ಅಹಮದಾಬಾದ್ ಪಾರ್ಕ್‌ನಲ್ಲಿ ಜೋಯ್ ರೈಡ್ ಕುಸಿದು ಮೂರು ಸಾವು, ಹಲವರಿಗೆ ಗಾಯ

ಗುಜರಾತ್‌ನ ಅಹಮದಾಬಾದ್ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಭಾನುವಾರ ಜೋಯ್ ರೈಡ್ ಕುಸಿದು ಬಿದ್ದು ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ 

Last Updated : Jul 14, 2019, 10:16 PM IST
 ಅಹಮದಾಬಾದ್ ಪಾರ್ಕ್‌ನಲ್ಲಿ ಜೋಯ್ ರೈಡ್ ಕುಸಿದು ಮೂರು ಸಾವು, ಹಲವರಿಗೆ ಗಾಯ  title=
photo:ANI

ನವದೆಹಲಿ: ಗುಜರಾತ್‌ನ ಅಹಮದಾಬಾದ್ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಭಾನುವಾರ ಜೋಯ್ ರೈಡ್  ಕುಸಿದು ಬಿದ್ದು ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಭಾನುವಾರದಂದು ಮಧ್ಯಾಹ್ನ ನಡೆದಿದೆ ಎನ್ನಲಾಗಿದೆ.

ಕಂಕರಿಯಾ ಅಡ್ವೆಂಚರ್ ಪಾರ್ಕ್‌ನಲ್ಲಿನ 'ಡಿಸ್ಕವರಿ' ಜಾಯ್‌ ರೈಡ್‌ ಕುಸಿದು ಬಿದ್ದಾಗ ಅದರಲ್ಲಿ ಸುಮಾರು 40 ಜನರು ಇದ್ದರು ಎನ್ನಲಾಗಿದೆ.ಮೂಲಗಳ ಪ್ರಕಾರ ಈ ದುರ್ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, 31 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಅಹಮದಾಬಾದ್ ಮಹಾನಗರ ಪಾಲಿಕೆ ಎಲ್ಜಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ 15 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಗರ ಮುನ್ಸಿಪಲ್ ಕಮಿಷನರ್ ವಿಜಯ್ ನೆಹ್ರಾ ಮತ್ತು ವಲಯ 6 ರ ಅಹಮದಾಬಾದ್ ಉಪ ಪೊಲೀಸ್ ಆಯುಕ್ತ ಬಿಪಿನ್ ಅಹೈರ್ ಘಟನೆಯ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದರು.ಎಫ್‌ಎಸ್‌ಎಲ್ ತಂಡದೊಂದಿಗೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ವಿಜಯ್ ನೆಹ್ರಾ ತಿಳಿಸಿದ್ದಾರೆ.

Trending News