ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಭಿಲಾಷ ಕುಮಾರಿ

ನ್ಯಾಯಮೂರ್ತಿ ಅಭಿಲಾಷಾ ಕುಮಾರಿ ಅವರು ಮಣಿಪುರ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

Updated: Feb 9, 2018 , 02:45 PM IST
ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಭಿಲಾಷ ಕುಮಾರಿ

ಇಂಫಾಲ್ (ಮಣಿಪುರ) : ನ್ಯಾಯಮೂರ್ತಿ ಅಭಿಲಾಷಾ ಕುಮಾರಿ ಅವರು ಮಣಿಪುರ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

ಮಣಿಪುರ ಗವರ್ನರ್ ನಜ್ಮಾ ಹೆಪ್ಪುಲ್ಲಾ ಅವರು ಪ್ರಮಾಣ ವಚನ ಬೋಧಿಸಿದರು. 

 ಗುಜರಾತ್ ಹೈಕೋರ್ಟ್ನಿಂದ ವರ್ಗಾವಣೆಗೊಂಡಿದ್ದ ನ್ಯಾಯಮೂರ್ತಿ ಅಭಿಲಾಷ ಕುಮಾರಿ ಅವರಿಗೆ ಮಂಗಳವಾರ ಉನ್ನತ ಸ್ಥಾನ ನೀಡಲಾಗಿತ್ತು. ಹಿಮಾಚಲ ಪ್ರದೇಶದ ನಿವಾಸಿಯಾದ ಜಸ್ಟಿಸ್ ಕುಮಾರಿ, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರಿಯಾಗಿದ್ದಾರೆ. 

ದೆಹಲಿ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿರುವ ನ್ಯಾಯಮೂರ್ತಿ ಕುಮಾರಿ ಅವರು ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದಿದ್ದಾರೆ. 

ಅವರು ಹಿಮಾಚಲ ಪ್ರದೇಶ ಹೈಕೋರ್ಟ್ನಲ್ಲಿ ಕಾರ್ಯನಿರ್ವಹಿಸಿದರು. ಡಿಸೆಂಬರ್ 2005 ರಲ್ಲಿ ಗುಜರಾತ್ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು, ಹಿಮಾಚಲ ಪ್ರದೇಶದ ಹೆಚ್ಚುವರಿ ವಕೀಲರಾಗಿ ನೇಮಕಗೊಂಡಿದ್ದರು. 

ANI 

By continuing to use the site, you agree to the use of cookies. You can find out more by clicking this link

Close