ಮೀನು ಸೇವನೆ ಆರೋಗ್ಯಕ್ಕೆ ಏಕೆ ಒಳ್ಳೆಯದು ?

ನಿಯಮಿತದ ಮೀನು ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆರೋಗ್ಯಕ್ಕೆ ಬಹಳ ಉಪಕಾರಿ. 

Last Updated : Feb 14, 2018, 12:32 PM IST
  • ಮೀನಿನಲ್ಲಿ ಇರುವ ಒಮೆಗಾ 3 ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
  • ದೃಷ್ಟಿಶಕ್ತಿ ವೃದ್ಧಿಗೆ ಮೀನಿನ ಸೇವನೆ ಸಹಕಾರಿ.
  • ಸ್ತನ, ಕೊಲೊನ್, ಅನ್ನನಾಳ, ಅಂಡಾಶಯ ಮತ್ತು ಪ್ರಾಸ್ಟೇಟ್ ಮೊದಲಾದ ಕ್ಯಾನ್ಸರ್ ಗಳನ್ನು ಮೀನು ಸೇವನೆಯಿಂದ ನಿಯಂತ್ರಿಸಬಹುದು.
ಮೀನು ಸೇವನೆ ಆರೋಗ್ಯಕ್ಕೆ ಏಕೆ ಒಳ್ಳೆಯದು ? title=

ನಿಯಮಿತದ ಮೀನು ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆರೋಗ್ಯಕ್ಕೆ ಬಹಳ ಉಪಕಾರಿ. ಇದರಲ್ಲಿ ಹೆಚ್ಚು ಪ್ರೋಟಿನ್ ಅಂಶವಿದ್ದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಒಮೆಗಾ 3 ಆಮ್ಲ ಹೆಚ್ಚಾಗಿದ್ದು, ಆರೋಗ್ಯವೃದ್ಧಿಗೆ ಇದು ಬಹಳ ಮುಖ್ಯವಾಗುತ್ತದೆ. 

ಮೀನು ಸೇವನೆಯ ಪ್ರಯೋಜನಗಳು : 

1. ಹೃದಯದ ಆರೋಗ್ಯ ಕಾಪಾಡುತ್ತದೆ 
ಮೀನಿನಲ್ಲಿ ಇರುವ ಒಮೆಗಾ 3 ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಒಳ್ಳೆಯ ಕೊಬ್ಬಿನಂಶವನ್ನು ಹೆಚ್ಚು ಮಾಡುತ್ತದೆ. ಮೀನಿನ ಎಣ್ಣೆ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ದೇಹದಲ್ಲಿ ರಕ್ತ ಸಂಚಲನಕ್ಕೆ ಸಹಾಯಮಾಡುವುದು. ಸಾಲಾಮೋನ್ ಮೀನು ಮತ್ತು ನಿಯಮಿತವಾದ ವ್ಯಾಯಾಮ ಮಾಡಿದರೆ ಬೇಗನೆ ತೂಕ ಕಡಿಮೆಯಾಗುವುದು. 

2. ಅಸ್ತಮಾ
ಮೀನು ಸೇವನೆಯಿಂದ ಅಸ್ತಮಾ ದೂರ ಮಾಡಬಹುದು. ಇದರಲ್ಲೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಸ್ತಮಾ ರೋಗಕ್ಕೆ ಇದು ಉತ್ತಮ ಪರಿಹಾರ. 

3. ಕ್ಯಾನ್ಸರ್
ಸ್ತನ, ಕೊಲೊನ್, ಅನ್ನನಾಳ, ಅಂಡಾಶಯ ಮತ್ತು ಪ್ರಾಸ್ಟೇಟ್ ಮೊದಲಾದ ಕ್ಯಾನ್ಸರ್ ಗಳನ್ನು ಮೀನು ಸೇವನೆಯಿಂದ ನಿಯಂತ್ರಿಸಬಹುದು. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಳು 30-50% ರಷ್ಟು ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. 

