ನವದೆಹಲಿ: ಖ್ಯಾತ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆಂದು ಕಳೆದ ಹಲವಾರು ದಿನಗಳಿಂದ ವ್ಯಾಪಕ ಚರ್ಚೆಯಾಗಿತ್ತು. ಆದರೆ, ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಪಕ್ಷಕ್ಕೆ ಅವರು ‘ಕೈ’ ಕೊಟ್ಟಿದ್ದಾರೆ. ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ನಡುವಿನ ಮಾತುಕತೆ ಮಂಗಳವಾರ ಅಂತ್ಯವಾಗಿದ್ದು, ನಾನು ಕಾಂಗ್ರೆಸ್ಗೆ ಬರುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ‘ಕೈ’ ನಾಯಕರು ಸಮ್ಮತಿಸಿದ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ನಿರ್ಧಾರ ತಿಳಿಸಿದ್ದಾರೆ. ಕಾಂಗ್ರೆಸ್ ಆಫರ್ ತಿರಸ್ಕರಿಸುವ ಮೂಳಕ ಪ್ರಶಾಂತ್ ಕಿಶೋರ್ ಅಚ್ಚರಿ ಮೂಡಿಸಿದ್ದಾರೆ. ಹಳೆಯ ಪಕ್ಷದ ಪುನರುತ್ಥಾನಕ್ಕಾಗಿ ತಿಂಗಳುಗಟ್ಟಲೇ ನಡೆಸಿದ ಮಾತುಕತೆ ಅಂತ್ಯವಾಗಿದೆ. ಕಾಂಗ್ರೆಸ್ಗೆ ನನಗಿಂತ ಉತ್ತಮ ನಾಯಕತ್ವ ಹಾಗೂ ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
I declined the generous offer of #congress to join the party as part of the EAG & take responsibility for the elections.
In my humble opinion, more than me the party needs leadership and collective will to fix the deep rooted structural problems through transformational reforms.
— Prashant Kishor (@PrashantKishor) April 26, 2022
ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬ್ಯಾನ್... ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ
ಮಾತುಕತೆ ಮುರಿದುಬೀಳಲು 5 ಪ್ರಮುಖ ಕಾರಣಗಳು
- ಕೆಲಸ ಮಾಡಲು ಕಾಂಗ್ರೆಸ್ ಮುಕ್ತ ಅವಕಾಶ ನೀಡದಿರುವುದೇ ಪ್ರಶಾಂತ್ ಕಿಶೋರ್ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. 2024ರ ಸಾರ್ವತ್ರಿಕ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಹಾಗೂ ಸದ್ಯ ಅವನತಿಯ ಹಾದಿ ಹಿಡಿದಿರುವ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸಲು ಪ್ರಶಾಂತ್ ಕಿಶೋರ್ ಮುಕ್ತ ಅವಕಾಶ ಬಯಸಿದ್ದರು. ಆದರೆ, ಕಾಂಗ್ರೆಸ್ ನಾಯಕರು ಅವರಿಗೆ ಹಲವು ಷರತ್ತುಗಳನ್ನು ವಿಧಿಸಿದ್ದರಂತೆ. ಇದೇ ಅವರು ಕಾಂಗ್ರೆಸ್ ಆಹ್ವಾನ ತಿರಸ್ಕರಿಸಲು ಕಾರಣವೆಂದು ಹೇಳಲಾಗುತ್ತಿದೆ.
- ಕಾಂಗ್ರೆಸ್ ಪುನರುತ್ಥಾನಕ್ಕಾಗಿ ಪ್ರಶಾಂತ್ ಕಿಶೋರ್ ಪ್ರಸ್ತಾಪಿಸಿದ್ದ ಕಾರ್ಯತಂತ್ರದ ಬಗ್ಗೆ ಚರ್ಚೆಯಾಗಿತ್ತು. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರಿ ಮತ್ತು ಪಕ್ಷದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಶೋರ್ ಅವರಿಗೆ ಬಂಬಲ ನೀಡಿದ್ದರು. ಆದರೆ, ಇದಕ್ಕೆ ರಾಹುಲ್ ಗಾಂಧಿ ಹಿಂಜರಿದರು ಎಂದು ಮೂಲಗಳು ತಿಳಿಸಿವೆ.
