ರೂಪಾಯಿ ಮೌಲ್ಯ ಕುಸಿತಕ್ಕೆ ಚಿಂತಿಸುವ ಅಗತ್ಯವಿಲ್ಲವೆಂದ ಹಣಕಾಸು ಸಚಿವರು!

ಡಾಲರ್ ಮೌಲ್ಯದ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದೆ.ಆದರೆ ಹಣಕಾಸು ಸಚಿವರಾದ  ಅರುಣ್ ಜೈಟ್ಲಿ ಮಾತ್ರ ಚಿಂತೆ ಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.ಹಾಗಾದರೆ ಅವರು ನೀಡಿರುವ ಕಾರಣಗಳೇನು ಗೊತ್ತೇ?

Last Updated : Sep 6, 2018, 08:18 PM IST
 ರೂಪಾಯಿ ಮೌಲ್ಯ ಕುಸಿತಕ್ಕೆ ಚಿಂತಿಸುವ ಅಗತ್ಯವಿಲ್ಲವೆಂದ ಹಣಕಾಸು ಸಚಿವರು! title=

ನವದೆಹಲಿ: ಡಾಲರ್ ಮೌಲ್ಯದ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದೆ.ಆದರೆ ಹಣಕಾಸು ಸಚಿವರಾದ  ಅರುಣ್ ಜೈಟ್ಲಿ ಮಾತ್ರ ಚಿಂತೆ ಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.ಹಾಗಾದರೆ ಅವರು ನೀಡಿರುವ ಕಾರಣಗಳೇನು ಗೊತ್ತೇ?

ರೂಪಾಯಿ ಈಗ ಡಾಲರ್ ಎದುರು 71.97 ತಲುಪಿದೆ.ಈಗ ಇದಕ್ಕೆ ಜೈಟ್ಲಿ  ಕಾರಣ ನೀಡುತ್ತಾ" ನೀವು ದೇಶಿಯ ಮಾತು ಜಾಗತಿಕ ಚಿತ್ರಣವನ್ನು ನೋಡಿ, ಇದಕ್ಕೆ ದೇಶಿಯವಾಗಿ ಯಾವುದೇ ಕಾರಣವಿಲ್ಲ ಬದಲಾಗಿ ಜಾಗತಿಕ ಕಾರಣದಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ" ಎಂದು ತಿಳಿಸಿದರು. 

ಇನ್ನು ಮುಂದುವರೆದು"ಈ ಏರಿಳಿತ ಖಂಡಿತವಾಗಿಯೂ ಇಳಿಯುತ್ತದೆ.ಕರೆನ್ಸಿ ನಿರ್ವಹಣೆಯನ್ನು ಆರ್ ಬಿಐ ನಿರ್ವಹಿಸುತ್ತದೆ.ಇದಕ್ಕಾಗಿ ಅದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.ಆದ್ದರಿಂದ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಚಿಂತಿಸುವ ಅಗತ್ಯವಿಲ್ಲವೆಂದು ಅವರು ತಿಳಿಸಿದರು.

ಇತ್ತೀಚಿಗೆ ಡಾಲರ್ ಮತ್ತು ಪೆಟ್ರೋಲ್ ಬೆಲೆ ಏರಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರವನ್ನು ಟೀಕಿಸುತ್ತಾ ಸದ್ಯದಲ್ಲೇ ಪೆಟ್ರೋಲ್ ಮತ್ತು ಡಿಸೇಲ್ ದರಗಳು ಶತಕವನ್ನು ಬಾರಿಸಲಿವೆ ಎಂದು  ವ್ಯಂಗವಾಡಿದ್ದರು.

   

Trending News