ಸಿಕ್ಕಿಂ ಪ್ರವಾಹದಲ್ಲಿ 23 ಯೋಧರು ನಾಪತ್ತೆ ! ಮುಂದುವರೆದ ಶೋಧ ಕಾರ್ಯ

Flash Flood in Sikkim:ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಬಳಿ ಹಠಾತ್ ಮೋಡ ಸ್ಪೋಟದಿಂದ ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಕಣಿವೆಯಲ್ಲಿನ ಕೆಲವು ಸೇನಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ.   

Written by - Ranjitha R K | Last Updated : Oct 4, 2023, 10:33 AM IST
  • ಸಿಕ್ಕಿಂನಲ್ಲಿ ತಲೆದೋರಿದ ಹಠಾತ್ ಪ್ರವಾಹ
  • 23 ಸೇನಾ ಯೋಧರು ನಾಪತ್ತೆ
  • ಮೋಡ ಸ್ಪೋಟದಿಂದ ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಪ್ರವಾಹ
ಸಿಕ್ಕಿಂ ಪ್ರವಾಹದಲ್ಲಿ 23 ಯೋಧರು ನಾಪತ್ತೆ ! ಮುಂದುವರೆದ ಶೋಧ ಕಾರ್ಯ title=

Flash Flood in Sikkim : ಸಿಕ್ಕಿಂನಲ್ಲಿ ತಲೆದೋರಿದ ಹಠಾತ್ ಪ್ರವಾಹದ ನಂತರ 23 ಸೇನಾ ಯೋಧರು ನಾಪತ್ತೆಯಾಗಿದ್ದಾರೆ. ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಬಳಿ ಹಠಾತ್ ಮೋಡ ಸ್ಪೋಟದಿಂದ ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಕಣಿವೆಯಲ್ಲಿನ ಕೆಲವು ಸೇನಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ. ಚುಂಗ್‌ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡುವುದರಿಂದ,  ನೀರಿನ ಮಟ್ಟವು ಇದ್ದಕ್ಕಿದ್ದಂತೆ 15-20 ಅಡಿ ಎತ್ತರಕ್ಕೆ ಏರಿದ್ದು, ಸಿಕ್ಕಿಂನ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸಿಂಗ್ಟಾಮ್ ಬಳಿಯ ಬರ್ದಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಪ್ರವಾಹಕ್ಕೆ ಸಿಲುಕಿದ್ದು, 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದಲ್ಲದೇ ಕೆಲ ವಾಹನಗಳು ಕೆಸರಿನಲ್ಲಿ  ಹೂತು ಹೋಗಿರುವ ಬಗ್ಗೆಯೂ ವರದಿಯಾಗಿದೆ. 

ಚುಂಗ್‌ಥಾಂಗ್ ಅಣೆಕಟ್ಟಿನಿಂದ ನೀರು ಬಿಟ್ಟಿರುವುದರಿಂದ ಬಿಗಡಾಯಿಸಿದ ಸ್ಥಿತಿ : 
ಚುಂಗ್‌ಥಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ್ದರಿಂದ ಕೆಳಭಾಗದ ನೀರಿನ ಮಟ್ಟವು ಇದ್ದಕ್ಕಿದ್ದಂತೆ 15-20 ಅಡಿ ಎತ್ತರಕ್ಕೆ ಏರಿತು. ಇದರಿಂದಾಗಿ ಸಿಂಗ್ಟಾಮ್ ಬಳಿಯ ಬರ್ದಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳಿಗೆ ತೊಂದರೆಯಾಗಿದೆ ಎಂದು ರಕ್ಷಣಾ ಪಿಆರ್‌ಒ ಮಾಹಿತಿ ನೀಡಿದ್ದಾರೆ. . ಕಣಿವೆಯಲ್ಲಿನ ಕೆಲವು ಸೇನಾ ತುಕಡಿಗಳ ಮೇಲೂ ಪರಿಣಾಮ ಬೀರಿವೆ ಎನ್ನಲಾಗಿದೆ. 

ಇದನ್ನೂ ಓದಿ : ಪುತ್ರನ ಮದುವೆ ಡೇಟ್ ಬಹಿರಂಗಪಡಿಸಿದ ಮುಖೇಶ್ ಅಂಬಾನಿ! ಈ ದಿನ ಹಸೆಮಣೆ ಏರಲಿದ್ದಾರೆ ಅನಂತ್-ರಾಧಿಕಾ

ಎಚ್ಚರಿಕೆ ನೀಡಿದ ವಿಪತ್ತು ನಿರ್ವಹಣಾ ಪ್ರಾಧಿಕಾರ : 
ಮಂಗನ್ ಜಿಲ್ಲೆಯ ಉತ್ತರ ಭಾಗದಲ್ಲಿ ಮೋಡ  ಸ್ಪೋಟಗೊಂಡ ಕಾರಣ ತೀಸ್ತಾ ನದಿಯಲ್ಲಿ ಪ್ರವಾಹ ಉಂಟಾಗಿದೆ ಎಂದು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಎಸ್‌ಡಿಎಂಎ) ಹೇಳಿದೆ. ಅಲ್ಲದೆ ಪ್ರತಿಯೊಬ್ಬರೂ ಜಾಗರೂಕರಾಗಿರುವಂತೆ ಮತ್ತು ಜಲಾನಯನ ನದಿಯ ಉದ್ದಕ್ಕೂ ಪ್ರಯಾಣಿಸದಂತೆ ಸೂಚಿಸಲಾಗಿದೆ. ಭಾರೀ ಮಳೆಯಿಂದಾಗಿ ಆದರ್ಶಗಾಂವ್, ಸಮರ್ದುಂಗ್, ಮೆಲ್ಲಿ ಸೇರಿದಂತೆ ಇತರ ಸೂಕ್ಷ್ಮ ಸ್ಥಳಗಳ ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಸಾರ್ವಜನಿಕರು ವದಂತಿಗಳನ್ನು ಹಬ್ಬಿಸಬಾರದು ಮತ್ತು ವದಂತಿಗಳಿಗೆ ಕಿವಿಗೊಡಲೂ ಬಾರದು ಎಂದು  ಸರ್ಕಾರ ಮನವಿ ಮಾಡಿದೆ. ರಾಜ್ಯದಲ್ಲಿ ಸಂಭವಿಸಿದ ಹಠಾತ್ ಅನಾಹುತದಿಂದಾಗಿ, ಸೊರೆಂಗ್‌ನಲ್ಲಿ ನಡೆಯುತ್ತಿರುವ ನರ್ ಬಹದ್ದೂರ್ ಭಂಡಾರಿ ಜಯಂತಿಯ ಆಚರಣೆಯನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ : ಜನನದ ನಂತರ ಹುಟ್ಟುವ, ಸಾವಿನ ಮೊದಲು ನಶಿಸುವ ಮಾನವನ ದೇಹದ ಅಂಗ ಯಾವುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News