ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿದ ಅಶುತೋಷ್

ಪ್ರತಿ ಪ್ರಯಾಣಕ್ಕೂ ಅಂತ್ಯವಿದೆ. ಆಪ್ ನೊಂದಿಗಿನ ನನ್ನ ಸುಂದರವಾದ ಮತ್ತು ಕ್ರಾಂತಿಕಾರಕವಾದ ಸಹಯೋಗವು ಅಂತ್ಯಗೊಂಡಿದೆ- ಅಶುತೋಷ್

Last Updated : Aug 15, 2018, 02:34 PM IST
ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿದ ಅಶುತೋಷ್ title=

ನವದೆಹಲಿ: ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಅಶುತೋಷ್ AAP ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಇದರಿಂದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.

ಪ್ರತಿ ಪ್ರಯಾಣಕ್ಕೂ ಅಂತ್ಯವಿದೆ. ಆಪ್ ನೊಂದಿಗಿನ ನನ್ನ ಸುಂದರವಾದ ಮತ್ತು ಕ್ರಾಂತಿಕಾರಕವಾದ ಸಹಯೋಗವು ಅಂತ್ಯಗೊಂಡಿದೆ. ನಾನು ಪಕ್ಷದಿಂದ ರಾಜೀನಾಮೆ ನೀಡಿದ್ದೇನೆ. ಅದನ್ನು ಪಕ್ಷ ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಬಹಳ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದು, ಪಕ್ಷದಲ್ಲಿ ನನಗೆ ಸಹಕರಿಸಿ, ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅಶುತೋಷ್ ತಮ್ಮ ರಾಜೀನಾಮೆ ಕುರಿತು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ಮೂಲಕ ತನ್ನ ಖಾಸಗಿ ವಿಚಾರವನ್ನು ಗೌರವಿಸುವಂತೆ ಮಾಧ್ಯಮಗಳಿಗೆ ಮನವಿ  ಮಾಡಿರುವ ಅಶುತೋಷ್, ಮಾಧ್ಯಮ ಸ್ನೇಹಿತರಿಗೆ. ದಯವಿಟ್ಟು ನನ್ನ ಖಾಸಗಿ ವಿಚಾರವನ್ನು ಗೌರವಿಸಿ. ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ, ದಯವಿಟ್ಟು ಸಹಕರಿಸಿ ಎಂದು ಹೇಳಿದ್ದಾರೆ.

ಪತ್ರಕರ್ತರಾಗಿದ್ದ ಅಶುತೋಷ್ 2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2014 ರ ಲೋಕಸಭೆ ಚುನಾವಣೆಯಲ್ಲಿ ಚಾಂದನಿ ಚೌಕ್ನಿಂದ ಕಾಂಗ್ರೆಸ್ನ ಕಪಿಲ್ ಸಿಬಲ್ ಮತ್ತು ಬಿಜೆಪಿಯ ಹರ್ಷ ವರ್ಧನ್ ವಿರುದ್ಧ ಸ್ಪರ್ಧಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಕ್ಷದ ನಾಯಕ ಅಶುತೋಷ್ ರಾಜೀನಾಮೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ರಾಜೀನಾಮೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, "ನಿಮ್ಮ ರಾಜೀನಾಮೆಯನ್ನು ನಾವು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಇಲ್ಲ, ಈ ಜನ್ಮದಲ್ಲಿ ಸಾಧ್ಯವಿಲ್ಲ" ಎಂದಿದ್ದಾರೆ.

Trending News