7th Pay Commission: ಈ ಸರ್ಕಾರಿ ನೌಕರರಿಗೆ ಸಿಗಲಿದೆ 2 ಲಕ್ಷ ರೂ.ಗೂ ಅಧಿಕ ವೇತನ

ಒಂದು ವೇಳೆ ನೀವೂ ಕೂಡ ಸರ್ಕಾರಿ ನೌಕರಿಗಾಗಿ ಸಿದ್ಧತೆ ನಡೆಸುತ್ತಿದ್ದರೆ ಇಲ್ಲಿದೆ ನಿಮಗೊಂದು ಉತ್ತಮ ಅವಕಾಶ. ಗೋವಾದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅನೇಕ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನೂ ಅಹ್ವಾನಿಸಲಾಗಿದೆ. ಪದವಿ ಪಡೆದ ಅಥವಾ ಸ್ನಾತಕ ಪದವಿ ಪಡೆದ ಅಭ್ಯರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

Last Updated : May 25, 2020, 08:04 PM IST
7th Pay Commission: ಈ ಸರ್ಕಾರಿ ನೌಕರರಿಗೆ ಸಿಗಲಿದೆ 2 ಲಕ್ಷ ರೂ.ಗೂ ಅಧಿಕ ವೇತನ title=

ನವದೆಹಲಿ:ಒಂದು ವೇಳೆ ನೀವೂ ಕೂಡ ಸರ್ಕಾರಿ ನೌಕರಿಗಾಗಿ ಸಿದ್ಧತೆ ನಡೆಸುತ್ತಿದ್ದರೆ ಇಲ್ಲಿದೆ ನಿಮಗೊಂದು ಉತ್ತಮ ಅವಕಾಶ. ಗೋವಾದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅನೇಕ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನೂ ಅಹ್ವಾನಿಸಲಾಗಿದೆ. ಪದವಿ ಪಡೆದ ಅಥವಾ ಸ್ನಾತಕ ಪದವಿ ಪಡೆದ ಅಭ್ಯರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಎಲ್ಲ ಹುದ್ದೆಗಳು ಏಳನೆಯ ವೇತನ ಆಯೋಗದ ಅಡಿ ಬರಲಿವೆ. ಹೌದು, IIT ಗೋವಾ, ಅಡ್ಮಿನಿಸ್ಟ್ರೇತೀವ್ ಹಾಗೂ ಟೆಕ್ನಾಲಜಿ ಹುದ್ದೆಗಳಿಗಾಗಿ ಆನ್ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳ ಡೀಟೇಲ್ಸ್ ಈ ಕೆಳಗಿನಂತಿವೆ

ಅಧಿಕೃತ ವೆಬ್ ಸೈಟ್
ಅಭ್ಯರ್ಥಿಗಳು ಐಐಟಿ ಗೋವಾ ಅಧಿಕೃತ ವೆಬ್ಸೈಟ್ ಆಗಿರುವ  www.iitgoa.ac.in ಮೂಲಕ ಈ ಖಾಲಿ ಇರುವ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 30 ಜೂನ್ 2020 ಎಂದು ನಿಗದಿಪಡಿಸಲಾಗಿದೆ.

ವಯೋಮಿತಿ
ಈ ಖಾಲಿ ಹುದ್ದೆಗಳಲ್ಲಿ ರಿಜಿಸ್ಟ್ರಾರ್‌ನ ಹುದ್ದೆಗೆ ಅರ್ಜಿಸಲ್ಲಿಸುವವರ ಗರಿಷ್ಠ ವಯಸ್ಸಿನ ಮಿತಿ 55 ವರ್ಷ ನಿಗದಿಪಡಿಸಲಾಗಿದೆ. ಇದಲ್ಲದೆ, ಜೂನಿಯರ್ ಅಧೀಕ್ಷಕ ಹುದ್ದೆಗೆ 32 ವರ್ಷಗಳು, ಕಿರಿಯ ಸಹಾಯಕ ಹುದ್ದೆಗೆ  37 ವರ್ಷಗಳು, ಅಧೀಕ್ಷಕ ಎಂಜಿನಿಯರ್ ಹುದ್ದೆಗೆ 50 ವರ್ಷಗಳು ಮತ್ತು ತಾಂತ್ರಿಕ ಅಧೀಕ್ಷಕರ ಹುದ್ದೆಗೆ  32 ವರ್ಷಗಳ ಗರಿಷ್ಟ ವಯೋಮಿತಿ ನಿಗದಿಪಡಿಸಲಾಗಿದೆ .

ಖಾಲಿ ಇರುವ ಹುದ್ದೆಗಳ ಸಂಖ್ಯೆ
ರಿಜಿಸ್ಟ್ರಾರ್ - 1
ಕಿರಿಯ ಅಧೀಕ್ಷಕ - 2
ಕಿರಿಯ ಸಹಾಯಕ - 6
ಅಧೀಕ್ಷಕ ಎಂಜಿನಿಯರ್ - 1
ತಾಂತ್ರಿಕ ಅಧೀಕ್ಷಕರು - 1

ವೇತನ ಶ್ರೇಣಿ (ರೂ.ಗಳಲ್ಲಿ)
ರಿಜಿಸ್ಟ್ರಾರ್ - 14 ನೇ ಹಂತ (144200-218200)
ಕಿರಿಯ ಅಧೀಕ್ಷಕ - 6 ನೇ ಹಂತ (35400 - 112400)
ಕಿರಿಯ ಸಹಾಯಕ - 3 ನೇ ಹಂತ (21700 - 69100)
ಅಧೀಕ್ಷಕ ಎಂಜಿನಿಯರ್ - 12 ನೇ ಹಂತ (78800-209200)
ತಾಂತ್ರಿಕ ಅಧೀಕ್ಷಕರು - 6 ನೇ ಹಂತ (35400 - 112400)

ಶೈಕ್ಷಣಿಕ ಅರ್ಹತೆ
ರಿಜಿಸ್ಟ್ರಾರ್ - ಸ್ನಾತಕೋತ್ತರ
ಕಿರಿಯ ಅಧೀಕ್ಷಕ - ಪದವೀಧರ
ಕಿರಿಯ ಸಹಾಯಕ - ಪದವೀಧರ
ಅಧೀಕ್ಷಕ ಎಂಜಿನಿಯರ್ - ಸಿವಿಲ್‌ನಲ್ಲಿ ಎಂಜಿನಿಯರಿಂಗ್
ತಾಂತ್ರಿಕ ಅಧೀಕ್ಷಕರು - ಎಂ.ಎಸ್ಸಿ

ಅರ್ಜಿ ಶುಲ್ಕ
ಅರ್ಜಿ ಶುಲ್ಕದ ಕುರಿತು ಹೇಳುವುದಾದರೆ, ಗ್ರೂಪ್ ಎ ಹುದ್ದೆಗಳಿಗೆ  500 ರೂ.ಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಗ್ರೂಪ್ ಬಿ ಹುದ್ದೆಗಳಿಗೆ 200 ರೂ.ಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಇದೇವೇಳೆ ಗ್ರೂಪ್ ಸಿ ಹುದ್ದೆಗಳಿಗೆ  ಅರ್ಜಿ ಸಲ್ಲಿಸುವವರು  100 ರೂ.ಗಳ ಶುಲ್ಕವನ್ನು ಪಾವತಿಸಬೇಕು.

Trending News