ಕಾಂಗ್ರೆಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅರವಿಂದ್ ಕೇಜ್ರಿವಾಲ್..!

ಸೂರತ್ ನಗರ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಗೆಲುವು ಗುಜರಾತಿನಲ್ಲಿ ಹೊಸ ರಾಜಕಾರಣದ ಆರಂಭದ ಗುರುತಾಗಿದೆ.ಈಗ ಗೆಲುವು ಸಾಧಿಸಿರುವ ಪ್ರತಿಯೊಬ್ಬ ಅಭ್ಯರ್ಥಿಗಳು ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Last Updated : Feb 24, 2021, 05:53 PM IST
ಕಾಂಗ್ರೆಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅರವಿಂದ್ ಕೇಜ್ರಿವಾಲ್..! title=
file photo

ನವದೆಹಲಿ: ಸೂರತ್ ನಗರ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಗೆಲುವು ಗುಜರಾತಿನಲ್ಲಿ ಹೊಸ ರಾಜಕಾರಣದ ಆರಂಭದ ಗುರುತಾಗಿದೆ.ಈಗ ಗೆಲುವು ಸಾಧಿಸಿರುವ ಪ್ರತಿಯೊಬ್ಬ ಅಭ್ಯರ್ಥಿಗಳು ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ರಾಜ್ಯದ ಜನರ ಸಹಭಾಗಿತ್ವದಲ್ಲಿ ಗುಜರಾತ್ ಅನ್ನು ಸುಧಾರಿಸುವುದಾಗಿ ಪ್ರತಿಜ್ಞೆ ಮಾಡಿದರು.ಎಎಪಿ ಸೂರತ್ ನಲ್ಲಿ 27 ಸ್ಥಾನಗಳನ್ನು ಗಳಿಸಿತು, ನಗರ ಪುರಸಭೆಯ ನಿಗಮಗಳಲ್ಲಿ ಕಾಂಗ್ರೆಸ್ ಅನ್ನು ಪ್ರಮುಖ ವಿರೋಧ ಪಕ್ಷವಾಗಿ ಬದಲಾಯಿಸಿತು.

ಇದನ್ನೂ ಓದಿ: 'ಇಡೀ ದೇಶವೇ ರೈತರ ಬೆಂಬಲಕ್ಕೆ ನಿಂತಿರುವಾಗ ನೀವೇಗೆ ದಾಳಿ ಮಾಡುತ್ತೀರಿ?'

ತಮ್ಮ ಪಕ್ಷದ ಕಾರ್ಯಕ್ಷಮತೆಯ ಸಂತಸ ವ್ಯಕ್ತಪಡಿಸಿರುವ ಕೇಜ್ರಿವಾಲ್ (Arvind Kejriwal), "ಸೂರತ್‌ನ ಜನರು ಎಎಪಿಗೆ ಮುಖ್ಯ ಪ್ರತಿಪಕ್ಷದ ಜವಾಬ್ದಾರಿಯನ್ನು ನೀಡಲು 125 ವರ್ಷಗಳ ಹಳೆಯ ಪಕ್ಷವಾದ ಕಾಂಗ್ರೆಸ್ ಅನ್ನು ಸೋಲಿಸಿದ್ದಾರೆ. ನಮ್ಮ ಅಭ್ಯರ್ಥಿಗಳು ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾರೆ' ಎಂದು ಹೇಳಿದರು.ಭಾನುವಾರ ಮತ ಚಲಾಯಿಸಿದ 576 ಸ್ಥಾನಗಳಲ್ಲಿ ಬಿಜೆಪಿ 483 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ 55 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಎಎಪಿ, ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ, 27 ಗೆದ್ದಿದೆ.2015 ರಲ್ಲಿ ಬಿಜೆಪಿ ಈ ಪೈಕಿ 391 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 174 ಸ್ಥಾನಗಳನ್ನು ಗಳಿಸಿತು.

ಇದನ್ನೂ ಓದಿ:​ ಸಿಎಂ ಅರವಿಂದ್ ಕೇಜ್ರಿವಾಲ್ ಈಗ ಹೊಸ ಊಸರವಳ್ಳಿ-ಮೀನಾಕ್ಷಿ ಲೇಖಿ

ಪಟೇಲ್ ಸಮುದಾಯದ ಸಂಘಟನೆಯಾದ ಪಾಟಿದರ್ ಅನಮತ್ ಆರಾಕ್ಷನ್ ಸಮಿತಿ (ಪಿಎಎಎಸ್) ಈ ಬಾರಿ ಸೂರತ್‌ನಲ್ಲಿ ಕಾಂಗ್ರೆಸ್ ಅನ್ನು ಬಹಿಷ್ಕರಿಸಿದೆ.ಎಎಪಿ ಇದರ ಲಾಭವನ್ನು ಪಡೆದುಕೊಂಡು ಜಾತಿಗೆ ಸೇರಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News