- 2014ರ ಸಾರ್ವತ್ರಿಕ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ತಂತ್ರ ರೂಪಿಸಿದ ಪ್ರಶಾಂತ್ ಕಿಶೋರ್ ಬಗ್ಗೆ ಕಾಂಗ್ರೆಸ್ ವಿಶ್ವಾಸದ ಸಮಸ್ಯೆ ಹೊಂದಿತ್ತು. ಕಾಂಗ್ರೆಸ್ಗೆ ಹೊಸ ಮುಖ ಬೇಕೆಂಬ ಪ್ರಶಾಂತ್ ಕಿಶೋರ್ ಬೇಡಿಕೆಯನ್ನು ‘ಕೈ’ ನಾಯಕರು ನಿರಾಕರಿಸಿದ್ದಾರಂತೆ. ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪ್ರಶಾಂತ್ ಪ್ರಸ್ತಾಪಿಸಿದ್ದ ಕಾರ್ಯತಂತ್ರದ ಬಗ್ಗೆ ಕೆಲ ಕಾಂಗ್ರೆಸ್ ನಾಯಕರ ಸಮ್ಮಿತಿ ಇರಲಿಲ್ಲವೆಂದು ಮೂಲಗಳು ತಿಳಿಸಿವೆ.
- ಕಾಂಗ್ರೆಸ್ನ ಒಂದು ವಿಭಾಗವು ತೆಲಂಗಾಣದ ಆಡಳಿತ ಪಕ್ಷದೊಂದಿಗೆ ಕಿಶೋರ್ ಮಾಡಿಕೊಂಡಿದ್ದ IPAC ಒಪ್ಪಂದ ಉಲ್ಲೇಖಿಸಿ, ಅವರ ‘ಸೈದ್ಧಾಂತಿಕ’ ಬದ್ಧತೆಯ ಕೊರತೆ ಬಗ್ಗೆ ಮಾತನಾಡಿದ್ದಾರೆ. ಕಿಶೋರ್ ಈಗ IPACನೊಂದಿಗೆ ಯಾವುದೇ ಔಪಚಾರಿಕ ಸಂಪರ್ಕವನ್ನು ಹೊಂದಿಲ್ಲ.
- ಎಲ್ಲಕ್ಕಿಂತ ಮುಖ್ಯವಾಗಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದಲ್ಲಿ ಹೊಸ ನಾಯಕತ್ವ ಬಯಸಿದ್ದರು. ಪಕ್ಷವನ್ನು ಬಲಿಷ್ಠವಾಗಿ ಕಟ್ಟಿಬೆಳೆಸಲು ಹೊಸ ನಾಯಕನ ಅಗತ್ಯವಿದೆ ಎಂದು ತಮ್ಮ ಕಾರ್ಯತಂತ್ರದಲ್ಲಿ ಕಿಶೋರ್ ತಿಳಿಸಿದ್ದರು. ಇದು ಕಾಂಗ್ರೆಸ್ನ ಹಿರಿಯ ನಾಯಕರಿಗೆ ಇರಿಸುಮುರಿಸು ಉಂಟುಮಾಡಿದೆ. ಒಂದು ವೇಳೆ ಹೊಸ ನಾಯಕತ್ವ ಬಂದರೆ ತಾವೆಲ್ಲಿ ಸೈಡ್ಲೈನ್ ಆಗುತ್ತೇವೆ ಅಂತಾ ಹೆದರಿದ ‘ಕೈ’ ನಾಯಕರು ಕಿಶೋರ್ಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಆದರೆ, ಮುಕ್ತ ಅವಕಾಶ ಬಯಸಿದ್ದ ಕಿಶೋರ್ ಈ ಷರತ್ತುಗಳಿಗೆ ಓಕೆ ಎನ್ನದೆ ಕಾಂಗ್ರೆಸ್ ಆಫರ್ಗೆ ನೋ ಎಂದಿದ್ದಾರೆ.
ಇದನ್ನೂ ಓದಿ: Basanagouda Patil Yatnal : ಸಿಎಂ ಮುಂದೆ ದರಿದ್ರ ಭಾಗ್ಯಗಳು ಬೇಡ ಎಂದ ಶಾಸಕ ಯತ್ನಾಳ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.