ಪ.ಬಂಗಾಳದಲ್ಲಿ ಹಿಂಸಾಚಾರ; ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ

ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ಮತದಾನಕ್ಕೂ ಮುನ್ನ ಪ್ರತ್ಯೇಕ ಘಟನೆಗಳಲ್ಲಿ ಮೂರು ಬಿಜೆಪಿ ಕಾರ್ಯಕರ್ತರು ದಾಳಿ ನಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

Last Updated : May 12, 2019, 02:49 PM IST
ಪ.ಬಂಗಾಳದಲ್ಲಿ ಹಿಂಸಾಚಾರ; ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ  title=

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ಮತದಾನಕ್ಕೂ ಮುನ್ನ ಪ್ರತ್ಯೇಕ ಘಟನೆಗಳಲ್ಲಿ ಮೂರು ಬಿಜೆಪಿ ಕಾರ್ಯಕರ್ತರು ದಾಳಿ ನಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಪೂರ್ವ ಮಿಡ್ನಾಪುರದಲ್ಲಿ ಬಿಜೆಪಿಯ ಕಾರ್ಯಕರ್ತರಾದ ಅನಂತ ಗುಚೈತ್ ಮತ್ತು ರಂಜಿತ್ ಮೈಟಿ ಅವರ ಮೇಲೆ  ಭಗಬಾನ್ಪುರ ಪ್ರದೇಶದಲ್ಲಿ ದಾಳಿ ಮಾಡಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.ಏತನ್ಮಧ್ಯೆ, ಬಿಜೆಪಿಯ ಕಾರ್ಯಕರ್ತ ರಾಮನ್ ಸಿಂಗ್ ಗೋಪಿಬಾಲ್ಲಾಬ್ಪುರ್ ಪ್ರದೇಶ ಜಾರ್ಗ್ರಾಮ್  ದಲ್ಲಿ ಹತ್ಯೆಯಾಗಿದ್ದರು.

ಪಶ್ಚಿಮ ಬಂಗಾಳದಲ್ಲಿ ಎಲ್ಲ ಹಂತಗಳು ಮತದಾನದ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಒಳಗಾಗಿವೆ.ಇದಕ್ಕೆ ಮುಖ್ಯ ಕಾರಣ ಬಿಜೆಪಿ ಹಾಗೂ ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯೇ ಕಾರಣ ಎನ್ನಲಾಗಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಬಂಗಾಳ ರಾಜಕೀಯದಲ್ಲಿ ಪ್ರಭಾವ ಬಿರುತ್ತಿದೆ. ಇನ್ನೊಂದೆಡೆ ತೃಣಮೂಲಪಕ್ಷವು ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಮತದಾನವು  ದೆಹಲಿಯಲ್ಲಿ 7, ಬಿಹಾರ್ನಲ್ಲಿ 8, ಹರಿಯಾಣದಲ್ಲಿ 10, ಮಧ್ಯಪ್ರದೇಶದಲ್ಲಿ 8, ಉತ್ತರಪ್ರದೇಶದಲ್ಲಿ 14, ಪಶ್ಚಿಮ ಬಂಗಾಳದಲ್ಲಿ 8 ಮತ್ತು ಜಾರ್ಖಂಡ್ನಲ್ಲಿ 4 ಸೇರಿದಂತೆ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಏಳು ಹಂತದ ಚುನಾವಣೆಗಳ ಫಲಿತಾಂಶಗಳು ಮೇ 23 ರಂದು ಘೋಷಿಸಲ್ಪಡುತ್ತವೆ.

Trending News