ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿಯಲ್ಲಿ ಅಭ್ಯರ್ಥಿಗಳ ಘೋಷಣೆ-ಎಎಪಿ

ಜನವರಿಯ ಮಧ್ಯದಲ್ಲಿ ಸಂಸತ್ತಿನ ಮೇಲ್ಮನೆಯ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಎಎಪಿಯೊಳಗೆ ಅನೇಕ ಆಕಾಂಕ್ಷೆಗಳಿದ್ದಾರೆ.   

Last Updated : Dec 17, 2017, 08:31 PM IST
ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿಯಲ್ಲಿ ಅಭ್ಯರ್ಥಿಗಳ ಘೋಷಣೆ-ಎಎಪಿ title=

ನವದೆಹಲಿ : ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿ ಮೊದಲ ವಾರದಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಅಭ್ಯರ್ಥಿಗಳನ್ನು ನಿರ್ಧರಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಪಕ್ಷವು ಹೊಸ ಮುಖಗಳ ಹುಡುಕಾಟದಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ. 

ಜನವರಿಯ ಮಧ್ಯದಲ್ಲಿ ಸಂಸತ್ತಿನ ಮೇಲ್ಮನೆಯ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಎಎಪಿಯೊಳಗೆ ಅನೇಕ ಆಕಾಂಕ್ಷೆಗಳಿದ್ದಾರೆ. 

ಹಾಗಿದ್ದು, ಪಕ್ಷವು ಹೊರಗಿನ ಅಭ್ಯರ್ಥಿಗಳನ್ನು ಹುಡುಕುತ್ತಿರುವುಡು ಪಕ್ಷದ ಕಾರ್ಯಕರ್ತರಲ್ಲಿ ಕಹಿ ಭಾವನೆ ಸೃಷ್ಟಿಸೈಡ್. ಇದು ಅಭ್ಯರ್ಥಿಗಳ ಘೋಷಣೆಯಲ್ಲಿ ವಿಲಮ್ಬವಾಗಲೂ ಕಾರಣವಾಗಿದೆ. 

ಪಕ್ಷದ ಹಿರಿಯ ನಾಯಕ ಕುಮಾರ್ ವಿಶ್ವಾಸ್ ಈ ಮೊದಲು ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಅವರು ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಆದಾಗ್ಯೂ, ಅವರನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಹೋಲಿಸಿದರೆ, ಅವರನ್ನು ಪಕ್ಷದಿಂದ ರಾಜ್ಯ ಸಭೆಗೆ ಕಳುಹಿಸುವ ಸಾಧ್ಯತೆ ಕಡಿಮೆಯಿದೆ.

ಪಕ್ಷವು ತನ್ನದೇ ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಕಳುಹಿಸಲು ಆಯ್ಕೆಮಾಡುವುದಾದರೆ ಅವರಲ್ಲದೆ, ಅಶೋಥೋಷ್, ಸಂಜಯ್ ಸಿಂಗ್, ಈ ಇಬ್ಬರು ಅಭ್ಯರ್ಥಿಗಳಾಗಿದ್ದಾರೆ.

ಆದರೆ "ನಾವು ಸಂಸ್ಥೆಯ ಹೊರಗಿನ ಕಾನೂನು, ಅರ್ಥಶಾಸ್ತ್ರ ಮತ್ತು ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ತೊಡಗಿರುವ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ'' ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಅಕ್ಟೋಬರ್ನಲ್ಲಿ ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರನ್ನು ಪಕ್ಷವು ಭೇಟಿ ಮಾಡಿತ್ತು, ಆದರೆ ಅವರು ಈ ಪ್ರಸ್ತಾಪವನ್ನು ನಿರಾಕರಿಸಿದರು. ಪಕ್ಷದ ಆಂತರಿಕ ಪೈಪೋಟಿಯನ್ನು ಅಂತ್ಯಗೊಳಿಸುವ ಪ್ರಯತ್ನವಾಗಿ ರಾಜ್ಯಸಭೆಗೆ ಪಕ್ಷದ ಯಾವುದೇ ನಾಯಕನನ್ನು ನೇಮಿಸಬಾರದೆಂಬ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. 

Trending News