ಹಿರಿಯ ಮರಾಠಿ ರಂಗಭೂಮಿ ನಟ ಕಿಶೋರ್ ಪ್ರಧಾನ್ ನಿಧನ

ಹಿರಿಯ ನಟ ಕಿಶೋರ್ ಪ್ರಧಾನ್( 86)ಶುಕ್ರವಾರದಂದು ನಿಧನರಾಗಿದ್ದಾರೆ. ಮರಾಠಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರಗಳಿಂದ ಖ್ಯಾತಿ ಪಡೆದಿದ್ದರು.

Last Updated : Jan 12, 2019, 02:04 PM IST
ಹಿರಿಯ ಮರಾಠಿ ರಂಗಭೂಮಿ ನಟ ಕಿಶೋರ್ ಪ್ರಧಾನ್ ನಿಧನ  title=
Photo Credits: Youtube

ನವದೆಹಲಿ: ಹಿರಿಯ ನಟ ಕಿಶೋರ್ ಪ್ರಧಾನ್( 86)ಶುಕ್ರವಾರದಂದು ನಿಧನರಾಗಿದ್ದಾರೆ. ಮರಾಠಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರಗಳಿಂದ ಖ್ಯಾತಿ ಪಡೆದಿದ್ದರು.

ಇವರ ನಿಧಾನಕ್ಕೆ ಪ್ರಸಿದ್ಧ ಮರಾಠಿ ಲೇಖಕ ಮತ್ತು ಕವಿ, ಶ್ರೀ ಚಂದ್ರಶೇಖರ್ ಗೋಖಲೆ ಸಹ ಫೇಸ್ಬುಕ್ ನಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಜಾನಿ ವಾಕರ್ ಮತ್ತು ಜಗ್ಡಿಪ್ ಅವರ ಹಾಗೆ ಮಿಮಿಕ್ರಿ ಮಾಡುತ್ತಿದ್ದ ಕಿಶೋರ್ ಪ್ರಧಾನ್ ಪ್ರತಿಭೆಯನ್ನು ನೆನಪಿಸಿಕೊಂಡಿದ್ದಾರೆ.

ಕಿಶೋರ್ ಪ್ರಧಾನ್ ಕೊನೆಯ ಬಾರಿಗೆ ಮರಾಠಿ ಚಿತ್ರವಾದ ಸುಬ್ ಲಗ್ನಾ ಸವಧನ್ ನಲ್ಲಿ ಕಾಣಿಸಿಕೊಂಡಿದ್ದರು. ಮಹೇಶ್ ಮಂಜ್ರೇಕರ್ ಅವರ ಲಾಲ್ಬಾಗ್ ಪ್ಯಾರೆಲ್ ಮತ್ತು ಸಂತೋಷ್ ಮಂಜ್ರೇಕರ್ ಅವರ ಶಿವಾಜಿ ರಾಜೇ ಬೋನ್ಸೆಲ್ ಬೋಲ್ಟಿಯಲ್ಲಿನ ಅಭಿನಯವು ಚಿತ್ರ ಮಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದಿತ್ತು.

ಕಿಶೋರ್ ಪ್ರಧಾನ್ 100 ಕ್ಕೂ ಹೆಚ್ಚು ಮರಾಠಿ ನಾಟಕ ನಾಟಕಗಳಲ್ಲಿ ಮತ್ತು 18 ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದಾರೆ. ನಾಗ್ಪುರದ ಮೋರಿಸ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು.ಜಬ್ ವಿ ಮೆಟ್, ಲಗೇ ರಹೋ ಮುನ್ನಾಭಾಯ್ ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

Trending News