Ahmedabad Serial Blast Case: ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 38 ಅಪರಾಧಿಗಳಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ

Ahmedabad serial bomb blast case: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 49 ಅಪರಾಧಿಗಳ ಪೈಕಿ 38 ಮಂದಿಗೆ ವಿಶೇಷ ನ್ಯಾಯಾಲಯವು ಇಂದು ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ. ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

Written by - Chetana Devarmani | Last Updated : Feb 18, 2022, 12:47 PM IST
  • 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ
  • 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ
  • 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ
Ahmedabad Serial Blast Case: ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 38 ಅಪರಾಧಿಗಳಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ title=
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ

ನವದೆಹಲಿ: ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ (Ahemedabad bomb blast case) 49 ಅಪರಾಧಿಗಳ ಪೈಕಿ 38 ಮಂದಿಗೆ ವಿಶೇಷ ನ್ಯಾಯಾಲಯವು ಇಂದು ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ. ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಇದನ್ನೂ ಓದಿ: ರಾಜ್ಯದ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಜಾರಿಗೊಳಿಸಿದ ಬೊಮ್ಮಾಯಿ ಸರ್ಕಾರ

ಅಹಮದಾಬಾದ್‌ನಲ್ಲಿ 2008ರ ಸರಣಿ ಬಾಂಬ್ ಸ್ಫೋಟದ (Ahmedabad bomb blast) ತ್ವರಿತ ವಿಚಾರಣೆಗಾಗಿ ರಚಿಸಲಾದ ವಿಶೇಷ ನ್ಯಾಯಾಲಯವು ಶುಕ್ರವಾರ (ಫೆಬ್ರವರಿ 18, 2022) ಯುಎಪಿಎ ಮತ್ತು ಐಪಿಸಿ 302 ರ ನಿಬಂಧನೆಗಳ ಅಡಿಯಲ್ಲಿ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ (sentenced to death) ಶಿಕ್ಷೆ ವಿಧಿಸಿದೆ. ಇತರರಿಗೆ ಮರಣದ ತನಕ ಜೀವಾವಧಿ ಶಿಕ್ಷೆ (life imprisonment) ವಿಧಿಸಿ ಆದೇಶಿಸಿದೆ.

 

 

ಇದಕ್ಕೂ ಮೊದಲು ಫೆಬ್ರವರಿ 8 ರಂದು, 56 ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು 200 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ ಸರಣಿ ಸ್ಫೋಟ (bomb blast) ಪ್ರಕರಣದಲ್ಲಿ 49 ಜನರನ್ನು ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತು.

ಇದನ್ನೂ ಓದಿ: ಸಿಎಂ ಚನ್ನಿ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಪ್ರಧಾನಿ ಮೋದಿ!

ಜುಲೈ 26, 2008 ರಂದು ಅಹಮದಾಬಾದ್‌ನಲ್ಲಿ (Ahmedabad) ಹಲವಾರು ಸ್ಥಳಗಳಲ್ಲಿ 22 ಬಾಂಬ್‌ಗಳು ಸ್ಫೋಟಗೊಂಡವು. ಸುಮಾರು 13 ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ, ಫೆಬ್ರವರಿ 8 ರಂದು  ವಿಶೇಷ ನ್ಯಾಯಾಲಯವು  49 ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ, ಇತರ 28 ಜನರನ್ನು ಖುಲಾಸೆಗೊಳಿಸಿತು. ಈ ಪ್ರಕರಣವನ್ನು ಇತ್ತೀಚಿನ ವರ್ಷಗಳಲ್ಲಿ ಸುದೀರ್ಘ ಕ್ರಿಮಿನಲ್ ವಿಚಾರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News