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News