ದೆಹಲಿ ಮೆಟ್ರೋ ಉದ್ಘಾಟನೆ : ಕೇಜ್ರಿ ಕಡೆಗಣನೆ, ಹಣ ವಾಪಸ್‌ ಮಾಡುವಂತೆ ಆಪ್ ಆಗ್ರಹ

ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಅವರನ್ನು ಆಹ್ವಾನಿಸದ ಕಾರಣ ಆ ಹಣವನ್ನು ಕೇಂದ್ರ ಸರ್ಕಾರ ಆಪ್ ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಆಪ್‌ ಆಗ್ರಹಿಸಿದೆ. 

Last Updated : Dec 25, 2017, 06:01 PM IST
ದೆಹಲಿ ಮೆಟ್ರೋ ಉದ್ಘಾಟನೆ : ಕೇಜ್ರಿ ಕಡೆಗಣನೆ, ಹಣ ವಾಪಸ್‌ ಮಾಡುವಂತೆ ಆಪ್ ಆಗ್ರಹ title=

ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ ದೆಹಲಿ ಮೆಟ್ರೋ ಮೆಜಂತಾ ಲೈನ್ ಉದ್ಘಾಟನಾ ಸಮಾರಂಭಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಆಹ್ವಾನ ನೀಡದೆ ಕಡೆಗನಿಸಿರುವುದಕ್ಕೆ ಸಂಬಂಧಿಸಿದಂತೆ ಇಂದು ಆಮ್ ಆದ್ಮಿ ಪ್ಸ್ಶದ ಹಿರಿಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದೆಹಲಿ ಮೆಟ್ರೋದ ಈ ಹೊಸ ಮೆಜಂಟಾ ಲೈನ್‌ ನಿರ್ಮಾಣ ಕಾಮಗಾರಿಯ ಒಟ್ಟು ವೆಚ್ಚದ ಶೇಕಡಾ 50ರಷ್ಟನ್ನು ಆಪ್ ಸರ್ಕಾರ ಭರಿಸಿತ್ತು. ಆದರೆ ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಅವರನ್ನು ಆಹ್ವಾನಿಸದ ಕಾರಣ ಆ ಹಣವನ್ನು ಕೇಂದ್ರ ಸರ್ಕಾರ ಆಪ್ ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಆಪ್‌ ಆಗ್ರಹಿಸಿದೆ. 

ಕೇಜ್ರಿವಾಲ್‌ ಅವರನ್ನು ಈ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸದಿರುವ ಬಗ್ಗೆ ಹಿರಿಯ ಆಪ್‌ ನಾಯಕ ಸಂಜಯ್‌ ಸಿಂಗ್‌ "ಈ ಕ್ರಮವು ದಿಲ್ಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರಕಾರ ವೈಯಕ್ತಿಕ ವೈರತ್ಯ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ದಿಲ್ಲಿ ಮೆಟ್ರೋ ರೈಲ್‌ ಕಾರ್ಪೊರೇಶನ್‌ನ ಫ‌ರೀದಾಬಾದ್‌ ಕಾರಿಡಾರ್‌ ಉದ್ಘಾಟನೆಯ ಸಂದರ್ಭದಲ್ಲೂ ಕೇಜ್ರಿವಾಲ್‌ ಅವರನ್ನು ಕಡೆಗಣಿಸಲಾಗಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಭಾರತಿಯ ಜನತಾ ಪಕ್ಷದ ನಾಯಕರು ಕೇಜ್ರಿವಾಲ್ ಅವರನ್ನು ವಿರೋಧಿಸುತ್ತಿದ್ದಾರೆ ಎಂಬುದು ಪ್ರಧಾನಿ ಅವರ ಈ ನಡೆಯಿಂದ ತಿಳಿದು ಬಂದಿದ್ದು, ಹಾಗಾಗಿ ಅವರು ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಅವರನ್ನು ಆಹ್ವಾನಿಸಿಲ್ಲ ಎಂದು ಸಿಂಗ್ ಆರೋಪಿಸಿದ್ದಾರೆ. 

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಶಿಶೋದ್ಯ ಅವರು ಕೂಡ ಮೋದಿ ಸರ್ಕಾರದ ಈ ನಡೆಯನ್ನು ಟ್ವೀಟ್ ಮಾಡುವ ಮೂಲಕ ವಿರೋಧಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಜನತೆಯ ಮುಂದೆ ಮೆಟ್ರೋ ರೈಲು ಸಂಚಾರ ದರವನ್ನು ಕಡಿಮೆಗೊಳಿಸುವಂತೆ ಎಲ್ಲಿ ಪ್ರಧಾನಿ ಮೋದಿ ಅವರನ್ನು ಕೇಳುತ್ತಾರೋ ಎನ್ನುವ ಭಯದಿಂದ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಟೀಕಿಸಿದ್ದಾರೆ. 

ಉದ್ಘಾಟನಾ ಸಮಾರಂಭದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಭದ್ರತೆ ಏರ್ಪಡಿಸಲಾಗಿತ್ತು. 

Trending News