ಮೋದಿಜಿ ನೀವು ಪ್ರಧಾನ ಮಂತ್ರಿಯಾಗಿರುವುದು ಭಾರತಕ್ಕೋ ಅಥವಾ ಗುಜರಾತಿಗೋ?- ಕಮಲನಾಥ್ ಪ್ರಶ್ನೆ

ಭಾರಿ ಮಳೆಯಿಂದಾಗಿ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಗುಡುಗು ಸಿಡಿಲಿನಿಂದಾಗಿ ಮೃತಪಟ್ಟಿದ್ದಾರೆ. ಆದರೆ ಪ್ರಧಾನಿ ಮೋದಿ ಟ್ವೀಟ್ ಮೂಲಕ  ಕೇವಲ ಗುಜರಾತಿನಲ್ಲಿ ಮೃತಪಟ್ಟಿರುವವರಿಗಾಗಿ ಸಂತಾಪ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Apr 17, 2019, 03:30 PM IST
ಮೋದಿಜಿ ನೀವು ಪ್ರಧಾನ ಮಂತ್ರಿಯಾಗಿರುವುದು ಭಾರತಕ್ಕೋ ಅಥವಾ ಗುಜರಾತಿಗೋ?-  ಕಮಲನಾಥ್ ಪ್ರಶ್ನೆ  title=

ನವದೆಹಲಿ: ಭಾರಿ ಮಳೆಯಿಂದಾಗಿ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಗುಡುಗು ಸಿಡಿಲಿನಿಂದಾಗಿ ಮೃತಪಟ್ಟಿದ್ದಾರೆ. ಆದರೆ ಪ್ರಧಾನಿ ಮೋದಿ ಟ್ವೀಟ್ ಮೂಲಕ  ಕೇವಲ ಗುಜರಾತಿನಲ್ಲಿ ಮೃತಪಟ್ಟಿರುವವರಿಗಾಗಿ ಸಂತಾಪ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ 34 ಜನರು ಮೃತಪಟ್ಟಿದ್ದರು. ಈ ಹಿನ್ನಲೆ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿ ಗುಜರಾತ್ ವಿವಿಧ ಭಾಗಗಳಲ್ಲಿ ಸುರಿದ ಅನಿಯಮಿತ ಮಳೆಯಲ್ಲಿ ಮೃತಪಟ್ಟವರಿಗೆ ಪ್ರಧಾನ ಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿ ರಿಂದ 2 ಲಕ್ಷ ಮಾಜಿ ಗೌರವ  ಧನ ಮತ್ತು ಗಾಯಗೊಂಡವರಿಗೆ 50 ಸಾವಿರ ರೂ.ನ್ನು ಅನುಮೋಧಿಸಲಾಗಿದೆ 'ಎಂದು ಪಿಎಂಒ ಟ್ವೀಟ್ ಮಾಡಿದೆ.

ಇದಕ್ಕೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ  ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ " ಮೋದಿ ನೀವು ಭಾರತದ ಪ್ರಧಾನಮಂತ್ರಿಯೇ ಹೊರತು ಗುಜರಾತಿನ ಪ್ರಧಾನಮಂತ್ರಿಯಲ್ಲ.10 ಕ್ಕೂ ಅಧಿಕ ಜನರು ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದಾರೆ.ಆದರೆ ನಿಮ್ಮ ಸಂತಾಪ ಕೇವಲ ಗುಜರಾತಿಗೆ ಸೀಮಿತವಾಗಿದೆ.ನಿಮ್ಮ ಪಕ್ಷ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿ ಇರದೇ ಇರಬಹುದು ಆದರೆ ಇಲ್ಲಿಯೂ ಜನರು ಬದುಕುತ್ತಿದ್ದಾರೆ ಎಂದು  ಟ್ವೀಟ್ ಮಾಡಿದ್ದಾರೆ.

ಅಚ್ಚರಿ ಎಂದರೆ ಈ ಟ್ವೀಟ್ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿ ಉಳಿದ ರಾಜ್ಯಗಳಲ್ಲಿ ಆಗಿರುವ ಹಾನಿಗೆ ಕೇಂದ್ರ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

Trending News