4. ಮಧುಮೇಹ
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಮೀನು ಎಣ್ಣೆ ಸಹಾಯ ಮಾಡುತ್ತದೆ. ಅಲ್ಲದೆ, ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

5. ಉರಿಯೂತದ ಪರಿಸ್ಥಿತಿಗಳು
ಕೊಬ್ಬಿನ ಆಮ್ಲ ಮೀನು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಇದು ಸಂಧಿವಾತ, ಸೋರಿಯಾಸಿಸ್ (ಚರ್ಮದ ಸ್ಥಿತಿ), ಮತ್ತು ಸ್ವಯಂ ಇಮ್ಯೂನ್ ರೋಗಗಳಂತಹ ವಿವಿಧ ಉರಿಯೂತದ ಪರಿಸ್ಥಿತಿಗಳಿಗೆ ಸಹಾಯ ಮಾಡಬಹುದು.

6. ಉತ್ತಮ ಚರ್ಮ ಮತ್ತು ಕೂದಲು
ಮೀನು ಸೇವನೆಯಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ. ಇದರಲ್ಲಿರುವ ಕಡಿಮೆ ಕೊಬ್ಬಿನ ಅಂಶಗಳು ಮತ್ತು ಉತ್ತಮ ಕೊಬ್ಬಿನಾಮ್ಲಗಳು ನಿಮ್ಮ ಕೂದಲು ಉದುರುವುದನ್ನು ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆದು ಹೊಳಪು ನೀಡುತ್ತದೆ. 

7. ಸ್ಮರಣಶಕ್ತಿ ವೃದ್ಧಿ
ಸಾಲ್ಮನ್ ಅಥವಾ ಟ್ಯೂನ ಮೀನುಗಳ ಸೇವನೆಯಿಂದ ಮಿದುಳಿನ ಬೆಳವಣಿಗೆಯಾಗಿ ಸ್ಮರಣಶಕ್ತಿ ವೃದ್ಧಿಗೆ ಸಹಕಾರಿ. ಇದು ಮಕ್ಕಳಿಗೆ ಬಹಳ ಉಪಯುಕ್ತ.

8. ದೃಷ್ಟಿ ವೃದ್ಧಿ
ಒಮೆಗಾ 3 ಆಮ್ಲಗಳು ರೆಟಿನಾದ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ನಿಮ್ಮ ದೃಷ್ಟಿಶಕ್ತಿ ವೃದ್ಧಿಗೆ ಮೀನಿನ ಸೇವನೆ ಸಹಕಾರಿ. ಅಲ್ಲದೆ, ಬಾಣಂತಿಯರು ಮೀನು ತಿನ್ನುವುದರಿಂದ ಎದೆಹಾಲು ಕುಡಿಯುವ ಶಿಶುಗಳು ಉತ್ತಮ ದೃಷ್ಟಿ ಹೊಂಡಲು ಉಪಕಾರಿ. 

9. ಖಿನ್ನತೆಯಿಂದ ಹೊರಬರಲು
ಮೀನು ಸೇವನೆಯು ಖಿನ್ನತೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪ್ರಸವದ ನಂತರದ ಖಿನ್ನತೆಯಿಂದ ಬಳಲುವ ಮಹಿಳೆಯರಿಗೆ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ.

10. ವೀರ್ಯ ವೃದ್ಧಿಗೆ
ಬಲವಾದ ವೀರ್ಯ ಉತ್ಪಾದನೆಯು ನಮ್ಮ ಆಹಾರಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ತಮ್ಮ ದೈನಂದಿನ ಆಹಾರ ಪದ್ಧತಿಗಳಲ್ಲಿ ಮೀನು ಸೇವಿಸುವ ಪುರುಷರು ಉತ್ತಮ ಗುಣಮಟ್ಟದ ವೀರ್ಯವನ್ನು ಹೊಂದಿರುತ್ತಾರೆ.

Trending News