AAP ಹಾಗೂ ನಿಷೇಧಿತ Sikhs For Justice ನಡುವಿನ ಆಪಾದಿತ ಸಂಬಂಧಗಳ ತನಿಖೆ ನಡೆಸಲಾಗುವುದು: ಅಮಿತ್ ಶಾ

AAP-SFJ Alleged Link! ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರು ಇತ್ತೀಚೆಗೆ ಕುಮಾರ್ ವಿಶ್ವಾಸ್ ಹೇಳಿಕೆಯ ಬಗ್ಗೆ ನ್ಯಾಯಯುತ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.  

Written by - Nitin Tabib | Last Updated : Feb 18, 2022, 10:35 PM IST
  • ಎಎಪಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು
  • ಸಿಎಂ ಚನ್ನಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ
  • ತನಿಖೆ ನಡೆಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ
AAP ಹಾಗೂ ನಿಷೇಧಿತ Sikhs For Justice ನಡುವಿನ ಆಪಾದಿತ ಸಂಬಂಧಗಳ ತನಿಖೆ ನಡೆಸಲಾಗುವುದು: ಅಮಿತ್ ಶಾ title=
AAP-SFJ Alleged Link! (File Photo)

ನವದೆಹಲಿ: AAP-SFJ Alleged Link! ಆಮ್ ಆದ್ಮಿ ಪಕ್ಷ (Aam Admi Party) ಮತ್ತು ಸಿಖ್ಸ್ ಫಾರ್ ಜಸ್ಟಿಸ್ (Sikhas For Justice) ನಂಟುಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Charanjit Singh Channi) ಪ್ರಧಾನಿ ಮೋದಿಗೆ (PM Modi) ಪತ್ರ ಬರೆದಿದ್ದಾರೆ. ಚನ್ನಿ ಅವರ ಪತ್ರಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅಮಿತ್ ಶಾ (Amit Shah), ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ನಂಟಿನ ಆರೋಪದ ತಾವೇ ಖುದ್ದಾಗಿ ತನಿಖೆಗೆ ಆದೇಶಿಸುವುದಾಗಿ ಅವರು ಹೇಳಿದ್ದಾರೆ.
ಪ್ರಧಾನಿಯವರಿಂದ ತನಿಖೆಗೆ ಆಗ್ರಹಿಸಿದ್ದ ಚನ್ನಿ

ಈ ಕುರಿತು ಗುರುವಾರ ಟ್ವೀಟ್ ಮಾಡಿದ್ದ ಪಂಜಾಬ್ ಸಿಎಂ ಚನ್ನಿ, 'ಪಂಜಾಬ್ ಸಿಎಂ ಆಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಇತ್ತೀಚೆಗೆ ಕುಮಾರ್ ವಿಶ್ವಾಸ್ (Kumar Vishwas) ಹೇಳಿದ ಬಗ್ಗೆ ನ್ಯಾಯಯುತ ತನಿಖೆ ನಡೆಸುವಂತೆ ವಿನಂತಿಸುತ್ತೇನೆ. ರಾಜಕೀಯವನ್ನು ಬದಿಗಿಟ್ಟು, ಪ್ರತ್ಯೇಕತಾವಾದದ ವಿರುದ್ಧ ಹೋರಾಡುವಾಗ ಪಂಜಾಬ್‌ನ ಜನರು ಭಾರಿ ಬೆಲೆ ತೆತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬ ಪಂಜಾಬಿಯ ಕಳವಳ ಇದಾಗಿದ್ದು ಪ್ರಧಾನಿ ಅದನ್ನು ಪರಿಹರಿಸಬೇಕು ಎಂದು ಅವರು ಕೋರಿದ್ದರು.

ಇದನ್ನೂ ಓದಿ-Russia-Ukraine Crisis: ಉಕ್ರೇನ್ ವಿರುದ್ಧ ರಷ್ಯಾದ 'ರಾಸಾಯನಿಕ ಸಂಚು'? US ಹೇಳಿದ್ದೇನು?

ಇಂದು ಸಿಎಂ ಚನ್ನಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ರಾಜಕೀಯ ಪಕ್ಷವು ದೇಶ ವಿರೋಧಿ, ಪ್ರತ್ಯೇಕತಾವಾದಿ ಮತ್ತು ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಹೊಂದುವುದು ಮತ್ತು ಚುನಾವಣೆಯಲ್ಲಿ ಸಹಕಾರ ಪಡೆಯುವುದು, ದೇಶದ ಸಮಗ್ರತೆಯ ದೃಷ್ಟಿಯಿಂದ ತುಂಬಾ ಗಂಭೀರವಾಗಿದೆ. ಇಂತಹ ತತ್ವಗಳ ಅಜೆಂಡಾ ದೇಶದ ಶತ್ರುಗಳ ಕಾರ್ಯಸೂಚಿಗಿಂತ ಭಿನ್ನವಾಗಿಲ್ಲ. ಇಂತವರು ಪಂಜಾಬ್ ಮತ್ತು ದೇಶವನ್ನು ಒಡೆಯಲು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸುವ ಹಂತಕ್ಕೆ ಹೋಗುವುದು ಅತ್ಯಂತ ಖಂಡನೀಯ' ಎಂದು ಹೇಳಿದ್ದಾರೆ.

ಇದನ್ನೂ ಓದಿ-Good News: ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ World Bank ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಮೋದಿ ಸರ್ಕಾರ

ದೇಶದ ಅಖಂಡತೆ ಮತ್ತು ಐಕ್ಯತೆಯ ಜೊತೆಗೆ ಚಲ್ಲಾಟವಾಡುವ ಹಕ್ಕು ಯಾರಿಗೂ ಇಲ್ಲ
'ಈ  ವಿಷಯದಲ್ಲಿ ದೇಶದ ಏಕತೆ ಮತ್ತು ಸಮಗ್ರತೆಯೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ನಾನೇ ವಿಷಯವನ್ನು ಆಳವಾಗಿ ಪರಿಶೀಲಿಸುತ್ತೇನೆ' ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ-'ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ', ಹೈಕೋರ್ಟ್ ನಲ್ಲಿ ವಾದ ಮಂಡಿಸಿದ ರಾಜ್ಯ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News