ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನಕ್ಕಾಗಿ 10 ಲಕ್ಷ ಪತ್ರ ಪ್ರಧಾನಿಗೆ ರವಾನಿಸಲು ಮುಂದಾದ ಆಪ್ ಪಕ್ಷ

ಗೋಪಾಲ್ ರಾಯ್ ನೇತೃತ್ವದ ಎಎಪಿ ಶಾಸಕರು ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ದೆಹಲಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ 10 ಲಕ್ಷಕ್ಕೂ ಹೆಚ್ಚಿನ ಮನವಿ ಪತ್ರಗಳನ್ನು ಸಲ್ಲಿಸಲಿದ್ದಾರೆ.

Last Updated : Aug 27, 2018, 05:53 PM IST
ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನಕ್ಕಾಗಿ 10 ಲಕ್ಷ ಪತ್ರ ಪ್ರಧಾನಿಗೆ ರವಾನಿಸಲು ಮುಂದಾದ ಆಪ್ ಪಕ್ಷ   title=

ನವದೆಹಲಿ: ಗೋಪಾಲ್ ರಾಯ್ ನೇತೃತ್ವದ ಎಎಪಿ ಶಾಸಕರು ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ದೆಹಲಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ 10 ಲಕ್ಷಕ್ಕೂ ಹೆಚ್ಚಿನ ಮನವಿ ಪತ್ರಗಳನ್ನು ಸಲ್ಲಿಸಲಿದ್ದಾರೆ.

ದೆಹಲಿಗೆ ರಾಜ್ಯದ ಸ್ಥಾನಮಾನವನ್ನು ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಜುಲೈನಲ್ಲಿ ಸಹಿ ಪ್ರಚಾರವನ್ನು ಆರಂಭಿಸಿತ್ತು.ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಶಾಸಕರು ಮತ್ತು ಇತರ ಪಕ್ಷದ ಮುಖಂಡರು ಪತ್ರಗಳನ್ನು  ಪ್ರಧಾನಿಗೆ ಸಲ್ಲಿಸುವ ವಿಚಾರವಾಗಿ ಕೂಡಿದ್ದರು. 

ಸಹಿ ಸಂಗ್ರಹದ ಬಗ್ಗೆ ಮಾತನಾಡಿದ ಎಎಪ್ ಸಂಚಾಲಕ ಗೋಪಾಲ್ ರೈ "ದೆಹಲಿಯ ಜನರು ತಮ್ಮ ಸ್ವಂತ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಮಲ ತಾಯಿ ಧೋರಣೆಯನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ನಾವು ಜುಲೈ1 ರಂದು ನಾವು ಸಂಪೂರ್ಣ ರಾಜ್ಯದ ಸ್ಥಾನವನ್ನು ಸಿಗಲು ಪ್ರಚಾರವನ್ನು ಪ್ರಾರಂಭಿಸಿದ್ದೇವೆ ಮತ್ತು ಅದರ ಭಾಗವಾಗಿ ನಾವು ಪ್ರಧಾನ ಮಂತ್ರಿಯವರಿಗೆ ಪತ್ರಗಳನ್ನು ತಲುಪಿಸಲು ಸಹಿ ಅಭಿಯಾನವನ್ನು ಆರಂಭಿಸಿದ್ದೇವೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸ್ವೀಕರಿಸಿವೆ ಅವರು ತಿಳಿಸಿದರು.

ದೆಹಲಿಗೆ ಸಂಪೂರ್ಣ ರಾಜ್ಯಕ್ಕೆ ಬೇಡಿಕೆಯ ಬಗ್ಗೆ ಚರ್ಚಿಸಲು ದೆಹಲಿ ವಿಧಾನಸಭೆಯ ವಿಶೇಷ ಮೂರು ದಿನಗಳ ಅಧಿವೇಶನವನ್ನು ಜೂನ್ನಲ್ಲಿ ನಡೆಸಲಾಯಿತು. ಈ ವಿಚಾರವಾಗಿ ಎಎಪಿ ಬಹುಮತದ ವಿಧಾನಸಭೆ ನಿರ್ಣಯವನ್ನು ಜಾರಿಗೆ ತಂದಿದೆ.

Trending News