ದೆಹಲಿಯಲ್ಲಿ ಮೈತ್ರಿಗೆ ಮುಂದಾದ ಕಾಂಗ್ರೆಸ್-ಆಮ್ ಆದ್ಮಿ ಪಾರ್ಟಿ

   

Last Updated : Jun 2, 2018, 01:46 PM IST
ದೆಹಲಿಯಲ್ಲಿ ಮೈತ್ರಿಗೆ ಮುಂದಾದ ಕಾಂಗ್ರೆಸ್-ಆಮ್ ಆದ್ಮಿ ಪಾರ್ಟಿ  title=

ನವದೆಹಲಿ: ಮುಂಬರುವ 2019ರ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಈಗಲೇ ನಡೆದಿದ್ದು,ಅದಕ್ಕೆ  ಪೂರಕ ಎನ್ನುವಂತೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಮೈತ್ರಿ ಮಾತುಕತೆಗೆ ಮುಂದಾಗಿವೆ ಎಂದು ತಿಳಿದು ಬಂದಿದೆ.

2019 ಕ್ಕೆ ಮೋದಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ಪ್ರತಿ ಪಕ್ಷಗಳು ಮುಂದಾಗಿವೆ ಈ ಹಿನ್ನಲೆಯಲ್ಲಿ ಈಗಾಗಲೇ 2015 ರಲ್ಲಿನ ಬಿಹಾರದ ಮಹಾಮೈತ್ರಿ,ಕರ್ನಾಟಕದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಗಳ ಹಿನ್ನೆಲೆಯಲ್ಲಿ ಈಗ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಮೈತ್ರಿ ಮಾತುಕತೆ ನಡೆಸಿದೆ ಎನ್ನಲಾಗಿದೆ.

ಸುದ್ದಿ ಮೂಲಗಳ ಪ್ರಕಾರ  ಮೇ 24 ರಂದು  ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್ ಮತ್ತು ಅಜೇಯ್ ಮೆಕನ್ ಅವರು ಆಮ್ ಆದ್ಮಿ ಪಕ್ಷದ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಚರ್ಚೆಯ ವೇಳೆ 5:2 ರ ಹಂಚಿಕೆಯ ಮಾತುಕತೆಯಾಗಿದೆ ಎನ್ನಲಾಗಿದೆ 5 ಸೀಟುಗಳು ಆಮ್ ಆದ್ಮಿ ಪಕ್ಷಕ್ಕೆ, ಇನ್ನುಳಿದ ಎರಡು ಸೀಟುಗಳು ಕಾಂಗ್ರೆಸ್ಗೆ ಎಂದು ಹೇಳಲಾಗುತ್ತಿದೆ. ಈ ಮೈತ್ರಿಯ ಊಹಾಪೋಹವು ಇತ್ತೀಚಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು  ಮುಖ್ಯಮಂತ್ರಿ ಕೇಜ್ರಿವಾಲ್ ಹೊಗಳಿದ ನಂತರ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. 

Trending News